ಹೈದರಾಬಾದ್: ಸನ್‌ರೈಸರ್ ಹೈದರಾಬಾದ್ ತಂಡವು ಬುಧವಾರದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ತೀವ್ರ ಪೈಪೋಟಿಯಿಂದ ಸಾಗುವ ಸಾಧ್ಯತೆಯಿದೆ.
ಹೈದರಾಬಾದ್ ಮತ್ತು ಲಕ್ನೋ ಒಟ್ಟಾರೆ 12 ಅಂಕ ಪಡೆದಿದ್ದು ಸದ್ಯ ಅಂಕಪಟ್ಟಿಯಲ್ಲಿ ಅನುಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದಿವೆ.
ಹೈದರಾಬಾದ್ ಮತ್ತು ಲಕ್ನೋ ನಡುವಣ ಈ ಪಂದ್ಯದ ವಿಜೇತ ತಂಡವು ಪ್ಲೇ ಆಫ್ ತೇರ್ಗಡೆಗೆ ಇನ್ನಷ್ಟು ಹತ್ತಿರವಾಗಲಿದೆ. ಇದಕ್ಕಾಗಿ ಎರಡೂ ತಂಡಗಳು ಶತ ಪ್ರಯತ್ನ ಮಾಡುವುದು ನಿಶ್ಚಿತವಾಗಿದೆ.
ಪ್ಯಾಟ್ ಕಮಿನ್ಸ್ ನೇತೃತ್ವದ ಹೈದರಾಬಾದ್ ತಂಡ ಬಹಳಷ್ಟು ಅನುಭವ ಹೊಂದಿದ ತಂಡವಾಗಿದೆ. ಹೈದರಾಬಾದ್ ತಂಡವು ಕಳೆದ 4 ಪಂದ್ಯಗಳಲ್ಲಿ ಮೂರರಲ್ಲಿ ಸೋತಿದೆ. ತಂಡದ ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣವಾಗಿದೆ.
ಹೈದರಾಬಾದ್‌ನಂತೆ ಲಕ್ನೋ ತಂಡದ ಬ್ಯಾಟಿಂಗ್ ಈ ಹಿಂದಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ನೀರಸವಾಗಿತ್ತು. ನಾಯಕ ಕೆಎಲ್ ರಾಹುಲ್ ಇನಿಂಗ್ಸ್ ಕಟ್ಟಲು ವಿಫಲರಾಗಿದ್ದರೆ ಮಾರ್ಕಸ್ ಸ್ಟೋಯಿನಿಸ್, ನಿಕೋಲಾಸ್ ಪೂರನ್ ಅವರಿಂದ ದೊಡ್ಡ ಆಟ ಬರಲೇ ಇಲ್ಲ.
ಸಂಭ್ಯಾವ್ಯ ತಂಡಗಳು:
ಲಕ್ನೋ: ರಾಹುಲ್ (ನಾಯಕ), ಸ್ಟಾಯಿನಸ್, ಹೂಡಾ, ಪೂರನ್, ಟರ್ನರ್, ಬದೋನಿ, ಕೃಣಾಲ್, ಬಿಷ್ಣೋಯಿ, ನವೀನ್, ಮೌಸಿನ್, ಯಶ್ ಠಾಕೂರ್
ಹೈದ್ರಾಬಾದ್: ಅಭಿಷೇಕ್, ಹೆಡ್, ನಿತೀಶ್, ಕ್ಲಾಸೆನ್, ಸಮದ್, ಶೆಹಭಾಜ್, ಯಾನ್ಸನ್, ಕಮಿನ್ಸ್ (ನಾಯಕ), ಭುವನೇಶ್ವರ್, ಮರ್ಕಂಡೆ, ಜಯದೇವ್