Thursday, 12th December 2024

ನಾಳೆ ಮುಂಬೈ ಇಂಡಿಯನ್ಸ್’ಗೆ ರಾಯಲ್ ಚಾಲೆಂಜರ್ಸ್ ಎದುರಾಳಿ

ಮುಂಬೈ: ಪಿಎಲ್ 2024ರಲ್ಲಿ ಆರ್‌ಸಿಬಿ ಇದುವರೆಗೂ ಆಡಿರುವ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಸೋತಿದ್ದು, ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ.

ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಲ್ಲಿಂದ ಸೀದಾ ಮುಂಬೈ ತಲುಪಿದೆ. ಏ.11ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆಡಲಿದೆ.

ಸತತ ಮೂರು ಪಂದ್ಯಗಳನ್ನು ಸೋತಿದ್ದ ಮುಂಬೈ ಇಂಡಿಯನ್ಸ್ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವ ಮೂಲಕ ಗೆಲುವಿನ ಖಾತೆ ತೆರೆದಿದೆ. ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಲಯ ಕಂಡುಕೊಂಡಿರುವ ಮುಂಬೈ ಆರ್ ಸಿಬಿ ವಿರುದ್ಧ ಕೂಡ ಗೆಲ್ಲುವ ವಿಶ್ವಾಸದಲ್ಲಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್ ಬದಲಾವಣೆ ಮಾಡದೇ ಇದ್ದರೆ, ಗೆಲ್ಲುವುದು ಕಷ್ಟಸಾಧ್ಯ. ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲೇ ಆರ್‌ಸಿಬಿ ಎಡವುತ್ತಿರುವುದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ.

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮಹಿಪಾಲ್ ಲೊಮ್ರೋರ್ ಕೈಬಿಟ್ಟ ಬಳಿಕ, ಫಾರ್ಮ್‌ನಲ್ಲಿದ್ದ ದಿನೇಶ್ ಕಾರ್ತಿಕ್ ಅವರನ್ನು ಬ್ಯಾಟಿಂಗ್‌ಗೆ ಕಳಿಸದೇ ಸೋಲು ಅನುಭವಿಸಿತು. ವಿಜಯ್‌ ಕುಮಾರ್‍‌ ವೈಶಾಖ್‌ಗೆ ಮತ್ತೆ ಅವಕಾಶ ಸಿಗಲೇ ಇಲ್ಲ.

ವಿಲ್ ಜ್ಯಾಕ್ಸ್ ಆಡಿದರೆ ಆರ್‌ಸಿಬಿ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಕ್ಕೆ ಬಲ ಬರಲಿದೆ. ಉತ್ತಮ ಪ್ರದರ್ಶನ ನೀಡದ ಗ್ರೀನ್ ಅಥವಾ ಮ್ಯಾಕ್ಸ್‌ವೆಲ್ ಅವರಿಗೆ ವಿಶ್ರಾಂತಿ ನೀಡುವ ಅಗತ್ಯವಿದೆ.

ಮುಖ್ಯವಾಗಿ ಫಾರ್ಮ್‌ನಲ್ಲಿರುವ ಮಹಿಪಾಲ್ ಲೊಮ್ರೊರ್ ಮತ್ತು ವೈಶಾಖ್ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಆಡಬೇಕಿದೆ. ಕೊಹ್ಲಿ ಉತ್ತಮವಾಗಿ ಆಡುತ್ತಿದ್ದು, ಅವರಿಗೆ ಬೆಂಬಲ ನೀಡುವ ಬ್ಯಾಟರ್ ಬೇಕಿದೆ.

ರಾಜಸ್ಥಾನ ರಾಯಲ್ಸ್ ವಿರುದ್ಧ ಕ್ಯಾಮೆರಾನ್ ಗ್ರೀನ್ ಬದಲಿಗೆ ದಿನೇಶ್ ಕಾರ್ತಿಕ್ ಬಂದಿದ್ದರೆ ಇನ್ನೂ 10-15 ಹೆಚ್ಚು ರನ್‌ಗಳನ್ನು ಆರ್ ಸಿಬಿ ಕಲೆಹಾಕಬಹುದಿತ್ತು ಎಂದು ಮಾಜಿ ಕ್ರಿಕೆಟಿಗರು ಕೂಡ ಅಭಿಪ್ರಾಯಪಟ್ಟಿದ್ದಾರೆ.

ತಂಡದ ಸಂಭಾವ್ಯ ಇಲೆವೆನ್

ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸೌರವ್ ಚೌಹಾಣ್, ಕ್ಯಾಮೆರಾನ್ ಗ್ರೀನ್ / ಗ್ಲೆನ್ ಮ್ಯಾಕ್ಸ್‌ವೆಲ್ಯಶ್ ದಯಾಳ್, ಮೊಹಮ್ಮದ್ ಸಿರಾಜ್, ವಿಜಯ್ ಕುಮಾರ್ ವೈಶಾಖ್, ಲಾಕಿ ಫರ್ಗ್ಯುಸನ್ / ರೀಸ್ ಟೋಪ್ಲಿ.