Sunday, 28th April 2024

ತ್ಯಾಗ ಬಲಿದಾನ ಸತ್ವಪರೀಕ್ಷೆಯ ಹಬ್ಬ ಬಕ್ರೀದ್

ಶಬೀನ್ ತಾಜ್, ತಾವರೆಕೆರೆ

ಬಕ್ರೀದ್ ಹಬ್ಬ ಅಲ್ಲಾಹನ ಸಂಪ್ರೀತಿಗಾಗಿ ಸಂಪತ್ತು ಮಾತಾಪಿತರು ಆಪ್ತೇಷ್ಟರು ಬಂದು ಬಾಂಧವರು ಹೀಗೆ ಸರ್ವಸ್ವವನ್ನೂ ತ್ಯಾಗ ಮಾಡಿ ಕಾಬಾ ಸ್ಥಾಪನೆಗೆ ಕಾರಣಕರ್ತರಾದ ಪ್ರವಾದಿ ಇಬ್ರಾಹಿಂ ನೆನಪಿನ ಪುನರಾ ವರ್ತನೆಯೇ ಬಕ್ರೀದ್ ಹಬ್ಬ.

ಲಬ್ಬೈಕ್ ಅಲ್ಲಾಹುಮ್ಮಾ ಲಬ್ಬೈಕ್ ಲಾ ಷರೀಕಾ ಲಕಾ ಲಬ್ಬೈಕ್ ಇನ್ನಲ್ ಹಮ್ದ್ ವನೈಮತಾ ಲಕವಲ್ ಮುಲ್ಕ್. ಲಾ ಷರೀಕಾ ಲಕಾ ಲಬ್ಬೈಕ್.

ಬಕ್ರೀದ್ ಜಗತ್ತಿನಾದ್ಯಂತ ಮುಸ್ಲಿಂ ಸಮುದಾಯದ ವರಿಗೆ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಚಂದ್ರವರ್ಷದ ಕೂನೆಯ ತಿಂಗಳಾಗಿರುವ ದಹು ಅಲ್ ಹಿಜ್ಜಾಹದ ಹತ್ತನೇ ದಿನದಂದು(ಇಸ್ಲಾಮಿಕ ಕ್ಯಾಲೆಂಡರ್ ನ ಕೂನೆಯ ತಿಂಗಳಾಗಿದೆ) ಬಕ್ರೀದ್ ಆಚರಣೆ ಮಾಡಲಾಗುತ್ತದೆ.ಇದನ್ನು ಈದ್ -ಉಲ್ -ಅಧಾ / ಬಕ್ರೀದ್ ಎಂದು ಕರೆಯಲಾಗುತ್ತದೆ.

ಬಕ್ರೀದ್ ಹಬ್ಬದ ಇತಿಹಾಸ: ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಘಟನೆಯನ್ನು ಬಕ್ರೀದ್ ಹಬ್ಬ ನೆನಪಿಸುತ್ತದೆ.ಅದು ಪ್ರವಾದಿ ಇಬ್ರಾಹಿಂ ಅವರು ತ್ಯಾಗ , ಬಲಿದಾನದ ಸವಿನೆನಪು . ಇಂದು ಜಗತ್ತಿನ ಮೂರರಲ್ಲಿ ಎರಡರಷ್ಟು ಜನರು ಅಂದರೆ ಯಹೂದಿ ಯರು, ಕ್ರೈಸ್ತರು, ಮುಸಲ್ಮಾನರು ಏಕಪ್ರಕಾರವಾಗಿ ಇಬ್ರಾಹಿಂ ಅವರನ್ನು ಗೌರವಿಸುತ್ತಾರೆ.

ಇರಾಕ್ ನ ಪುರೋಹಿತ ಅಝರ್ ಎಂಬಾತನ ಪುತ್ರನೇ ಇಬ್ರಾಹಿಂ.ಅವರಿದ್ದ ಉರ್ ನಗರವನ್ನು ದುಷ್ಟ ರಾಜ ನಮ್ರೂದ್ ಆಳುತ್ತಿದ್ದ , ತಾನೇ ದೇವ ಎನ್ನುತ್ತಿದ್ದ ಇಂತಹ ಸಂದರ್ಭದಲ್ಲಿ ಅಲ್ಲಾಹನು ಇಬ್ರಾಹಿಂ ಅವರನ್ನು ಪ್ರವಾದಿಯನ್ನಾಗಿ ನೇಮಿಸಿ ಅವರ ಮೂಲಕ ಸಮಾಜ ಸುಧಾರಣೆ ತರುವ ಸಂದೇಶ ರವಾನಿಸಿದ್ದಾರು .ಇದರ ಹೂಣೆ ಹೂತ್ತು ಈಜಿಪ್ಟ್, ಸಿರಿಯಾ,ಮೂದಲಾದ ದೇಶದಗಳನ್ನೆಲ್ಲಾ ಸುತ್ತಾಡಿಕೊಂಡು ಹೋದಾಗ ಅನೇಕ ಬಗೆಯ ಸತ್ವಪರೀಕ್ಷೆಗಳನ್ನು ಎದುರಿಸಿದರು ಕೂನೆಗೆ ಸೌದಿ ಅರೇಬಿಯಾದ ಮರುಭೂಮಿ ಪ್ರದೇಶಗಳಲ್ಲಿ ನೆಲೆ ನಿಂತರು. ಸರ್ವತ್ಯಾಗಿಯಾದ ಇಬ್ರಾಹಿಂ ಅವರು ತನ್ನ ಪತ್ನಿ ಹಾಜಿರಾ ಮಗ ಇಸ್ಮಾಯಿಲ್ ಅವರನ್ನು ಬಿಟ್ಟು ಮರಳುವಾಗ ಪ್ರವಾದಿ ಇಬ್ರಾಹಿಂ ಮಾಡಿದ ಪ್ರಾರ್ಥನೆಯನ್ನು ಪವಿತ್ರ ಕುರಾನ್ ಹೃದಯಂಗಮ ವಾಗಿ ಚಿತ್ರಿಸಿದೆ.

ಝಂಝಂ: ಸೌದಿ ಅರೇಬಿಯಾದ ಮರುಭೂಮಿ ಉರಿಯುವ ಬಿಸಿಲಿನಲ್ಲಿ ಮಗ ಇಸ್ಮಾಯಿಲ್ ಅಳುತ್ತಿದ್ದಾಗ ತಾಯಿ ಹಾಜಿರಾ ನೀರಿಗಾಗಿ ಸಫಾ ಮರ್ವಾ ಬೆಟ್ಟಗುಡ್ಡಗಳ ಮಧ್ಯೆ ಏಳು ಬಾರಿ ಓಡಾಡಿದರು,ಇತ್ತ ಬಾಯಾರಿದ ಶಿಶು ಇಸ್ಮಾಯಿಲ್ ತನ್ನ ಕಾಲನ್ನ ನೆಲಕ್ಕೆ ಬಡಿದಾಗ ನೀರಿನ ಚಿಲುಮೆಯೂಂದು ಚಿಮ್ಮ ತೊಡಗಿತ್ತು.ನೀರು ಸಿಗದೇ ನಿರಾಸೆಯಿಂದ ಬರಿಗೈಲಿ ಮರಳಿದ ತಾಯಿ ಹಾಜಿರಾ ತನ್ನ ಮಗುವಿನ ಸಮೀಪ ಚಿಮ್ಮುತ್ತಿದ್ದ ನೀರಿನ ಸೋತ್ರ ಕಂಡು ಆನಂದಭಾಷ್ಪವಾಗಿ ಝಂಝಂ (ನಿಲ್ಲು- ನಿಲ್ಲು) ಎಂದು ಜೋರಾಗಿ ಹೇಳಿ ತೋಡಗಿದ್ದರು . ಇಂದು ಆ‌ ನಗರವೇ ಮೆಕ್ಕಾ ವಾಗಿ ಬೆಳೆದು ಲಕ್ಷಾಂತರ ಜನರಿಗೆ ಹಾಗೂ ಹಜ್ ಯಾತ್ರಿಕರಿಗೆ ನೀರುಣಿಸುತ್ತಿದೆ.

ಬಲಿದಾನ : ಝಂಝಂ ಇರುವ ದೇಶದಲ್ಲಿ ಹಜರತ್ ಇಸ್ಮಾಯಿಲ್ ಸದ್ಗುಣ ಸಂಪನ್ನರಾಗಿ ಬೆಳೆದರು , ಪ್ರವಾದಿ ಇಬ್ರಾಹಿಂ ಅವರಿಗೂ ಮಗನ ಮೇಲೆ ಅತಿಯಾದ ಪ್ರೀತಿ ಬೆಳೆಯಿತು . ಈ ಪ್ರೀತಿಯನ್ನು ‌‌‌‌‌ಅಲ್ಲಾಹನು ಪರೀಕ್ಷೆಗೆ ಒಳಪಡಿಸಿದರು – ನಿನ್ನ ಪ್ರೀತಿಯ ಪುತ್ರನನ್ನು ನನ್ನ ಮಾರ್ಗದಲ್ಲಿ ಬಲಿ ಅರ್ಪೀಸು ಎಂಬ ಸ್ವಪ್ನಾಜ್ಞೇಯು ದೂರೆಯಿತು. ಈಗಾಗಲೇ ಎಲ್ಲಾವನ್ನೆ ತ್ಯಾಗಮಾಡಿದ್ದ ಅವರು ಪ್ರೀತಿಯ ಪುತ್ರನ ತ್ಯಾಗಕ್ಕೂ ಎದ್ದು ನಿಂತರು.ಹಜಿರಾ ರವರು ಕೂಡ ಅಲ್ಲಾಹನಾ ಸ್ವಪ್ನಾಜ್ಞೇಯನ್ನು ಪತಿ ಬಂದು ತಿಳಿಯದಿದ್ದಾಗ ಒಂಚೊರು ಪಳಗದ್ದೆ ಮಗನ ತ್ಯಾಗಕ್ಕೆ ಸಿದ್ದರಾದರು.ಸ್ವತಹ ಮಗನನ್ನೆ ವಿಚಾರಿಸಿದಾಗಲೂ ಸಂತೋಷದಿಂದ ದೇವಾಜ್ಞೆ ಪಾಲಿಸುವಂತೆ ಸೂಚನೆ ನೀಡಿದರು ಇಸ್ಮಾಯಿಲ್ .

ಕಾಬಾ ಸ್ಥಾಪನೆ: ಅಲ್ಲಾಹನ ಆಜ್ಞೆಯಂತೆ ಪ್ರವಾದಿ ಇಬ್ರಾಹಿಂರವರು ತಮ್ಮ ಪ್ರೀತಿಯ ಮಗ ಹಜರತ್ ಇಸ್ಮಾಯಿಲ್ ರನ್ನು ಬಲಿಗೂಡಲು ಹೂರಟಾಗ ಮಾರ್ಗ ಮಧ್ಯೆ ಸೈತಾನನ ದುಷ್ಟ ಶಕ್ತಿಗಳನ್ನು ಕಲ್ಲೆಸೆಯುವ ಮೂಲಕ ಅವುಗಳನ್ನ ಮೆ‌ಟ್ಟಿನಿಂತರು‌. ನಂತರ ಮಗುವನ್ನು ನೆಲದಲ್ಲಿ ಮಲಗಿಸಿ ಇನ್ನೇನು ಕೂರಳು ಕೊಯ್ಯ ಬೇಕು ಎನ್ನುವಷ್ಟರಲ್ಲಿ ” ಅಲ್ಲಾಹನು ಜಿಬ್ರಾಯಿಲ್ ಅವರನ್ನು ಕಳುಹಿಸಿ ಇಬ್ರಾಹಿಂ ನಿಲ್ಲು ನೀನು ಈ ಸತ್ವಪರೀಕ್ಷೆಯಲ್ಲಿ ಗೆದ್ದಿರುವೆ, ತೆಗೆದುಕೋ ನಿನ್ನ ಪ್ರೀತಿಯ ಮಗ ಇಸ್ಮಾಯಿಲ್ ನಾ ಬದಲಿಗೆ ಈ ಟಗರನ್ನ ಬಲಿಯರ್ಪಿಸು ನೀನು ದೇವಾಜ್ಞೆಗೆ ಶರಣಾಗಿರುವೆ. ” ಎಂದರು ಹಾಗೂ ಈ ಬಲಿಕೂಟ್ಟ ಆಡಿನ (ಟಗರಿನ) ಮಾಂಸವನ್ನು ಮೂರು ಭಾಗಗಳಲ್ಲಿ ವಿಂಗಡಿಸಿ , ಇದರಲ್ಲಿ ಒಂದು ಭಾಗ ಬಡವರಿಗೆ ಮತ್ತು ಅಗತ್ಯ ವಿರುವಂತವರಿಗೆ ಇನ್ನೂಂದು ಭಾಗ ಸ್ನೇಹಿತರಿಗೆ ಉಳಿದ ಮೂರನೇ ಭಾಗ ಕುಟುಂಬ ಸದಸ್ಯರಿಗೆ ಆಹಾರ ತಯಾರಿಕೆ ಬಳಸಬೇಕು ಎಂದು ತಿಳಿಸಿದರು. ನೀವಿಬ್ಬರೂ ಕೂಡಿ ನನ್ನ ದಾಸ್ಯಾರಾಧನೆಗಾಗಿ ಒಂದು ಮಂದಿರವನ್ನು ನಿರ್ಮಾಣ ಮಾಡಲು ದೇವಾಜ್ಞೆಯಾಯಿತು.. ನಂತರ ಅರ್ಫಾತ್ ಪರ್ವತದಲ್ಲಿ ಮಸೀದಿ ನೀರ್ಮಿಸಿದರು , ಅದೇ ಕಾಬಾ.

ಬಕ್ರೀದ್ ಹಬ್ಬದ ಸಂದೇಶ: ಒಟ್ಟಿನಲ್ಲಿ ಬಕ್ರೀದ್ / ಹಜ್ ಕರ್ಮದಲ್ಲಿ ಇಡೀ ಮನುಕುಲಕ್ಕೆ ಹಲವು ಪ್ರಗತಿಪರ ಮತ್ತು ಉದಾತ್ತ ವಾದ ಸಂದೇಶವಿದೆ. ಎಲ್ಲಾ ಪ್ರವಾದಿಗಳು ಸಾರಿರುವ ಮತ್ತು ಎಲ್ಲಾ ಧರ್ಮಗ್ರಂಥಗಳು ಮೂಲಭೂತವಾಗಿ ಭೋಧಿಸಿರುವ ಏಕದೇವತ್ವದ ಸಂದೇಶಕ್ಕೆ ಬದ್ದತೆ ವಿಶ್ವ ಮಾನವತ್ವ‌ ಮತ್ತು ಮಾನವೀಯ ಸಹೋದರತೆಯನ್ನು ಬೆಳೆಸಿಕೊಳ್ಳುವುದು ಉನ್ನತ ಧ್ಯೇಯಗಳಿಗಾಗಿ ತ್ಯಾಗ ಬಲಿದಾನಕ್ಕೆ ಸನ್ನದ್ದನಾಗುವುದೇ ಈ ಹಬ್ಬದ ಸಂದೇಶ.

ಹಬ್ಬದ ವಿಶೇಷತೆ: ಈದ್ ಆಲ್ ಅಧಾ/ ಬಕ್ರೀದ್ ಹಬ್ಬದಲ್ಲಿ ಮಟನ್ ಬಿರಿಯಾನಿ, ಮಟನ್ ಕೂರ್ಮ ,ಮಟನ್ ಕೀಮಾ
ಭುನಿ ಕಲೆಜೀ ತಯಾರಿಸುವುದು ಹಾಗೇಯೇ ಸಿಹಿ ತಿನಿಸುಗಳಾದ ಶೀರ್ ಕುರ್ಮಾ ಮತ್ತು ಮಿಟ್ಟಾ ಖಾನಾ, ಜಾಮೂನು, ಬೆಳೆಪಾಯಿಸ ಇತ್ಯಾದಿ ಮಾಡಲಾಗುವುದು.

🌹ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು

error: Content is protected !!