ನವದೆಹಲಿ: ಡಂಪಿಂಗ್ ಯಾರ್ಡ್ಗಾಗಿ ಎಂಸಿಡಿ ನಿಗದಿ ಪಡಿಸಿದ್ದ ಭೂಮಿಯಲ್ಲಿ ಅನಧಿ ಕೃತವಾಗಿ ಗ್ರಂಥಾಲಯ ನಿರ್ಮಿಸಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ಗೆ ದೆಹಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಕರ್ಕರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಹಿಮಾಂಶು ರಮಣ್ ಸಿಂಗ್ ಅವರು ಗೌತಮ್ ಗಂಭೀರ್ಗೆ ಸಮನ್ಸ್ ಜಾರಿ ಮಾಡಿದ್ದಾರೆ.
ಗಂಭೀರ್ ಮತ್ತು ಎಂಸಿಡಿ ವಿರುದ್ಧ ಅರ್ಜಿದಾರರ ವಕೀಲರಾದ ರವಿ ಭಾರ್ಗವ ಮತ್ತು ರೋಹಿತ್ ಕುಮಾರ್ ಮಹಿಯಾ ಅವರು ಗಂಭೀರ್ ಮತ್ತು ಎಂಸಿಡಿ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಿದ್ದು, ಗಂಭೀರ್ ಅಕ್ರಮ ಕಟ್ಟಡವನ್ನು ಬಳಸದಂತೆ ತಡೆಯುವ ಆದೇಶ ಕೋರಿದ್ದಾರೆ.
ಎಂಸಿಡಿಯ ಉನ್ನತ ಅಧಿಕಾರಿಗಳೊಂದಿಗೆ ಶಾಮೀಲಾಗಿ ಗಂಭೀರ್ ಅವರು ಎಂಸಿಡಿ ಭೂಮಿಯಲ್ಲಿ ಅನಧಿಕೃತವಾಗಿ ಗ್ರಂಥಾಲಯ ನಿರ್ಮಿಸಿದ್ದಾರೆ ಎಂದು ಮೊಕದ್ದಮೆ ಯಲ್ಲಿ ಹೇಳಲಾಗಿದೆ.