Saturday, 18th May 2024

ರಾಯಲ್​ ಚಾಲೆಂಜರ್ಸ್​-ಗುಜರಾತ್​ ಟೈಟಾನ್ಸ್​ ಇಂದು ಮರುಮುಖಾಮುಖಿ

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಹಾಲಿ ರನ್ನರ್​ಅಪ್​ ಗುಜರಾತ್​ ಟೈಟಾನ್ಸ್​ ತಂಡಗಳು ಐಪಿಎಲ್​-17ರಲ್ಲಿ ಶನಿವಾರ ಮರುಮುಖಾಮುಖಿ ಆಗಲಿವೆ.

ಮತದಾನದಿಂದಾಗಿ 18 ದಿನಗಳಿಂದ ತವರಿನಿಂದ ದೂರವಿದ್ದ ಆರ್​ಸಿಬಿ ಇದೀಗ ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದೆ.

ಕಳೆದ ಭಾನುವಾರವಷ್ಟೇ ಉಭಯ ತಂಡಗಳ ನಡುವೆ ಅಹಮದಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಗೆದ್ದ ವಿಶ್ವಾಸದಲ್ಲಿರುವ ಫಾಫ್​ ಡು ಪ್ಲೆಸಿಸ್​ ಪಡೆ ಅದೇ ಫಲಿತಾಂಶ ಪುನರಾವರ್ತಿಸುವ ಹರುಪಿನಲ್ಲಿದ್ದರೆ, ಗುಜರಾತ್​ ಟೈಟಾನ್ಸ್​ ತಂಡ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ.

ಪ್ಲೇಆ​ ಆಸೆಯನ್ನು ಬಹುತೇಕ ಕೈಚೆಲ್ಲಿರುವ ಆರ್​ಸಿಬಿ ಕಳೆದೆರಡು ಪಂದ್ಯಗಳಲ್ಲಿ ಗೆದ್ದು ಟೂರ್ನಿಯಿಂದ ತನ್ನ ಅಧಿಕೃತ ನಿರ್ಗಮನವನ್ನು ಇನ್ನೂ ಕೆಲ ದಿನಗಳ ಕಾಲ ಮುಂದೂಡಿದೆ. ಇದೀಗ ಗೆಲುವಿನ ಹ್ಯಾಟ್ರಿಕ್​ ಸಾಧಿಸುವದು ಆರ್​ಸಿಬಿ ಛಲವಾಗಿದೆ.

ಗುಜರಾತ್​ ಟೈಟಾನ್ಸ್​ ಆಡಿದ 10 ಪಂದ್ಯಗಳಲ್ಲಿ 4 ಜಯ, 6 ಸೋಲಿನೊಂದಿಗೆ ಪ್ಲೇಆ​ ರೇಸ್​ನಲ್ಲಿ ತೂಗುಯ್ಯಾಲೆಯ ಮೇಲೆ ನಿಂತಿದೆ.

ಸನ್​ರೈಸರ್ಸ್​ ಮತ್ತು ಗುಜರಾತ್​ ವಿರುದ್ಧ ಕಳೆದೆರಡು ಪಂದ್ಯಗಳಲ್ಲಿ ಕಂಡ ಜಯ ಆರ್​ಸಿಬಿ ತಂಡದ ವಿಶ್ವಾಸ ವೃದ್ಧಿಸಿದೆ. ಡೆಲ್ಲಿ ಮತ್ತು ಆರ್​ಸಿಬಿ ವಿರುದ್ಧ 200 ಪ್ಲಸ್​ ಮೊತ್ತ ಪೇರಿಸಿಯೂ ಸೋತಿರುವ ಗುಜರಾತ್​ ತಂಡವೀಗ ಹ್ಯಾಟ್ರಿಕ್​ ಸೋಲಿನ ಭೀತಿಯಲ್ಲಿದೆ.

ಹೀಗಾಗಿ ಪಂದ್ಯ ಮಳೆ ಅಡಚಣೆಗೆ ಒಳಗಾಗುವ ಭೀತಿ ಇದೆ. ಆದರೆ, ಓವರ್​ ಕಡಿತಗೊಂಡರೂ, ಪಂದ್ಯ ಸಂಪೂರ್ಣ ರದ್ದಾಗುವ ಸಾಧ್ಯತೆ ಇಲ್ಲ. ಒಂದು ವೇಳೆ ಪಂದ್ಯ ರದ್ದಾದರೆ ಆರ್​ಸಿಬಿ 1 ಅಂಕ ಹಂಚಿಕೊಂಡರೂ, ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

Leave a Reply

Your email address will not be published. Required fields are marked *

error: Content is protected !!