Sunday, 19th May 2024

ಅನಂತಕುಮಾರ್‌ ನೆನೆದು ಕಣ್ಣೀರು ಸುರಿಸಿದ ಕಾಗೇರಿ

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ 94

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಅನಂತ ಕುಮಾರ್ ಗುಣಕಥನ ಕಾರ್ಯಕ್ರಮ

ದಿ. ಅನಂತಕುಮಾರ 62ನೇ ಜನ್ಮದಿನ

ಹಿರಿಯ ನಾಯಕನೊಂದಿಗಿನ ಒಡನಾಟ ಮೆಲುಕು ಹಾಕಿದ ಗಣ್ಯರು

ಬೆಂಗಳೂರು: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅನಂತ ಕುಮಾರ್ ಅವರ ಜತೆಗಿನ ಬಾಂಧವ್ಯ ಹಾಗೂ ಸ್ನೇಹ ಸ್ಮರಿಸಿ ಭಾವುಕರಾಗಿ ಕಣ್ಣೀರಿಟ್ಟರು. ಇನ್ನೂ ಈ ನಾಡಿಗೆ ಅನಂತಕುಮಾರ್ ಅಂತಹ ವ್ಯಕ್ತಿ ಇರಬೇಕಾಗಿತ್ತು. ಅವರಂತೆ ಮತ್ತೊಬ್ಬ ರಾಜಕಾರಣಿಯನ್ನು ಎಂದೂ ಕಾಣಲು ಸಾಧ್ಯವಿಲ್ಲ. ಅವರು
ನಮ್ಮೊಂದಿಗಿಲ್ಲ ಎಂಬುದು ನೋವಿನ ಸಂಗತಿ ಎಂದು ಹೇಳಿದರು.

ಕೇಂದ್ರದ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ದಿವಂಗತ ಅನಂತಕುಮಾರ್ ಅವರ ಜನ್ಮದಿನದ ಅಂಗ ವಾಗಿ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಬುಧವಾರ ’ಅನಂತ ಕುಮಾರ್ ಗುಣಕಥನ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಪ್ರತಾಪ ಸಿಂಹ, ಅದಮ್ಯ ಚೇತನ ಸಂಸ್ಥೆ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಂಸದ ತೇಜಸ್ವಿ ಸೂರ್ಯ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಅನೇಕ ಗಣ್ಯರು ಅನಂತ ಕುಮಾರ್ ಅವರೊಂದಿಗೆ ಕಳೆದ ದಿನಮಾನಗಳನ್ನು ಮೆಲುಕು ಹಾಕಿದರು.

1977ರಲ್ಲಿ ಪಿಯುಸಿ ವಿದ್ಯಾಭ್ಯಾಸಕ್ಕೆ ಧಾರವಾಡದಲ್ಲಿ ಸೇರಿಕೊಂಡಾಗ ಅನಂತಕುಮಾರ್ ಅವರ ಪರಿಚಯ ಆಯಿತು. ವ್ಯಕ್ತಿಗಳನ್ನು ಒಂದುಗೂಡಿಸುವ ಕೌಶಲ ಅವರದು. ಅತ್ಯಂತ ಅರ್ಹ ವ್ಯಕ್ತಿಗಳನ್ನು ಒಗ್ಗೂಡಿಸಿ ರಾಜ್ಯಕ್ಕೆ ಅನುಕೂಲವಾಗುವ ರೀತಿ ತಯಾರಿಸುತ್ತಿದ್ದರು. ಅವರ ಮಾನವೀಯ ಸಂಬಂಧಗಳು ಅನುಕರಣೀಯ. ಅವರ ಕುಟುಂಬವೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಬೆಳೆದಿದ್ದು. ಅವರು ಮಾಡಿರುವ ಕಾರ್ಯಗಳು ಸ್ಮರಣೀಯ ಎಂದರು.

1985 ರಲ್ಲಿ ವಿದ್ಯಾರ್ಥಿ ಪರಿಷತ್ ಪೂರ್ಣಾವಧಿ ಅಧಿಕಾರ ವಹಿಸಿ ನಾನು ಬೆಂಗಳೂರಿಗೆ ಬಂದೆ. ಒಂದು ದಿನ ವಿಧಾನಸೌಧ ಕಟ್ಟೆ ಮೇಲೆ ಕುಳಿತು ಹಲವು ವಿಚಾರಗಳನ್ನು ಮಾತನಾಡಿದೆವು. ಆಗ ಅವರು, ವಿಧಾನಸೌಧದ ಮೂರನೇ ಮಹಡಿಗೆ ಬರಬೇಕು ಎಂದರು. ಅಂದು ಅವರು ಕಂಡಿದ್ದ ಕನಸು ಇಂದು ನನಸಾಗಿದೆ. ಅವರು ನಮಗೆ ಭವಿಷ್ಯದ ಕನಸು ಕಾಣುವ ಹಾಗೂ ಗುರಿಯನ್ನು ಮುಟ್ಟುವ ಮಾರ್ಗದರ್ಶನ ನೀಡುತ್ತಿದ್ದರು ಎಂದು ಸ್ಮರಿಸಿದರು.

ಕೇಂದ್ರದ ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ದಿವಂಗತ ಅನಂತಕುಮಾರ್ ಅವರ ಜನ್ಮದಿನವಾದ ಬುಧವಾರ (ಸೆ. 22) ರಾಜಕೀಯ ನಾಯಕರು
ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ಅವರನ್ನು ಸ್ಮರಿಸಿದ್ದಾರೆ. 2018ರ ನವೆಂಬರ್ 12ರಂದು ನಿಧನರಾಗಿದ್ದ ಅನಂತಕುಮಾರ್ ಅವರು ಸಚಿವರಾಗಿ, ಸಂಸದರಾಗಿ
ಹಾಗೂ ಪಕ್ಷದ ನಾಯಕರಾಗಿ ನೀಡಿದ ಕೊಡುಗೆಗಳನ್ನು ಮೆಲುಕು ಹಾಕಿದರು. ಅವರೊಂದಿಗಿನ ಒಡನಾಟ ನೆನಪಿಸಿಕೊಂಡರು.

***

ನಮ್ಮ ನಡುವೆ ಗೋಡೆ, ಪರದೆ ಇರಲಿಲ್ಲ
ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಮಾತನಾಡಿ, ಅಧಿಕಾರದಲ್ಲಿ ಇಲ್ಲದವರನ್ನು ಸ್ಮರಿಸುವುದು ಅಷ್ಟಕಷ್ಟೆ. ಅಗಲಿದ ಗಣ್ಯರನ್ನು ಮರೆತಿದ್ದೇವೆ. ಅವರನ್ನು ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ನಾನು ಅನಂತಕುಮಾರ್ ಅವರನ್ನು ಹಲವು ಬಾರಿ ಟೀಕೆ ಮಾಡಿದ್ದೆ. ಅವರೂ ನನ್ನ ಬಗ್ಗೆ ಬೇಸರ ಮಾಡಿಕೊಂಡಿದ್ದರು. ನನಂಗತೂ ಅವರ ಬಗ್ಗೆ ಬೇಸರ ಆಗಿಲ್ಲ. ಕೆಲವು ಸಲ ರಾಜಕಾರಣಿಗಳು ತಪ್ಪು ಹೇಳಿದಾಗ ಪತ್ರಕರ್ತರು ತಿಳಿಸಿಬೇಕಾಗಿರುವ ಕರ್ತವ್ಯ. ನಾನು ಅವರ ಜತೆಗೆ ಸುಮಾರು 1982ರಿಂದ ನಿರಂತರವಾಗಿ ಸಂಪರ್ಕದಲ್ಲಿದ್ದೆ. ದೆಹಲಿಯಲ್ಲಿ ನಡೆದ ಘಟನೆ ಚರ್ಚಿಸುತ್ತಿದ್ದರು. ನಮ್ಮ ನಡುವೆ ಗೋಡೆ, ಪರದೆ ಯಾವುದೂ ಇರಲಿಲ್ಲ. ಅವರೊಂದಿಗೆ ಅವಿನಾಭಾವ ಸಂಬಂಧ ಇದ್ದು. ಅವರ ಬಯೋಗ್ರಫಿ ನನಗೆ ಬರೆಯಲು ತಿಳಿಸಿದರು ಎಂದರು. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಬಿಳಿ ತುಪ್ಪಳದ ಟೋಪಿ ಹಾಕಿಸಿದ್ದು ಅನಂತ ಕುಮಾರ್ ಅವರು.

ಕಾಶ್ಮೀರದಿಂದ ತಂದಿದ್ದರು. ನೀವು ಈ ಟೋಪಿ ಹಾಕಿಕೊಳ್ಳಿ ಎಂದಾಗ ಅದನ್ನೇ ಧರಿಸಿದರು. ಗೌರಿ ಲಂಕೇಶ್ ಅವರು ಅನಂತಕುಮಾರ್ ಮನೆಗೆ ಬಂದಾಗ ಜೋರಾಗಿ ಅಳುತ್ತಾ ನಮ್ಮ ತಂದೆಯವರಿಗೆ ಹಿಂಸೆ ಕೊಟ್ಟು ಯಾರೋ ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ. ಬಿಡಿಸಿಕೊಡಿ ಎಂದರು. ಆಗ ಅನಂತಕುಮಾರ್ ಅವರು ನೀವು ಅಲ್ಲಿಗೆ ಹೋಗಿ ನಾನು ಸಹಾಯ ಮಾಡುವೆ ಅಂದರು. ಆಗ ಮಹಾರಾಷ್ಟ್ರದ ಗೃಹ ಸಚಿವ ಗೋಪಿನಾಥ್ ಮುಂಡೆ ಅವರಿಗೆ ಕರೆ ಮಾಡಿದ 24 ಗಂಟೆಯಲ್ಲಿ ಬಿಡುಗಡೆ ಮಾಡಿಸಿದರು. ಮುಂಬೈನಿಂದ ಬೆಂಗಳೂರಿಗೆ ಬರಲು ವಿಮಾನ ವೆಚ್ಚ ಇರಲಿಲ್ಲ. ಈ ವ್ಯವಸ್ಥೆ ಮಾಡಿದರು. ಇದಾದ ಬಳಿಕ ಅನಂತ ಕುಮಾರ್ ಬಗ್ಗೆ ಕೆಟ್ಟದಾಗಿ ಲಂಕೇಶ್ ಅವರು ಅಂಕಣ ಬರೆದರು ಎಂದು ವಿವರಿಸಿದರು.

ನಮ್ಮ ಸ್ನೇಹ ನೂರು ಜನ್ಮದ್ದು
1978ರಿಂದ ಅನಂತಕುಮಾರ್ ಅವರೊಂದಿಗಿನ ಸ್ನೇಹ ಆರಂಭವಾಯಿತು. ಯಾವುದೇ ಸಮಯದಲ್ಲೂ ನಾವಿಬ್ಬರೂ ಬೇರೆ ಎನ್ನುವ ಭಾವನೆ ಇರಲಿಲ್ಲ. ನಮ್ಮಿಬ್ಬರ ಸ್ನೇಹ ನೂರು ಜನ್ಮದ ಸ್ನೇಹ ಎನ್ನುತ್ತಿದ್ದರು. ವಿದ್ಯಾರ್ಥಿ ಪರಿಷತ್‌ನಲ್ಲಿ ಕೆಲಸ ಮಾಡಿದ ಮೇಲೆ ರಾಜಕೀಯಕ್ಕೆ ಬರಲು ಆಸಕ್ತಿ ಇರಲಿಲ್ಲ. ಯಡಿಯೂ ರಪ್ಪ ಹಾಗೂ ಆಡ್ವಾಣಿ ರಾಷ್ಟ್ರದಲ್ಲಿ ಯುವಕರನ್ನು ಬೆಳೆಸಿದ ರೀತಿಯಲ್ಲಿ ಇದೇ ಥರ ರಾಜ್ಯದಲ್ಲಿ ಯುವಕರನ್ನು ರಾಜಕೀಯದಲ್ಲಿ ಬೆಳೆಸುತ್ತಿದ್ದರು. ರಾಜ್ಯದಲ್ಲಿ ವಿದ್ಯಾರ್ಥಿ ಪರಿಷತ್ ಜವಾಬ್ದಾರಿ ತೆಗೆದುಕೊಂಡು ಕಾಳಜಿಯಿಂದ ಕೆಲಸ ಮಾಡಿzರೆ. ಬಿಜೆಪಿ ಜವಾಬ್ದಾರಿ ತೆಗೆದುಕೊಂಡರು ಎಂದರು. ಯುವಕರಲ್ಲಿ ನಾಯಕತ್ವ ಗುಣ ಬೆಳೆಸಿದ ನೇತಾರ. ನಾನು ರಾಜಕೀಯಕ್ಕೆ ಹೋಗಲ್ಲ ಅಂದಾಗ ದೆಹಲಿಗೆ ಕರೆದರು. ಅವರ ಕಚೇರಿಗೆ ಹೋದಾಗ ಸಮಸ್ಯೆಗಳನ್ನು ಹೇಳುತ್ತಿದ್ದರು. ಈ ಮೂಲಕ ನಮ್ಮನ್ನು ಸೆಳೆಯು ತ್ತಿದ್ದರು. ವಾಜಪೇಯಿ ಅವರನ್ನು ಪರಿಚಯಿಸಿದರು. ಅನಂತಕುಮಾರ್ ಅವರ ಕುಟುಂಬದ ಎಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅನಂತಕುಮಾರ್ ಅವರು ಇದ್ದಿದ್ದರೆ ನನ್ನ ಜವಾಬ್ದಾರಿ ತಿಳಿದು ಮಾರ್ಗ ದರ್ಶನ ನೀಡುತ್ತಿದ್ದರು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

ನಾನು ಮಾಡಿದ ಕೆಲಸಗಳಿಗೆ ಪ್ರೇರೇಪಣಾ ಶಕ್ತಿ

2014 ರ ಚುನಾವಣೆಯಿಂದ ಅನಂತಕುಮಾರ್ ಅವರೊಂದಿಗೆ ಒಡನಾಟ ಶುರುವಾಯಿತು. ನಾನು ಸಂಸದನಾಗಿ ಆಯ್ಕೆಯಾಗಲು ಮೈಸೂರಿನಲ್ಲಿ ಪಕ್ಷದ
ಬಲವರ್ಧನೆಗೆ ಅವರು ಶ್ರಮಿಸಿದ್ದು ಮರೆಯಲಾಗದು. ದೆಹಲಿಯಲ್ಲಿ ನನಗೆ ಯಾರೂ ಗೊತ್ತಿರಲಿಲ್ಲ. ಆಗ ಅನಂತಕುಮಾರ್ ಅವರು ದೆಹಲಿ ಸಂಸತ್ ಪರಿಚಯಿಸಿ ದರು. ಹಿರಿಯ ರಾಜಕಾರಣಿಗಳ ಕುರಿತು ಮಾಹಿತಿ ನೀಡಿದರು. ನಾನು ಮಾಡಿದ ಕೆಲಸಗಳಿಗೆ ಪ್ರೇರೇಪಣಾ ಶಕ್ತಿ ಅವರು ಎಂದರು. ದೇಶದಲ್ಲಿ ರಸಗೊಬ್ಬರ ಸಮಸ್ಯೆ ಕೊನೆಯಾಗಲು ಕಾರಣ ಅನಂತಕುಮಾರ್ ಅವರು. ಅನಂತಕುಮಾರ್ ಅವರ ದೆಹಲಿಯಲ್ಲಿನ ಮನೆಯಿಂದ ನನಗೆ ಊಟ ನೀಡುತ್ತಿದ್ದರು. ಅವರ ಮನೆ ಅಕ್ಷಯಪಾತ್ರಾ ಇದ್ದಂತೆ. ಕೇಂದ್ರದಲ್ಲಿ ಅವರ ಹಿಡಿತ ಯಾವುದೇ ರಾಜಕಾರಣಿಯಿಂದ ಸಾಧ್ಯವಿಲ್ಲ.

ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದಾಗ ಇವರು ಮಂಡಿಸಿದ್ದ ಬಿಲ್ ಬಗ್ಗೆ ಯಾವೊಬ್ಬ ಸಂಸದನೂ ವಿರುದ್ಧವಾಗಿ ಮಾತನಾಡುತ್ತಿರಲಿಲ್ಲ. ಬೆಂಗಳೂರಿನಲ್ಲಿ 11 ಸಾವಿರ ಕೋಟಿ ರು. ರಿಂಗ್ ರಸ್ತೆ, ಸಬ್ ಅರ್ಬನ್ ರೈಲು ಬರಲು ಅವರೇ ಕಾರಣ. ಬೆಂಗಳೂರು ಬೆಳವಣಿಗೆಗೆ ಎಸ್.ಎಂ.ಕೃಷ್ಣ ನಂತರ ಪ್ರಗತಿಗೆ ಕಾರಣ ಇವರು ಎಂದು ಪ್ರತಾಪ್ ಸಿಂಹ ಸ್ಮರಿಸಿದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ಅನಂತಕುಮಾರ್ ಅವರು, ಉಮೇಶ್ ಕತ್ತಿ, ಪ್ರಭಾಕರ್ ಕೋರೆ, ಗದ್ದಿ ಗೌಡರ್, ಜಿಗಜಿಣಗಿ, ಉದಾಸಿ ಇಂತಹ ನಾಯಕರನ್ನು ಬಿಜೆಪಿ 2004 ಪಕ್ಷಕ್ಕೆ ಸೆಳೆದು ಸ್ಥಾನಮಾನ ನೀಡಿದರು. ಆಗಿನ ಚುನಾವಣೆಯಲ್ಲಿ 79 ಸೀಟುಗಳು ಗೆಲ್ಲಲು ಅವರೇ ಕಾರಣ ಎಂದು ಮಾಹಿತಿ ನೀಡಿದರು. ಮಂಗಳೂರಿನಲ್ಲಿ ಕಸ್ಟಮ್ಸ್ ಇತ್ಯರ್ಥಪಡಿಸಿ ಗೊಬ್ಬರ ವಿತರಿಸಿದರು. 2015 ರಿಂದ ರೈತರು ಇದುವರೆಗೂ ಗೊಬ್ಬರ ಇಲ್ಲ ಎನ್ನುವಂತಿಲ್ಲ. ಇಷ್ಟೊಂದು ಅನುಕೂಲ ಮಾಡಿಕೊಟ್ಟಿದ್ದಾರೆ.

ಅವಽಗಿಂತಲೂ ಮೊದಲೆ ಗೊಬ್ಬರ ಸಿಗಲು ಅವರು ಕಾರಣ. ಯಾರಿಗಾದರೂ ಕೆಲಸ ಆಗಬೇಕಾಗಿದ್ದರೆ ತಕ್ಷಣ ಇತ್ಯರ್ಥಪಡಿಸುತ್ತಿದ್ದರು. ಮೈಸೂರಿನ ದಲಿತ ಮಹಿಳೆ ಪುಷ್ಪಾವತಿ ಅವರನ್ನು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕರನ್ನಾಗಿ ನೇಮಕ ಮಾಡಲು ಅವರು ತೋರಿದ ಕಾಳಜಿ ಮರೆಯುವಂತಿಲ್ಲ. ಪಾಸ್ ಪೋರ್ಟ್ ಸೇವಾಕೇಂದ್ರ ಒಂದು ಕಾಲಕ್ಕೆ ಮೈಸೂರಿನಲ್ಲಿ ಇದು ಇರಲಿಲ್ಲ. ಕೊನೆಗೆ ಅನಂತ ಕುರ್ಮಾ ಅವರನ್ನು ಕೇಳಿದಾಗ ಸುಷ್ಮಾ ಸ್ವರಾಜ್ ಅವರಿಗೆ ಕರೆ ಮಾಡಿ ಈ ವ್ಯವಸ್ಥೆ ಮಾಡಲು ತಿಳಿಸಿದರು. ದೇಶದ ಮೊದಲ ಪಿಒಪಿಎಸ್ ಕೆ ಕೇಂದ್ರ ಮೈಸೂರಿಗೆ ನೀಡಿದರು ಎಂದರು.

ಅವರ ಮಾತಿನ ತಾತ್ಪರ್ಯ ಎಲ್ಲರಿಗೂ ಸ್ಥಾನಮಾನ ನೀಡುವಂತಿತ್ತು. ಬೆಂಗಳೂರು- ಮೈಸೂರಿನ ನಡುವೆ ಹತ್ತು ಪಥದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ
ನಡೆಯುತ್ತಿದೆ ಎಂದರೆ ಅದಕ್ಕೆ ಅನಂತಕುಮಾರ್ ಕಾರಣ. ನನಗೆ ದೊಡ್ಡ ಶ್ರೇಯಸ್ಸು ತಂದುಕೊಟ್ಟಿದ್ದಾರೆ. ನಾನು ಸಂಸದನಾಗಿ ಕೆಲಸ ಮಾಡಲು ಹಿಂದಿನ ಶಕ್ತಿ ಅವರು. ಮೈಸೂರಿನಿಂದ ಏಳು ನಗರಕ್ಕೆ ವಿಮಾನ ಸಂಪರ್ಕ ಸಾಧಿಸಲು ಹಾಗೂ ಏರ್‌ಪೋರ್ಟ್ ರನ್ ವೇ ಆಗಲು ಅವರೇ ಕಾರಣ ಎಂದು ಸ್ಮರಿಸಿದರು.

ಅನಂತಕುಮಾರ್ ನನ್ನ ರಾಜಕೀಯ ಗುರು

ಅನಂತಕುಮಾರ್ ಅವರೊಂದಿಗಿನ ಗೆಳೆತನ ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿದ್ದರು. ಇವರ ನೇತೃತ್ವದಲ್ಲಿ ಪರಿಷತ್‌ನಲ್ಲಿ ಪ್ರಮುಖವಾದ ಜವಾಬ್ದಾರಿ ನಾನು ತೆಗೆದುಕೊಂಡು ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡಿದ್ದೆ. ಅನಂತಕುಮಾರ್ ಅವರು ಒತ್ತಡ ಹಾಕದಿದ್ದರೆ ನಾನು ರಾಜಕೀಯಕ್ಕೆ ಬರಲು ಸಾಧ್ಯ ವಾಗುತ್ತಿರಲಿಲ್ಲ. ಒಂದು ದಿನ ಹುಬ್ಬಳ್ಳಿಗೆ ಬಂದು ಪಕ್ಷದಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯ ಮಾಡಿದ್ದರು. ಬಳಿಕ ನನ್ನನ್ನು ಪಕ್ಷದ ಪದಾಧಿಕಾರಿಯನ್ನಾಗಿ ನೇಮಕ ಮಾಡಿ ದರು. ಅವರ ವಿಷನ್ ನಾಯಕತ್ವ ಗುಣ ಗುರುತಿಸಿ ಬೆಳೆಸುವುದು. ನೂರಾರು ನಾಯಕತ್ವ ಗುಣವುಳ್ಳವರನ್ನು ರಾಜಕೀಯಕ್ಕೆ ಕರೆ ತಂದವರು. ನನ್ನ ರಾಜಕೀಯ ಗುರು ಅವರು ಎಂದು ಸ್ಮರಿಸಿಕೊಂಡರು.

1994ರಲ್ಲಿ ಮೊದಲ ಬಾರಿಗೆ ನಾನು ಚುನಾಯಿತನಾದೆ. 1999ರಲ್ಲಿ ಮತ್ತೊಮ್ಮೆ ಶಾಸಕನಾದೆ. ಶಾಸಕಾಂಗ ಸಭೆ ನಡೆಯುವ ಸಂದರ್ಭದಲ್ಲಿ ಅನಂತ ಕುಮಾರ್ ಹಾಗೂ ಯಡಿಯೂರಪ್ಪ ಅವರು ನನ್ನನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಕ ಮಾಡಿದರು. ನನ್ನ ರಾಜಕೀಯ ಬೆಳವಣಿಗೆಗೆ ಇವರಿಬ್ಬರ ಕೊಡುಗೆ ಇದೆ. ಇವತ್ತು ಪಕ್ಷ ಅಧಿಕಾರಕ್ಕೆ ಬರಲು ಅವರೇ ಕಾರಣ. ಇಡೀ ರಾಜ್ಯದ ಎಲ್ಲ ಕಾರ್ಯಕರ್ತರನ್ನು ಗುರುತಿಸಿ, ಪ್ರೀತಿ ವಿಶ್ವಾಸ ತುಂಬುವ ಗುಣ ಅವರದ್ದು. ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದಾಗ ಅನಂತಕುಮಾರ್ ಹಾಗೂ ಯಡಿಯೂರಪ್ಪ ಅವರನ್ನು ಒಂದೇ ವಾಹನದಲ್ಲಿ ಸಂಘಟನಾ ಯಾತ್ರೆಗೆ ಕರೆದುಕೊಂಡು ಹೋಗಿದ್ದೆ.

ಪಕ್ಷದಲ್ಲಿ ಶಕ್ತಿಯಾಗಿದ್ದರು ಇವರಿಬ್ಬರು. ವಾಜಪೇಯಿ ಅವರ ಆಡಳಿತದಲ್ಲಿ ಅನಂತಕುಮಾರ್ ಅವರು ಉತ್ತರ ಕರ್ನಾಟಕಕ್ಕೆ ನ್ಯಾಯ ದೊರೆಕಿಸಿಕೊಟ್ಟಿzರೆ. ಎಸ್.
ಎಂ. ಕೃಷ್ಣ ಸಿಎಂ ಆಗಿದ್ದಾಗ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಇಬ್ಬರನ್ನು ಕರೆಸಿ ರಾಜ್ಯದ ಹಿತಾಸಕ್ತಿ ಹಾಗೂ ಸಮಸ್ಯೆ ಕುರಿತು ಚರ್ಚಿಸುತ್ತಿದ್ದರು. ಕೇಂದ್ರ ಮತ್ತು ರಾಜ್ಯ ಸರಕಾರದ ಕೊಂಡಿಯಾಗಿ ಕೆಲಸ ಮಾಡಿದ್ದಾರೆ. ಕೇಂದ್ರದಲ್ಲಿ ಅನಂತಕುಮಾರ್ ಇದ್ದಾಗ ನೀರಾವರಿ ಹಾಗೂ ಹಲವು ಸಮಸ್ಯೆಗಳ ಇತ್ಯರ್ಥ
ಮಾಡುತ್ತಿದ್ದರು ಎಂದರು.

ಅನಂತಕುಮಾರ್ ಇದ್ದಿದ್ದರೆ ಕೇಂದ್ರ ಮತ್ತು ಕರ್ನಾಟಕದ ನಡುವಿನ ಸಮಸ್ಯೆ ಇತ್ಯರ್ಥ ಆಗುತ್ತಿತ್ತು. ಇಂತಹ ವ್ಯಕ್ತಿತ್ವದ ರಾಜಕಾರಣಿ ಸಿಗುವುದು ಬಹಳ
ಅಪರೂಪ. ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆ ಜವಾಬ್ದಾರಿ ನನಗೆ ನೀಡಿದ್ದರು. ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಶಾಸಕರನ್ನು ಗೆಲ್ಲಿಸಲು
ಪ್ರೋತ್ಸಾಹಿಸಿದರು. ಪಕ್ಷ ಬೆಳವಣಿಗೆಗೆ ಹೊಸಮುಖಗಳಿಗೆ ಮಣೆ ಹಾಕುತ್ತಿದ್ದರು. ರಾಮಕೃಷ್ಣ ಹೆಗಡೆ ಶಿಷ್ಯರು ನಮ್ಮ ಪಕ್ಷಕ್ಕೆ ಬರಲು ಸಹಕಾರಿಯಾಯಿತು ಎಂದು ಹೇಳಿದರು. ನೈಋತ್ಯ ರೈಲ್ವೇ ವಲಯ, ಬೆಂಗಳೂರಿನಿಂದ ಹುಬ್ಬಳಿಗೆ ಶಿಫ್ಟ್ ಮಾಡಲು ಕೆಲವರು ಹೈಕೋರ್ಟ್ ಹೋಗಿದ್ದರು.

ಇದಕ್ಕೆ ಚಾಲೆಂಜ್ ಮಾಡಿದ್ದೆ. ಹುಬ್ಬಳಿಗೆ ಶಿಫ್ಟ್ ಆಗಲು ಅನಂತಕುಮಾರ್ ಸಹಾಯ ಮಾಡಿದ್ದರು. ಅವರು ಬೆಂಗಳೂರಿನವರಾಗಿದ್ದರೂ ಹುಬ್ಬಳ್ಳಿಗೆ ರೈಲ್ವೆ ವಲಯ
ಶಿಫ್ಟ್ ಮಾಡಲು ತೋರಿದ ಆಸಕ್ತಿ ನಿಜಕ್ಕೂ ಮರೆಯಲಾಗದು. ವಾಜಪೇಯಿ ಅವರ ಕ್ಯಾಬಿನೆಟ್‌ನಲ್ಲಿ ನಿರ್ಧಾರ ಆಯಿತು. ರೈಲ್ವೇ ವಲಯ ಉದ್ಘಾಟನೆ ಮಾಡಲು ಇವರಿಬ್ಬರನ್ನು ಕರೆದವು. ಆಗ ನಿತಿಶ್ ಕುಮಾರ್ ಅವರು ರೈಲ್ವೆ ಸಚಿವರಾಗಿದ್ದರು. ಆಗ ಉದ್ಘಾಟನೆಗೆ ಅನಂತಕುಮಾರ್ ಸಹಕರಿಸಿದರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಮರಿಸಿದರು.

ವಿಧಾನಸೌಧ ಕಟ್ಟೆ ಮೇಲೆ ಕಂಡ ಕನಸು ನನಸು

ಪಕ್ಷದ ಸಂಘಟನೆಯಲ್ಲಿ ಅಗಾಧವಾದ ನಂಬಿಕೆ, ವ್ಯಕ್ತಿಗಳನ್ನು ಒಂದುಗೂಡಿಸುವ ಕೌಶಲ ಅವರದು. ಅತ್ಯಂತ ಅರ್ಹ ವ್ಯಕ್ತಿಗಳನ್ನು ಒಗ್ಗೂಡಿಸಿ ರಾಜ್ಯಕ್ಕೆ 
ಅನುಕೂಲವಾಗುವ ರೀತಿ ತಯಾರಿಸುತ್ತಿದ್ದರು. ಅವರ ಮಾನವೀಯ ಸಂಬಂಧಗಳು ಅನುಕರಣೀಯ. ಅವರ ಕುಟುಂಬವೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಬೆಳೆದಿದ್ದು. ಅವರ ಮಾರ್ಗದರ್ಶಕ ಚಟು ವಟಿಕೆಗಳು ಪ್ರೇರಣೆ ನೀಡುವಂತದು. ಅವರು ಮಾಡಿರುವ ಕಾರ್ಯಗಳು ಸ್ಮರಿಸಬೇಕು.

ನಾನು 1985ರಲ್ಲಿ ವಿದ್ಯಾರ್ಥಿ ಪರಿಷತ್ ಸಂಘಟನೆ ಪೂರ್ಣಾವಧಿ ಅಧಿಕಾರ ವಹಿಸಿ ಬೆಂಗಳೂರಿಗೆ ಬಂದೆ. ನಗರದಲ್ಲಿ ಅಂತಾರಾಷ್ಟ್ರೀಯ ಯುವ ವರ್ಷ ಆಚರಣೆ ನಡೆಯುತ್ತಿತ್ತು. ವಿಧಾನಸೌಧ ಅಲಂಕರಿಸಲಾಗಿತ್ತು. ಲೂನಾ ಮೂಲಕ ಸಂಚಾರ ಮಾಡಿ ಇವೆಲ್ಲ ವನ್ನೂ ಗಮನಿಸಿದೆವು. ಆಗ ವಿಧಾನಸೌಧ ಕಟ್ಟೆ ಮೇಲೆ ಕುರಿತು ಹಲವು ವಿಚಾರಗಳನ್ನು ಮಾತನಾಡಿದೆವು. ಆಗ ಅವರು ಅವರು ಹೇಳಿದರು ವಿಧಾನಸೌಧದ ಮೂರನೇ ಮಹಡಿಗೆ ಬರಬೇಕು ಎಂದರು. ಅನೇಕರಿಗೆ ಪ್ರೇರಣೆ ನೀಡಿzರೆ. ಭವಿಷ್ಯದ ಕನಸು ಕಾಣುವ ಹಾಗೂ ಗುರಿಯನ್ನು ಮುಟ್ಟುವ ಮಾರ್ಗದರ್ಶನ ನೀಡುತ್ತಿದ್ದರು ಎಂದು ವಿಧಾನಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಅನಂತಕುಮಾರ್ ಇದ್ದ ಕಡೆ ಸಂತೋಷ, ಸ್ನೇಹ

ಸಂಸದ ತೇಜಸ್ವಿಸೂರ್ಯ ಮಾತನಾಡಿ, ಅನಂತಕುಮಾರ್ ಅವರು ಕರ್ನಾಟಕದ ರಾಜಕಾರಣಿಯಾಗಿ ಬಿಜೆಪಿ ಕಟ್ಟಿದವರು. ಕೇಂದ್ರ ಮತ್ತು ಕರ್ನಾಟಕದ ನಡುವೆ ಸೇತುವೆಯಾಗಿಯಾಗಿದ್ದರು. ಹಲವು ರಾಜ್ಯಗಳ ನಡುವಿನ ಸಮಸ್ಯೆಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಿದ ಚಾಣಾಕ್ಷ. ನನ್ನನ್ನು ಅನಂತಕುಮಾರ್ ಅವರು ಮಗನಂತೆ ನೋಡಿಕೊಳ್ಳುತ್ತಿದ್ದರು. ಮಾನವೀಯ ದೃಷ್ಟಿಯಿಂದ ಅವರುಕೊಟ್ಟಆತ್ಮ ಸ್ಥೈರ್ಯ ನಾನು ಸಂಸದನಾಗಲು ಕಾರಣ. ಸಾಮಾನ್ಯ ಕಾರ್ಯಕರ್ತನ ಸ್ಥಿತಿಗತಿ ಅರ್ಥಮಾಡಿಕೊಂಡು, ಅವರ ನೋವಿಗೆ ಸ್ಪಂದಿಸುವ ಗುಣ ಅವರದ್ದು. ಕರ್ನಾಟಕದಲ್ಲಿ ಇಷ್ಟರಮಟ್ಟಿಗೆ ಪಕ್ಷ ಬೆಳೆಯಲು ಕಾರಣ ಅವರು.

ಇವರ ಮಾರ್ಗದರ್ಶನದಲ್ಲಿ ರಾಜಕೀಯವಾಗಿ ಬೆಳೆದ ನಾಯಕರು ಸಾಕಷ್ಟು ಪ್ರಚಾರದಲ್ಲಿದ್ದಾರೆ. ರಾಮಕೃಷ್ಣ ಹೆಗಡೆ ಅವರಂತೆ ಸಾಕಷ್ಟು ಜನನಾಯಕರನ್ನು ಅನಂತ ಕುಮಾರ್ ಬೆಳೆಸಿದರು. ಅವರ ನೆನಪಿನ ಶಕ್ತಿ ಅಗಾಧ. ಅವರ ಮಾತುಗಾರಿಕೆ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು. ಬಿ.ಪ್ಯಾಕ್‌ನವರು ಒಂದು ಕಾರ್ಯಕ್ರಮ ಆಯೋಜಿಸಿದ್ದರು. ನನಗೆ ಅನಂತಕುಮಾರ್ ಅವರು ಒಂದು ರಾತ್ರಿ ಕರೆ ಮಾಡಿ ಕಾರ್ಯಕ್ರಮಕ್ಕೆ ಒಂದು ವರದಿ ಬರೆ ಅಂದರು. ನಾನು ಎಲ್ಲಾ ತಯಾರಿಸಿ ಅವರಿಗೆ ಕೊಟ್ಟೆ. ಕಾರ್ಯ ಕ್ರಮದ ವೇದಿಕೆಯಲ್ಲಿ ಎಲ್ಲಾ ಮೂರು ಪಕ್ಷದವರನ್ನು ಒಟ್ಟಿಗೆ ಕರೆದರು. ಕಾರ್ಯಕ್ರಮದ ನಿರೂಪಕರು ಇಂಗ್ಲಿಷ್ನಲ್ಲಿ ಆರಂಭಿಸಿ ದರು. ಮೊದಲು ಅನಂತಕುಮಾರ್ ಅವರಿಗೆ ಅವಕಾಶ ನೀಡಿದರು. ಕನ್ನಡದಲ್ಲಿ ಮಾತನಾಡಲು ಶುರು ಮಾಡಿದರು. ಏಳೆಂಟು ನಿಮಿಷಗಳ ಕಾಲ ಮೋದಿ, ಆಡಳಿತ ವಿವರಿಸಿದರು.

ಬಳಿಕ ನಂದನ್ ನಿಲೇಕೇಣಿ ಅವರು ಇಂಗ್ಲಿಷ್ ನಲ್ಲಿ ಮಾತನಾಡಲು ಶುರು ಮಾಡಿದರು. ರಕ್ಷಣಾ ವೇದಿಕೆ ಅವರು ಕನ್ನಡ ಅಂತಾ ಸದ್ದು ಮಾಡಿದರು. ಜೆಡಿಎಸ್‌ನ ರೂತ್ ಮನೋರಮ ಅವರು ಮಾತನಾಡಿದರು. ಬಳಿಕ ಹೇಗಿತ್ತು ಕಾರ್ಯಕ್ರಮ ಅಂತಾ ನನ್ನನ್ನು ಕೇಳಿದರು. ಆಯೋಜಕರು ಕಾರ್ಯಕ್ರಮ ಮಾಡಿದ್ದು ಏಕೆಂದರೆ ನಂದನ್ ನಿಲೇಕೇಣಿ ಕುರಿತು ಮೆಚ್ಚುಗೆ ಮಾತನಾಡಲು ಎಂದು ಅನಂತಕುಮಾರ್ ಅವರು ಹೇಳಿದರು.

ಪ್ರದೀಪ್ ವಘೇಲಾ ಅವರು ಯುವ ಮೋರ್ಚಾ ಅಧ್ಯಕ್ಷರಾಗಿದ್ದರು. ಅನಂತಕುಮಾರ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕಾಶ್ಮೀರದಲ್ಲಿ ಗಲಾಟೆ ಆದಾಗ ಅನಂತ ಕುಮಾರ್ ಅವರು ಈ ವಿಚಾರ ತಿಳಿದು ಪ್ರದೀಪ್ ವಘೇಲಾ ಸೇರಿದ್ದ ಆಸ್ಪತ್ರೆಗೆ ಹೋಗಿದ್ದರು. ಬೆಳಗ್ಗೆ ತನಕ ಆಸ್ಪತ್ರೆಯಲ್ಲಿ ಇದ್ದರು. ಅನಂತಕುಮಾರ್ ಇದ್ದ ಕಡೆ ಸಂತೋಷ, ಸ್ನೇಹ ಅನಂತಕುಮಾರ್ ಅವರು ಪರೀಕ್ಷೆಯಲ್ಲಿ ೩೫-೩೬ ಇರುತ್ತಿತ್ತು ಎಂಬ ಪ್ರಸಂಗವನ್ನು ವಿವರಿಸಿದರು.

ಅಣ್ಣನ ವ್ಯಕ್ತಿತ್ವ 360 ಡಿಗ್ರಿ
ಅನಂತಕುಮಾರ್ ಅವರದ್ದು 360 ಡಿಗ್ರಿ ವ್ಯಕ್ತಿತ್ವ ಅವರದ್ದು. ಅವರು ಯಾವಾಗಲೂ ದೊಡ್ಡ ಮನಸು ಇರಬೇಕು, ಚಿಲ್ಲರೆ ಬುದ್ದಿ ಬಿಡಬೇಕು ಎನ್ನುತ್ತಿದ್ದರು. ಕೆಳಸ್ತರದವರ ಜತೆ ಚೌಕಾಸಿ ಮಾಡಬೇಡ ಎಂದು ಬುದ್ಧಿಮಾತು ಹೇಳುತ್ತಿದ್ದರು. ನಾನು, ಅವರ ಜತೆ ಬಾಲ್ಯದಲ್ಲಿ ಶಾಲೆಗೆ ಹೋದಾಗ ಮಳೆ ಬರುವ ಒಂದು
ದಿನ. ಒಂದು ಮರದ ಕೆಳಗೆ ಬೆಂಚಿನ ಕೆಳಗೆ ಒಬ್ಬ ಭಿಕ್ಷುಕ ಮಲಗಿದ್ದ. ಆಗ ನನ್ನಣ್ಣ ಅಂಗಡಿಗೆ ಹೋಗಿ ಬೀಡಿ ತೆಗೆದುಕೊಂಡು ಬಂದರು. ಆಗ ನಾನು ಕೇಳಿದಾಗ
ಅವರಿಗೆ ಹೊದಿಕೆ ಕೊಡಿಸಲು ಹಣ ಇಲ್ಲ. ಬೀಡಿ ಕೊಟ್ಟರೆ ಚಳಿ ಕಡಿಮೆಯಾಗುತ್ತೆ ಎಂದರು.

ಅವರದ್ದು ಯಾವಾಗಲೂ ತಮಾಷೆಯ ಮಾತುಗಳನ್ನಾಡುತ್ತಿದ್ದರು. ಅವರು ಇದ್ದಿದ್ದರೆ ವಿಶ್ವಾಸಕ್ಕೆ ಕೊರತೆ ಇರಲಿಲ್ಲ. ಒಬ್ಬರೆ ಕೂತು ಊಟ ಮಾಡುತ್ತಿರಲಿಲ್ಲ. ಮನ
ನೋಯಿಸಿ ಹಾಸ್ಯ ಮಾಡುತ್ತಿರಲಿಲ್ಲ ಎಂದು ಸಹೋದರ ನಂದಕುಮಾರ್ ತಿಳಿಸಿದರು.

***

ಅನಂತಕುಮಾರ್ ಅವರು ಒಳ್ಳೆಯ ವಕೀಲರಾಗಬಹುದಿತ್ತು. ಜನರ ನಡುವಿನ ಒಡನಾಟ ಹಾಗೂ ಪರಿಹಾರದ ಬಗ್ಗೆ ಆಸಕ್ತಿ ಇತ್ತು ಅವರಿಗೆ. ದೇಶ ಕಟ್ಟುವಕೆಲಸ ಮೊದಲ ಆದ್ಯತೆ ಅವರದ್ದು. ಅವರ ಪ್ರೀತಿ, ಸ್ನೇಹದ ಭಾವ ಎಂದಿಗೂ ಅಮರ.

-ಐಶ್ವರ್ಯಾ ಅನಂತಕುಮಾರ್ ಪುತ್ರಿ

ಅನಂತಕುಮಾರ್ ಆಪ್ತ ವಲಯದಲ್ಲಿ ನಾನೂ ಒಬ್ಬ . ಅವರಿಗಿಂತ ನಾನು ಚಿಕ್ಕವನಿದ್ದರೂ ಗೌರವದಿಂದಕಾಣುತ್ತಿದ್ದರು. ತೀರ್ಥಹಳ್ಳಿಗೆ ಬಂದಾಗ ಅನಂತಕುಮಾರ್ ಅವರಿಗೆ ಹೈವೇ ಮಾಡಿಕೊಡಿ ಅಂದು ಮನವಿ ಮಾಡಿದೆ. 15 ದಿನದಲ್ಲಿ ಕಾಮಗಾರಿ ಮಂಜೂರಾಯಿತು. ಮೋದಿ ಅವರನ್ನು ಎರಡು ಬಾರಿ ಕರೆದುಕೊಂಡು ಬಂದಿ ದ್ದರು. ಅವರು ನಮ್ಮ ರಾಜ್ಯಕ್ಕಾಗಿ ಇನ್ನೂ ಇರಬೇಕಾಗಿತ್ತು.
-ಆರಗ ಜ್ಞಾನೇಂದ್ರ ಗೃಹ ಸಚಿವ

ಕಾವೇರಿ ಸ್ವಚ್ಛತಾ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಹದಿನಾರು ಸ್ವಾಮೀಜಿಗಳ ನೇತೃತ್ವದಲ್ಲಿ ಎಂಟು ವರ್ಷ ಯಾತ್ರೆ ಮಾಡಿ ಏನೂ ಪ್ರಯೋಜನ ವಾಗಿರಲಿಲ್ಲ. ದೆಹಲಿಗೆ ಹೋದಾಗ ರಾಜನಾಥ್ ಸಿಂಗ್ ಅವರು ನಮ್ಮನ್ನು ಬರಮಾಡಿಕೊಂಡರು. ತಕ್ಷಣ ಅನಂತಕುಮಾರ್ ಅವರನ್ನು ಸಂಪರ್ಕಿಸಿದೆವು. ಬಳಿಕಕಾವೇರಿ ಮಲಿನಗೊಳ್ಳುತ್ತಿರುವ ಕುರಿತು ಮಾಹಿತಿ ನೀಡಿದೆವು.
-ವೇದಬ್ರಹ್ಮ ಭಾನುಪ್ರಕಾಶ್ ಶರ್ಮಾ

ನಾನು ಪತ್ರಕರ್ತನಾಗಿ ದೆಹಲಿ ಹೋದಾಗ ನಂತಕುಮಾರ್ ಅವರು, ಇಲ್ಲಿ ಜಾರಲು ಅನೇಕ ದಾರಿಗಳಿವೆ, ಮೇಲ್ಮಟ್ಟಕ್ಕೆ ಬೆಳೆಯಲು ಒಂದೇ ದಾರಿ ಎಂದು ಹೇಳಿದರು. ಕರ್ನಾಟಕದ ಸಮಸ್ಯೆಗಳ ಬಗ್ಗೆಕೇಂದ್ರದಲ್ಲಿ ಪ್ರತಿಧ್ವನಿಸುತ್ತಿದ್ದರು. ಮಹದಾಯಿ ವಿಚಾರ ಇತ್ಯರ್ಥದಕನಸು ಇತ್ತು. ನೆಲ, ಜಲ ವಿಷಯದಲ್ಲಿ ಸದಾ ಮುಂಚೂಣಿ. ಅವರು ನೀಡುತ್ತಿದ್ದ ಗೌರವ ಸತ್ಕಾರ ಮಾದರಿ. ತೇಜಸ್ವಿನಿ ಅನಂತಕುಮಾರ್ ಅವರು ಕಂಡಂತೆ
– ಪ್ರಶಾಂತ್ ನಾತು ಪತ್ರಕರ್ತ

ಅನಂತಕುಮಾರ್ ಅವರಿಗೆ ಕರ್ನಾಟಕ ಪ್ರಿಯವಾದ ರಾಜ್ಯ. ಕೇಂದ್ರ ಸಚಿವರಾಗಿದ್ದರೂ, ದೇಶಾದ್ಯಂತ ಕೆಲಸ ಮಾಡುತ್ತಿದ್ದರೂ ಕರ್ನಾಟಕವನ್ನು ಮರೆಯು ತ್ತಿರಲಿಲ್ಲ. ಮಧ್ಯಪ್ರದೇಶ, ಬಿಹಾರ ಮುಂತಾದ ರಾಜ್ಯಗಳಲ್ಲಿ ಅಲ್ಲಿನ ಕಾರ್ಯಕರ್ತರನ್ನು ಸ್ನೇಹದಿಂದ ಕಾಣುತ್ತಿದ್ದರು.
-ತೇಜಸ್ವಿನಿ ಅನಂತಕುಮಾರ್, ಅನಂತ ಕುಮಾರ್ ಪತ್ನಿ

ಅನಂತಕುಮಾರ್ ಆಪ್ತ ವಲಯದಲ್ಲಿ ನಾನೂ ಒಬ್ಬ. ಅವರಿಗಿಂತ ನಾನು ಚಿಕ್ಕವನಿದ್ದರೂ ಗೌರವ ದಿಂದ ಕಾಣುತ್ತಿದ್ದರು. ತೀರ್ಥಹಳ್ಳಿಗೆ ಬಂದಾಗ ಅವರಿಗೆ ನ್ಯಾಷನಲ್ ಹೈವೇ ಮಾಡಿಕೊಡಿ ಅಂದು ಮನವಿ ಮಾಡಿದೆ. 15 ದಿನಗಳಲ್ಲಿ ಈ ಯೋಜನೆ ಮುಂಜೂರಾ ಯಿತು. ಪ್ರಧಾನಿ ಮೋದಿ ಅವರನ್ನು ಎರಡು ಬಾರಿ ನನ್ನ ಕ್ಷೇತ್ರಕ್ಕೆ ಕರೆದುಕೊಂಡು ಬಂದಿದ್ದರು. ಅವರು ನಮ್ಮ ರಾಜ್ಯಕ್ಕಾಗಿ ಇನ್ನೂ ಇರಬೇಕಾಗಿತ್ತು.
-ಆರಗ ಜ್ಞಾನೇಂದ್ರ ಗೃಹ ಸಚಿವ

ಅನಂತಕುಮಾರ್ ಇದ್ದಿದ್ದರೆ ಕೇಂದ್ರ ಮತ್ತು ರಾಜ್ಯದ ನಡುವಿನ ಸಮಸ್ಯೆ ಇತ್ಯರ್ಥ ಆಗುತ್ತಿತ್ತು. ಇಂತಹ ವ್ಯಕ್ತಿತ್ವದ ರಾಜಕಾರಣಿ ಸಿಗುವುದು ಬಹಳ ಅಪರೂಪ. ಅನಂತಕುಮಾರ್ ಅವರು ಒತ್ತಡ ಹಾಕದಿದ್ದರೆ ನಾನು ರಾಜಕೀಯಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ.
-ಜಗದೀಶ್ ಶೆಟ್ಟರ್ ಮಾಜಿ ಮುಖ್ಯಮಂತ್ರಿ

Leave a Reply

Your email address will not be published. Required fields are marked *

error: Content is protected !!