Sunday, 24th November 2024

ಚೆನ್ನೈ ಉಪನಗರಗಳಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ

 ಚೆನ್ನೈ: ಮಿಳುನಾಡಿನ ಚೆನ್ನೈ ಮತ್ತು ಉಪನಗರಗಳಲ್ಲಿ ಭಾರೀ ಮಳೆ ಸಂಭವಿಸುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

ಮಳೆಯಿಂದಾಗಿ ನಗರ ಮತ್ತು ಹೊರವಲಯದಲ್ಲಿ ಇಬ್ಬರು ಮೃತಪಟ್ಟು, ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟರೆ ಒಬ್ಬ ವ್ಯಕ್ತಿಗೆ ವಿದ್ಯುತ್ ಸ್ಪರ್ಶವಾಗಿ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿವೆ.

ಬುಧವಾರ ಮಳೆ ಕಡಿಮೆಯಾದರೂ, ಭಾರತೀಯ ಹವಾಮಾನ ಇಲಾಖೆ ಚೆನ್ನೈ ಮತ್ತು ಪಕ್ಕದ ಜಿಲ್ಲೆಗಳಾದ ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟುಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಿದೆ.

ಕಾವೇರಿ ನದಿ ಮುಖಜ ಭೂಮಿಗೆ ಒಳಪಡುವ ಜಿಲ್ಲೆಗಳಾದ ರಾಮನಾಥಪುರ ಮತ್ತು ಶಿವಗಂಗಾ ಜಿಲ್ಲೆಗಳಲ್ಲಿಯೂ ಸಹ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಚೆನ್ನೈ, ತಿರುವಳ್ಳೂರು ಮತ್ತು ರಾಣಿಪೇಟ್‌ನಲ್ಲಿ ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರ ಮಳೆ ರಜೆ ಘೋಷಿಸಿದೆ. ವೆಲ್ಲೂರು, ಕಾಂಜಿಪುರಂ, ವಿಲುಪುರಂ ಮತ್ತು ಚೆಂಗಲ್‌ಪಟ್ಟುಗಳಲ್ಲಿಯೂ ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಲ್ಪಡುತ್ತವೆ.