Sunday, 28th April 2024

ತೆಲಂಗಾಣ ವಿವಿ ಉಪಕುಲಪತಿ ರವೀಂದರ್ ಗುಪ್ತಾ ಎಸಿಬಿ ಬಲೆಗೆ

ಹೈದರಾಬಾದ್: ತೆಲಂಗಾಣ ವಿಶ್ವವಿದ್ಯಾಲಯದ ಉಪಕುಲಪತಿ ರವೀಂದರ್ ಗುಪ್ತಾ ಎಸಿಬಿ ಬಲೆಗೆ ಬಿದ್ದಿದ್ದಾರೆ. ಶನಿವಾರ ಹೈದರಾಬಾದ್ ನ ಅವರ ನಿವಾಸದಲ್ಲಿ 50 ಸಾವಿರ ರೂ.ಗಳ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು.

ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ವಿಚಕ್ಷಣಾ ಮತ್ತು ಜಾರಿ ಇಲಾಖೆಗಳು ತೆಲಂಗಾಣ ವಿಶ್ವವಿದ್ಯಾಲಯದಲ್ಲಿ ಶೋಧ ನಡೆಸಿವೆ. ಅಕ್ರಮ ನೇಮಕಾತಿಗಳು ಮತ್ತು ಅಕ್ರಮ ವಹಿವಾಟುಗಳು ನಡೆದಿವೆ ಎಂದು ಎಸಿಬಿ ದೃಢಪಡಿಸಿದೆ ಎಂದು ಮೂಲಗಳು ತಿಳಿಸಿದೆ.

ನಿಜಾಮಾಬಾದ್ ಜಿಲ್ಲೆಯ ಡಿಚ್ ಪಲ್ಲಿ ಬಳಿಯ ತೆಲಂಗಾಣ ವಿಶ್ವವಿದ್ಯಾಲ ಯದ ಮೇಲೆ ವಿಚಕ್ಷಣಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಶ್ವವಿದ್ಯಾ ಲಯದ ಆಡಳಿತ ಕಟ್ಟಡದಲ್ಲಿ ಶೋಧ ನಡೆಸಲಾಯಿತು. ಭ್ರಷ್ಟಾಚಾರದ ಆರೋಪದಿಂದಾಗಿ ಈ ಶೋಧಗಳನ್ನು ನಡೆಸಲಾಗಿದೆ ಎಂದು ವಿಚಕ್ಷಣಾ ಮತ್ತು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಕಾಲೇಜು ಕಟ್ಟಡಗಳಲ್ಲಿಯೂ ವಿಚಕ್ಷಣಾ ದಾಳಿಗಳನ್ನು ನಡೆಸಲಾಗಿದ್ದು, ಅಕ್ರಮ ನೇಮಕಾತಿಗಳು ಮತ್ತು ಕಾನೂನುಬಾಹಿರ ವಹಿವಾಟುಗಳು ನಡೆದಿರುವುದರಿಂದ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

error: Content is protected !!