Thursday, 23rd May 2024

ಎರಡನೇ ಟೆಸ್ಟ ಪಂದ್ಯಕ್ಕೆ ಶಕೀಬ್ ಅಲ್ ಹಸನ್, ವೇಗಿ ಎಬಾಡಟ್ ಹೊಸೈನ್ ಅಲಭ್ಯ

shakib al hasan

ಚಟ್ಟೋಗ್ರಾಮ: ಗಾಯಗೊಂಡಿರುವ ನಾಯಕ ಶಕೀಬ್ ಅಲ್ ಹಸನ್ ಮತ್ತು ವೇಗಿ ಎಬಾಡಟ್ ಹೊಸೈನ್ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.

ಛತ್ತೋಗ್ರಾಮ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇವರಿ ಬ್ಬರೂ ಆಡುತ್ತಿದ್ದರು, ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬರಿಗೂ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಗಾಯದ ಸಮಸ್ಯೆಯಿಂದಾಗಿ ಮಿರ್‌ಪುರದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಇವರಿಬ್ಬರೂ ಅಲಭ್ಯವಾಗಿರುವುದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಎರಡನೇ ಏಕದಿನ ಪಂದ್ಯದ ವೇಳೆ ವೇಗಿ ಉಮ್ರಾನ್ ಮಲಿಕ್ ಬೌಲಿಂಗ್‌ನಲ್ಲಿ ಗಾಯಗೊಂಡಿದ್ದ ಶಕೀಬ್ ಅಲ್ ಹಸನ್, ಪಕ್ಕೆಲುಬು ಮತ್ತು ಭುಜದ ಸಮಸ್ಯೆ ಯಿಂದ ಬಳಲುತ್ತಿದ್ದರೂ ಆಡುವುದನ್ನು ಮುಂದುವರೆಸಿದ್ದರು. ಮೊದಲನೇ ಟೆಸ್ಟ್ ಆರಂಭಕ್ಕೆ ಮುನ್ನಾದಿನ ಅವರು ಆಸ್ಪತ್ರೆಗೂ ಕೂಡ ದಾಖಲಾಗಿದ್ದರು.

ಮೊದಲ ಟೆಸ್ಟ್ ಪಂದ್ಯದಲ್ಲಿ ಈಗಾಗಲೇ ಸೋಲುವ ಭೀತಿ ಹೆದರಿಸುತ್ತಿರುವ ಬಾಂಗ್ಲಾದೇಶ ತಂಡಕ್ಕೆ ಎರಡನೇ ಟೆಸ್ಟ್‌ ಪಂದ್ಯಕ್ಕೆ ಪ್ರಮುಖ ಆಟಗಾರರು ಅಲಭ್ಯವಾಗಿರುವುದು ಸಂಕಷ್ಟಕ್ಕೆ ದೂಡಿದೆ. ಇವರಿಗೆ ಬದಲೀ ಆಟಗಾರರನ್ನು ಬಿಸಿಬಿ ಹೆಸರಿಸುವ ಸಾಧ್ಯತೆ ಇದೆ.ಮೊದಲನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಸೋಲಿನ ಭಯ ಕಾಡುತ್ತಿದೆ. ಭಾರತ ತಂಡ ಮೊದಲನೇ ಇನ್ನಿಂಗ್ಸ್‌ನಲ್ಲಿ 404 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ, ಬಾಂಗ್ಲಾ ದೇಶ ಮೊದಲನೇ ಇನ್ನಿಂಗ್ಸ್‌ನಲ್ಲಿ ಕೇವಲ 150 ರನ್‌ಗಳಿಗೆ ಆಲೌಟ್ ಆಗುವ ಮೂಲಕ, 254 ರನ್‌ಗಳ ಭಾರಿ ಹಿನ್ನಡೆ ಅನುಭವಿಸಿತ್ತು.

ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಕಳೆದುಕೊಂಡು 258 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಒಟ್ಟು 513 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿರುವ ಬಾಂಗ್ಲಾದೇಶ 3ನೇ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 42 ರನ್ ಗಳಿಸಿದೆ. ಇನ್ನೂ ಎರಡು ದಿನಗಳ ಆಟ ಬಾಕಿಯಿದ್ದು, ಬಾಂಗ್ಲಾದೇಶಕ್ಕೆ ಸೋಲಿನ ಭೀತಿ ಎದುರಾಗಿದೆ

error: Content is protected !!