Friday, 22nd November 2024

ಕನ್ನಡ ಭಾಷೆ ನಿಮ್ಮ ಅಸ್ಮಿತೆಯಾಗಿರಲಿ

ತಿಪಟೂರು: ನೀವು ಎಷ್ಟು ಭಾಷೆ ಬೇಕಾದರೂ ಕಲಿಯಿರಿ, ಆದರೆ ಕನ್ನಡ ಭಾಷೆ ನಿಮ್ಮ ಅಸ್ಮಿತೆಯಾಗಿರಲಿ ಎಂದು ಕೆ.ಎಂ.ಪರಮೇಶ್ವರಯ್ಯ ವಿದ್ಯಾರ್ಥಿ ಗಳಿಗೆ ತಿಳಿಸಿದರು.

ನಗರದ  ಟೈಮ್ಸ ಕಾಲೇಜು  ನಡೆದ 67ನೆಯ ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇದು ಸ್ಪರ್ಧಾತ್ಮಕ ಯುಗ. ಈ ಸ್ಪರ್ಧಾತ್ಮಕ ಯುಗದ ಬೇಕು, ಬೇಡಗಳಿಗೆ ಸ್ಪಂದಿಸಿದೆ ಹೊದರೆ ಹಿಂದುಳಿಯು ತ್ತೆವೆ. ಅಲ್ಲದೆ ಯಾವ ವ್ಯಕ್ತಿ ಎಷ್ಟು ಭಾಷೆ ಕಲಿಯುತ್ತಾನೊ ಅಷ್ಟು ವ್ಯಕ್ತಿಗಳು ಇದ್ದ ಹಾಗೆೆ ಎಂದರು.

ನಾವು ಹುಟ್ಟಿದ ನಾಡು ಹಾಗೂ ನಮಗೆ ಜನ್ಮ ಕೊಟ್ಟ ತಾಯಿ ಇವರು ಸ್ವರ್ಗ ಕ್ಕಿಂತ ಮಿಗಿಲು. ಈ ಮಾತನ್ನ ಜ್ಞಾಪಿಸಿಕೊಂಡು ನಾಡು ನುಡಿಯ ಸೇವೆಗೆ ಕಟಿಬದ್ದರಾಗಿರಬೇಕು. ನಾವು ವಾಸಿಸುವ ಪರಿಸರ ಕನ್ನಡಮಯವಾಗಿರಲಿ. ಕನ್ನಡದಲ್ಲೆ ಮಾತನಾ ಡುವ, ಕನ್ನಡದಲ್ಲೆ ಬರೆಯುವ ಹವ್ಯಾಸ ರೂಢಿಸಿಕೊಳ್ಳಿ. ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಕಾಯಕ ಮಾಡಿ. ಕನ್ನಡಕ್ಕೆ ತನ್ನದೆ ಆದ ಪ್ರಾಚೀನ ಪರಂಪರೆ, ಇತಿಹಾಸ, ಸಂಸ್ಕೃತಿ ಇದೆ.

ಇಲ್ಲಿನ ಜನ ಶೂರರು,ವೀರರು,ಕಲಿಗಳು, ಸಕಲಶಾಸ್ತ್ರ ಸಂಪನ್ನರು,ಗುಣವಂತರು, ಧರ್ಮಾತ್ಮರು, ಕಾಯಕಶೀಲರು, ನೊಂದವರಿಗೆ ಸಾಂತ್ವನ ಹೇಳುವವರಾಗಿದ್ದರು. ಆಶ್ರಯ ಬಯಸಿದವರಿಗೆ ಆಶ್ರಯ ಕೊಟ್ಟ ಕಲಿಗಳಾಗಿದ್ದರು. ಈ ಪುಣ್ಯ ನಾಡು ಅನೇಕ ಧರ್ಮ ಗಳ ಉಗಮಕ್ಕೆ ಕಾರಣವಾಗಿದೆ, ವಿಶ್ವಪ್ರಸಿದ್ಧ ಜಲಪಾತವಿದೆ, ಇದು ಚಿನ್ನದ ಗಣಿ ಇರುವ, ಶ್ರೀಗಂಧದ ಬಿಡಾಗಿರುವ ನಾಡಾಗಿದೆ, ಹಚ್ಚ ಹಸಿರಿನ ಕಾಡುಗಳು, ಸುಂದರ ಪಕ್ಷಿಸಂಕುಲ, ಪ್ರಾಣಿಸಂಕುಲ, ಪಾವನ ನದಿಗಳ ತಾಣವಾಗಿದೆ. ಕನ್ನಡ ಲಿಪಿ,ಲಿಪಿಗಳ ರಾಣಿಯೆಂದು ಕರೆಯಲ್ಪಟ್ಟಿದೆ. 8 ಜ್ಞಾನಪೀಠ ಈ ಭಾಷೆಗೆ ಬಂದಿದೆ. ಈ ಎಲ್ಲ ಅಂಶಗಳ ಗಮದಲ್ಲಿಟ್ಟುಕೊಂಡು ಕನ್ನಡ ಸಂಸ್ಕೃತಿಯ ವಾರಸುದಾರರಾದ ತಾವು ಮುನ್ನಡೆಯಿರಿ ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು, ಉಪನ್ಯಾಸಕರು ಹಾಜರಿದ್ದರು.ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ  ಅಯೋಜನೆಯಾಗಿತ್ತು. ಇದೇ ಸನ್ನಿವೇಶದದಲ್ಲಿ ಕನ್ನಡ ಸಂಘವನ್ನ ಉದ್ಘಾಟನೆ ಮಾಡಲಾಯಿತು.