ಹಂಪಿ ಎಕ್ಸ್’ಪ್ರೆಸ್
1336hampiexpress1509@gmail.com
ರಾಜಕಾರಣಿಯಾಗಬೇಕೆಂಬ ತಿಕ್ಕಲಿನಂತೆ ಸ್ವಾಮೀಜಿಯಾಗಬೇಕೆಂಬ ತೆವಲು ಇತ್ತೀಚೆಗೆ ಅಯೋಗ್ಯರಲ್ಲಿ ಹುಟ್ಟಿಕೊಳ್ಳುತ್ತಿದೆ. ಯಾವುದೋ ಮೂಲೆಯಲ್ಲಿ ಮಕಾಡೆ ಮಲಗಿದ್ದು ದಿಢೀರ್ ಎದ್ದು ಕಾವಿತೊಟ್ಟ ಕೂಡಲೇ ಈ ನಾಲಾಯಕ್ಕುಗಳಿಗೆ ಐಎಎಸ್ ಅಧಿಕಾರಿಗಳೂ ತಲೆಬಾಗಿ ವರ್ತಿಸಬೇಕು.
ಅರಿಷಡ್ವರ್ಗವನ್ನು ಬೇತಾಳದಂತೆ ಕಟ್ಟಿಕೊಂಡು, ಸ್ವಾರ್ಥ ದುರಾಸೆಗಳ ಬೆನ್ನ ಹತ್ತಿ, ಬದುಕಿನ ನೆಮ್ಮದಿ ಹಾಳುಮಾಡಿಕೊಂಡು ಅಂತಿಮವಾಗಿ ಆತ್ಮಹತ್ಯೆಯೊಂದೇ ದಾರಿ ಎಂದು ಭಾವಿಸುತ್ತೇವೆ ನಾವು ಸಾಮಾನ್ಯರು. ಖಿನ್ನತೆ ಮತ್ತು ಗೊಂದಲಕ್ಕೊಳ ಗಾಗುವುದು ನಮ್ಮಂಥ ಪಾಪಿಗಳ ಬಲಹೀನತೆಗಳ ಫಲ.
ಇದನ್ನೆಲ್ಲ ಮೆಟ್ಟಿನಿಂತು, ಎಲ್ಲ ಸುಖಭೋಗಗಳನ್ನು ತ್ಯಜಿಸಿ ಸನ್ಯಾಸಿ ಯಾದವರು ಭಗವಂತನ ಸಾಮೀಪ್ಯದಲ್ಲಿದ್ದಾರೆ ಎಂದು ನಂಬ ಅವರ ಬಳಿಗೆ ಇದಕ್ಕೆಲ್ಲ ಪರಿಹಾರ ಕೋರಿ ಹೋಗುತ್ತೇವೆ. ಭಕ್ತರು ಬದುಕುವುದನ್ನು ಕಲಿಸಿ ಎಂದು ಬಂದರೆ ಅಂಥ ಸ್ವಾಮೀಜಿಯೇ ನೇಣಿಗೆ ಶರಣಾಗಿ ನೇತಾಡುತ್ತಿದ್ದರೆ ಆ ಭಕ್ತರ ಗತಿಯೇನಾಗುತ್ತದೆ? ಅಷ್ಟಿಲ್ಲದೇ ಹುಟ್ಟಿಕೊಂಡಿದೆಯೇ ‘ಸಹವಾಸ ದಿಂದ ಸನ್ಯಾಸಿ ಕೆಟ್ಟ’ ಎಂಬ ಗಾದೆಮಾತು.
ಇತ್ತೀಚೆಗೆ ಇಂಥ ಕೆಲ ಸನ್ಯಾಸಿಗಳ ಆತ್ಮಹತ್ಯೆ ಪ್ರಕರಣಗಳು, ಅಪ್ರಾಪ್ತ ಬಾಲಕಿಯರನ್ನು ಲೈಂಗಿಕಕ್ಕೆ ಬಳಸಿಕೊಂಡ ಪ್ರಕರಣಗಳು, ಕಾವಿ ರಾಜಕಾರಣ, ಜಾತಿ ರಾಜಕಾರಣ ಹೆಚ್ಚುತ್ತಿರುವುದನ್ನು ನೋಡಿದರೆ ಪ್ರeವಂತರು ‘ಸ್ವಾಮೀಜಿ’, ‘ಗುರೂಜಿ’ ಎಂಬ ಪದವನ್ನು ಬಳಸುವುದೇ ಅಸಹ್ಯವೆಂಬಂತಾಗಿದೆ. ಸನಾತನ ಪರಂಪರೆಯಷ್ಟೇ ಪುರಾತನ ಇತಿಹಾಸ ವಿರುವ ಕಾವಿವಸ್ತ್ರ ಇಂದು ಪರಮಪಾಪಿಗಳ ರಕ್ಷಾಕವಚದಂತೆ ಬಳಕೆಯಾಗುತ್ತಿರುವುದು ದುರ್ದೈವ.
ತೀರಾ ಇತ್ತೀಚೆಗೆ ನೆನಪಿನಲ್ಲಿರುವಂತೆ 2010ರಲ್ಲಿ ನಿತ್ಯಾನಂದನ ‘ಕಾಮ ಸಾಹಸ’ದ ವಿಡಿಯೋ ಪ್ಯಾನ್ ಇಂಡಿಯಾ ಸಿನಿಮಾದಂತೆ ದೇಶಾದ್ಯಂತ ಪ್ರಸಾರವಾಗಿತ್ತು. 2014ರಲ್ಲಿ ಬೆಂಗಳೂರಿನ ಚ್ ಎಸ್‌ಆರ್ ಬಡಾವಣೆಯ ಜ್ಯೋತಿಷಿ ಕಂ
ಸ್ವಾಮೀಜಿಯ ರಾಸಲೀಲೆ ವಿಡಿಯೋ ಬಿಡುಗಡೆಗೊಂಡಿತ್ತು. 2017ರಲ್ಲಿ ಹುಣಸಮಾರನಹಳ್ಳಿಯ ‘ಕಾಮಿಧಾರಿ’ಯೊಬ್ಬ ಚಿತ್ರನಟಿ ಎನ್ನಲಾದ ಮಹಿಳೆಯೊಂದಿಗೆ ನಡೆಸಿದ ರಾಸಲೀಲೆಯ ವಿಡಿಯೋ ಬಹಿರಂಗವಾಗಿತ್ತು. 2018ರಲ್ಲಿ
ಚಿಕ್ಕಮಗಳೂರಿನ ಸ್ವಾಮೀಜಿ ವಿರುದ್ಧ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪವಾದಾಗ ಸ್ವಾಮೀಜಿ ಪೀಠ ತ್ಯಾಗಕ್ಕೆ ಮುಂದಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿರಿತ್ತು.
2019ರಲ್ಲಿ ತಿಪಟೂರಿನಲ್ಲಿ ಮತ್ತೊಬ್ಬ ಕಾವಿಧಾರಿಯ ‘ತಿಪ್ಪೆ ವಿಡಿಯೋ’ ಬಹಿರಂಗವಾಗಿ ತಿಪ್ಪೆ ಸಾರಿಸುವ ಕೆಲಸವಾಗಿತ್ತು. ಅದೇ ವರ್ಷದಲ್ಲಿ ಯಾದಗಿರಿ ಜಿಲ್ಲೆಯ ಹುಣಸಿಹೋಳಿಯ ಕಾವಿಧಾರಿಯೊಬ್ಬ ಮಹಿಳೆಯೊಂದಿಗೆ ಅಶ್ಲೀಲ ವಿಡಿಯೋ ಚಾಟಿಂಗ್ ಮಾಡಿ ಕಚ್ಚೆ ಹರುಕನ ಪ್ರದರ್ಶನವಾಗಿತ್ತು. 2020ರಲ್ಲಿ ಧಾರವಾಡ ಜಿಯ ನವಲಗುಂದ ಕಾವಿಧಾರಿಯೊಬ್ಬನ ರಾಸ ಲೀಲೆಯ ವಿಡಿಯೋ-ಆಡಿಯೋ ಬಹಿರಂಗವಾಗಿ ಅದರಲ್ಲಿ ಇನ್ನಿಬ್ಬರು ಕಾವಿಧಾರಿಗಳ ಹೆಸರು ಕೇಳಿಸಿತ್ತು.
ಸಾಲದೆಂಬಂತೆ ಮೊನ್ನೆ ಕಾವಿಧಾರಿ ಮಹಿಳೆಯೊಬ್ಬಳ ವಿಡಿಯೋ ಒಂದು ಬಹಿರಂಗವಾಗಿ ಆಕೆ ತಲೆಮರೆಸಿಕೊಂಡಿರುವುದು
ಕಾವಿಲೋಕದ ಕಾಮದುರಂತ. ಇದೆಲ್ಲ ಆರೋಪಗಳನ್ನು, ಪ್ರಸಾರವಾದ ವಿಡಿಯೋಗಳನ್ನು ಇವರುಗಳು ಅದು ಹೇಗೆ ಎದುರಿಸಿ ಬದುಕಿದ್ದಾರೆಯೋ ಅವರೇ ಬಲ್ಲರು. ಕಳೆದ ಸೆಪ್ಟೆಂಬರ್‌ನಲ್ಲಿ ಬಸವಲಿಂಗ ಸ್ವಾಮೀಜಿ ಮತ್ತು ಅಕ್ಟೋಬರ್‌ನಲ್ಲಿ ಬಂಡೇಮಠದ ಸ್ವಾಮೀಜಿ ಈ ಇಬ್ಬರೂ ಆತ್ಮಹತ್ಯೆಗೆ ಶರಣಾಗಿzರೆ. ಇವರಿಬ್ಬರ ಸುತ್ತಲೂ ಮತ್ತದೇ ಕಾಮಕೇಳಿ ಆರೋಪ
ಸುತ್ತಿಕೊಂಡಿದೆ.
ಭಾರತ ಎಂದ ಕೂಡಲೇ ವಿಶ್ವಕ್ಕೆ ಮೊದಲು ಗೋಚರಿಸುವುದೇ ಅಧ್ಯಾತ್ಮಿಕ ಮತ್ತು ಧಾರ್ಮಿಕ ಶ್ರೀಮಂತಿಕೆ ಮತ್ತು ಅದರ ಸಂಕೇತವಾದ ಕೇಸರಿವಸ ತೊಟ್ಟ ಋಷಿಮುನಿಗಳು ಸಾಧುಸಂತರ ಚಿತ್ರಣ. ಕಠೋರ ಧ್ಯಾನ, ತಪಸ್ಸು ಆಚರಿಸಿ
ಭಗವಂತನನ್ನೇ ತಾನು ಕುಳಿತಲ್ಲಿಗೆ ಪ್ರತ್ಯೇಕ್ಷವಾಗುವಂತೆ ಮಾಡಿ ವರವನ್ನು ಸಿದ್ಧಿಸಿಕೊಂಡು ಲೋಕಕಲ್ಯಾಣ ಮಾಡುತ್ತಿದ್ದ ಸನಾತನ ಋಷಿಮುನಿಗಳಿಂದ ಅಧ್ಯಾತ್ಮ-ವಿಜ್ಞಾನ-ಕಾಲಜ್ಞಾನದಂಥ ಸಾಧನೆಗಳ ಮೂಲಕ ಇತಿಹಾಸ ಪುರುಷರಾಗಿದ್ದಾರೆ.
ಆದಿಶಂಕರಚಾರ್ಯರು, ಅಕ್ಕ-ಅಣ್ಣ-ಅಲ್ಲಮರಂಥ ವಚನಕಾರರು, ವ್ಯಾಸರಾಯರು, ಪುರಂದರ ಕನಕದಾಸರು, ಸರ್ವಜ್ಞ ಮೂರ್ತಿ, ಶಿರಡಿ ಸಾಯಿಬಾಬ, ಶಿಶುನಾಳ ಷರೀ-ರಂಥ ಸಂತರು ಬೀದಿಬೀದಿ ಬರಿಗಾಲಿನಲ್ಲಿ ಅಲೆದು ಧರ್ಮವನ್ನು ರಕ್ಷಿಸಿ ಧರ್ಮ ಪುರುಷರೆನಿಸಿಕೊಂಡಿದ್ದಾರೆ. ಸ್ವಾಮಿ ವಿವೇಕಾನಂದರಂತೂ ಆಧುನಿಕ ಭಾರತದ ಸಂತ ಪರಂಪರೆಗೆ ವಿಶ್ವಮಾನ್ಯತೆ ತಂದುಕೊಟ್ಟ ಮಹಾಪುರುಷರು. ಸಿದ್ಧಗಂಗೆಯ ಶಿವಕುಮಾರಸ್ವಾಮೀಜಿಗಳು ಈ ಶತಮಾನದ ಆದರ್ಶ ಸಂತರಾದವರು. ಆದರೆ ಇತ್ತೀಚಿಗೆ ಅನೇಕ ಕಾವಿಧಾರಿಗಳು ಸಿಕ್ಕಿಬಿದ್ದು ಹಿಂದೂಸಂತ ಪರಂಪರೆಗೆ ಕಳಂಕ ತರುತ್ತಿರುವುದು ದೇಶದ ಧಾರ್ಮಿಕ ದೌರ್ಭಾಗ್ಯ.
ಸ್ವಾಮೀಜಿ ಎನಿಸಿಕೊಂಡವರು ಮೊದಲಿಗೆ ಕಾಮವನ್ನು ನಿಗ್ರಹಿಸುವುದನ್ನು ಬಿಟ್ಟು ದೇಹವನ್ನು ನಿಗುರಿಸುತ್ತಿರುವುದು
ದುರದೃಷ್ಟಕರ. ಇಷ್ಟಕ್ಕೂ ಇವರುಗಳು ಕಾವಿ ವಸ್ತ್ರವನ್ನು ಏನೆಂದುಕೊಂಡಿದ್ದಾರೆ? ಕಾವಿ ವಸ್ತ್ರವನ್ನು ತೊಟ್ಟಕೂಡಲೇ ತಮ್ಮ ಎಲ್ಲ ತೀಟೆ-ತೆವಲುಗಳನ್ನು ತೀರಿಸಿಕೊಳ್ಳಬಹುದು. ತಾವು ಏನೆಲ್ಲ ಅನೈತಿಕ ಮಜಾ ಸುಖ ಅನುಭವಿಸಿದರೂ ಈ ಕಾವಿವಸ ನಮಗೆ ರಕ್ಷಣೆ ಕೊಟ್ಟುಬಿಡುತ್ತದೆ ಎನ್ನುವುದಕ್ಕೆ ಅದೇನು ಕಾಂಡೋಮಾ?. ಕಾಮ ಒಂದನ್ನು ಬಿಟ್ಟು ಉಳಿದೆಲ್ಲ ಸುಖಗಳನ್ನು ಅನುಭವಿ ಸುತ್ತಿದ್ದ ಇಂಥವರು ಇಂದು ಕಾಮತೃಷೆಯನ್ನೂ ನಿಗೂಢವಾಗಿ ಅನುಭವಿಸಿಬಿಡೋಣ ಎಂಬ ಚಪಲಕ್ಕೆ ಬಂದಂತಿದೆ.
ರಾಜಕಾರಣಿಯಾಗಬೇಕೆಂಬ ತಿಕ್ಕಲಿನಂತೆ ಸ್ವಾಮೀಜಿಯಾಗಬೇಕೆಂಬ ತೆವಲು ಇತ್ತೀಚೆಗೆ ಅಯೋಗ್ಯರಲ್ಲಿ ಹುಟ್ಟಿಕೊಳ್ಳುತ್ತಿದೆ. ಯಾವುದೋ ಮೂಲೆಯಲ್ಲಿ ಮಕಾಡೆ ಮಲಗಿದ್ದು ದಿಢೀರ್ ಎದ್ದು ಕಾವಿತೊಟ್ಟ ಕೂಡಲೇ ಈ ನಾಲಾಯಕ್ಕುಗಳಿಗೆ ಐಎಎಸ್ ಅಽಕಾರಿಗಳೂ ತಲೆಬಾಗಿ ವರ್ತಿಸಬೇಕು. ವಯಸ್ಸಿನಲ್ಲಿ ಇವರಿಗಿಂತ ಹಿರಿಯರೂ ಇವರುಗಳ ಕಾಲಿಗೆರಗಿ ಆಶೀರ್ವಾದ ಪಡೆಯಬೇಕು. ಇಂಥ ಅಯೋಗ್ಯರಿಗೆ ಡಜನ್ಗಟ್ಟಲೆ ‘ಶ್ರೀ’ಕಾರವನ್ನು ಪೋಣಿಸಿ, ‘ಪರಮಪೂಜ್ಯ’ ಎಂಬ ಪದವನ್ನು ಅಂಟಿಸಿಯೇ ಸಂಬೋಽಸಬೇಕು.
ಇಷ್ಟೆಲ್ಲ ಆದಮೇಲೆ ಐಷರಾಮಿ ಕಾರು, ಎಸಿ ಮಠ, ಓಸಿ ಓಲಗ, ಪಲ್ಲಂಗ ಪಲ್ಲಕ್ಕಿಗಳು. ಇಂಥವರಿಗೆ ಸ್ವಜಾತಿ ಮಂದಿಗಳ ಬೆಂಬಲ. ಒಂದೊಮ್ಮೆ ಅನೈತಿಕವಾಗಿ ಸಿಕ್ಕಿಬಿದ್ದರೆ ಅದರ ತನಿಖೆಯಲ್ಲಿ ಸ್ವಜಾತಿಯ ರಾಜಕಾರಣಿಗಳು ತನಿಖಾಧಿಕಾರಿಗಳ ಪ್ರಭಾವವಿದ್ದರಂತೂ ತನಿಖೆ ಹಳ್ಳ ಹಿಡಿಯು ವುದೇ ಹೆಚ್ಚು. ಇಷ್ಟೇ ಆದರೆ ಹಾಳಾಗಿ ಹೋಗಲಿ ಎನ್ನಬಹುದು. ಆದರೆ ಕೇಸರಿ ಕಾವಿ ತೊಟ್ಟು, ವಿಭೂತಿ ಪಟ್ಟೆ, ನಾಮ ಎಳೆದುಕೊಂಡು ಹಿಂದೂಧರ್ಮದ ವಿರುದ್ಧವೇ ಮಾತನಾಡುವುದು, ಭಗವದ್ಗೀತೆ ಗಿಂತ ಕುರಾನ್ ಹೆಚ್ಚು ಶಾಂತಿಯನ್ನು ಬೋಧಿಸುತ್ತದೆ ಎನ್ನುವುದು, ಹಿಂದೂ ದೈವ ಗಳನ್ನೇ ಅಣುಕಿಸುವುದು, ರಾಜಕಾರಣಿ ಗಳಂತೆ ವರ್ತಿಸುವುದು, ಜಾತಿಗಳನ್ನು ಎತ್ತಿಕಟ್ಟುವುದು, ಸರಕಾರಗಳನ್ನೇ ಬ್ಲಾಕ್‌ಮೆಲ್ಲ್ ಮಾಡುವುದು, ಸಂಸದರಿಗೆ ಇವರೇ ಚಡ್ಡಿಬಿಚ್ಚಿಕೊಂಡು ಹೊಡೆಯು ತ್ತೇನೆ ಎನ್ನುವುದು ಹೀಗೆ ಇಂಥ ಹೇಸಿಗೆಯನ್ನು ಕಂಡ ಜನ ಮಾತನಾಡಿ ಕೊಳ್ಳುವುದೇನೆಂದರೆ ಪವಿತ್ರ ಕಾವಿತೊಟ್ಟು ಹುಚ್ಚು ಸಿದ್ಧಾಂತಗಳನ್ನು ಬೋಽಸುತ್ತ, ಕಳಂಕಿತರಾಗಿ ಸಿಕ್ಕಿಬಿದ್ದು ಮಾನ ಮರ್ಯಾದೆ ಕಳೆದುಕೊಂಡು ಜೈಲು ಸೇರುವುದಕ್ಕಿಂತ ಯಾವ್ಯಾವ ಸ್ವಾಮೀಜಿಗಳು ‘ಅಂತರಂಗ’ದ ಕಾಮಿಗಳಾಗಿದ್ದಾರೋ ಅವರೆಲ್ಲರೂ ಸೈಲೆಂಟಾಗಿ ಅವರೆಲ್ಲರೂ ಸೈಲೆಂಟಾಗಿ ಬದಿಗೆ ಸರಿಯುವುದೇ ಲೇಸು.
ಏಕೆಂದರೆ ನಿತ್ಯ ಟಿವಿಗಳಲ್ಲಿ ಇವರ ಅಶ್ಲೀಲ ವಿಡಿಯೋಗಳು, ಮುಚ್ಚಿದ ಮುಖಗಳು, ಇವರ ಜೈಲು ಆಸ್ಪತ್ರೆ ವಿಚಾರಣೆ ಪೆರೆಡನ್ನು ನೋಡಿ ಪುಟ್ಟ ಮಕ್ಕಳು ‘ಈ ಸ್ವಾಮೀಜಿ ಏನು ಮಾಡಿದ್ದಾರೆ’ ಎಂದು ಮಗ್ಧ ಪ್ರಶ್ನೆ ಕೇಳಿದರೆ ಏನೆಂದು ಉತ್ತರಿಸ ಬೇಕು? ಮಕ್ಕಳಲ್ಲಿ ಇವರ ಬಗ್ಗೆ ಅದೆಂಥ ಗೌರವ ಹುಟ್ಟುತ್ತದೆ? ಕಾವಿತೊಟ್ಟವರ ಇಂಥ ‘ಕಾಮಕಾಂಡಕ್ಕೆ’ ಕಾರಣಗಳನ್ನು ಹುಡುಕುತ್ತ ಹೊರಟರೆ ಮೊದಲಿಗೆ ಇಂಥವರ ಆಹಾರ ಪದ್ಧತಿ.
ಸಂನ್ಯಾಸಿಗಳ ಆಹಾರದಲ್ಲಿ ಕಾಮವನ್ನು ನಿಗ್ರಹಿಸಬಹುದಾದ ಸಾತ್ವಿಕ ಆಹಾರಗಳಿರುತ್ತದೆ. ಉಪ್ಪು-ಹುಳಿ-ಖಾರ ಬಿಟ್ಟು ಗಂಜಿ, ಸೊಪ್ಪು, ಹಣ್ಣು-ಹಂಪಲು ಅವಲಂಬಿಸಬೇಕಾಗುತ್ತದೆ. ಆದರೆ ಅಂಥ ಪ್ರಾಥಮಿಕ ಜ್ಞಾನವೂ ಇವರಿಗಿರುವುದಿಲ್ಲ. ಎರಡನೇ ದೌರ್ಬಲ್ಯವಾಗಿ ಸಿಗುವುದು ಮೊಬೈಲು ಮತ್ತು ಇಂಟರ್ನೆಟ್. ಧ್ಯಾನ, ಯೋಗ, ಭಜನೆ, ಪ್ರವಚನ, ಧರ್ಮಗ್ರಂಥಗಳನ್ನು ಓದುವುದನ್ನು ಬಿಟ್ಟು ಒಂಟಿಯಾಗಿzಗ ಮೊಬೈಲ್‌ನಲ್ಲಿ ಅದೇನೇನು ನೋಡುತ್ತಾರೋ ಅದಕ್ಕಾಗಿ ಅದೆಷ್ಟು ಜಿಬಿ ಡ್ಯಾಟಗಳು ಖಾಲಿಯಾಗುತ್ತದೋ ಅವರೇ ಬಲ್ಲರು. ಹೀಗಾದಾಗ ವಾಂಛೆಗಳು ಹುಟ್ಟಿಕೊಳ್ಳದೇ ಇರುವುದೇ? ಆಗಲೇ ನೋಡಿ ದೇಹದ
ಅಂಗಾಗಳು ಜಾಗೃತಗೊಂಡು ಭೌತಿಕ ಪ್ರಯೋಗಕ್ಕೆ ಇಳಿಯಲೇ ಬೇಕೆನಿಸುವುದು. ಆಗ ಸಿಗುವುದೇ ಇವರ ಸುತ್ತಲಿನ ಅನುಯಾಯಿಗಳೆಂಬ ‘ತಲೆಹಿಡುಕರು’.
ಇಂಥವರ ಬಲೆಯಲ್ಲಿ ಬೀಳುವ ಕಾವಿಧಾರಿಗಳು ಸಿಕ್ಕಬಿದ್ದು ಮುಂಡಮೋಚಿ ಕೊಳ್ಳಬೇಕು. ಈ ‘ಕಾಮಕಾಂಡ; ಕಾವಿಧಾರಿಗಳ
ಸಮಸ್ಯೆ ಮಾತ್ರವಲ್ಲ. ಮೊನ್ನೆ ವ್ಯಾಟಿಕನ್ ಪೋಪ್ ಫ್ರಾನ್ಸಿಸ್ ಕ್ರೈಸ್ತ ಪಾದ್ರಿಗಳಿಗೆ ಮತ್ತು ನನ್ಸ್ (ಮಹಿಳಾ ಸನ್ಯಾಸಿ) ಗಳಿಗೆ ಅಶ್ಲೀಲ ವಿಡಿಯೋಗಳನ್ನು ನೋಡಬಾರದು, ಅದರಿಂದ ‘ಮನಸ್ಸು ಮತ್ತು ದೇಹ ದುರ್ಬಲ’ಗೊಳ್ಳುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ನೀಡಿರುವುದು ಅವರಲ್ಲಿನ ‘ಸಂತರ’ ದೌರ್ಬಲ್ಯವನ್ನು ಸಾರುತ್ತದೆ.
ಹಾಗೆಯೇ ಹೆತ್ತ ಮಗಳನ್ನೇ ವಿವಾಹವಾಗುವಷ್ಟು ಅವಕಾಶವಿರುವ ಧರ್ಮಾಂಧರಿಗೆ ಕಾಮದ ಪಾವಿತ್ರ್ಯ ಹೇಳುವ
ಅವಶ್ಯಕತೆಯಿಲ್ಲ. ಇದೇ ಅಂಕಣದಲ್ಲಿ ‘ಸನ್ಯಾಸತ್ವ ಕಠೋರ ಪರೀಕ್ಷೆಗೊಳಪಡಲಿ’ ಲೇಖನದಲ್ಲಿ ಕಾವಿತೊಡಬೇಕಾದರೆ
ಎಂಥ ‘ಕೋರ್ಸ್’ ಎದುರಿಸಬೇಕೆಂದು ತಿಳಿಸಲಾಗಿತ್ತು. ಅದು ಸಾಧ್ಯವಾಗದೇ ಹೋದರೆ ಕಾವಿ ಕಳಚಿ ಬಿಸಾಡಿ ವೈವಾಹಿಕ
ಜೀವನ ಕಟ್ಟಿಕೊಳ್ಳಲಿ. ಕುಕ್ಕೆಸುಬ್ರಹ್ಮಣ್ಯ ಪೀಠದಲ್ಲಿದ್ದ ವಿದ್ಯಾಭೂಷಣರು ಕಠಿಣ ನಿರ್ಧಾರ ತೆಗೆದುಕೊಂಡು ೪೦ನೇ
ವಯಸ್ಸಿನಲ್ಲಿ ಪೀಠ ತ್ಯಜಿಸಿ ಗೃಹಸ್ಥರಾದರು. ಆದರೆ ತಮ್ಮಲ್ಲಿರುವ ಅಗಾಧವಾದ ಸಂಗೀತ, ವಿದ್ಯೆಯನ್ನು ಬಳಸಿಕೊಂಡು ಕಾವಿಯಿಲ್ಲದೆಯೇ ಅಧ್ಯಾತ್ಮ ಮತ್ತು ಧಾರ್ಮಿಕ ಬದುಕನ್ನು ಯಶಸ್ವಿಯಾಗಿ ಕಂಡುಕೊಂಡು ಇಂದಿಗೂ ಸರ್ವಮಾನ್ಯರಾಗಿ ದ್ದಾರೆ.
ಪ್ರತಿಭಾವಂತ ಪುತ್ರ ಮತ್ತು ಪುತ್ರಿಗೆ ಸಾರ್ಥಕ ತಂದೆ ಎನಿಸಿದ್ದಾರೆ. ಇನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆ ಯವರು ಸಂಸಾರಸ್ಥರಾಗಿಯೂ ಧರ್ಮರಕ್ಷಣೆ, ಅಧ್ಯಾತ್ಮ, ಸಮಾಜಸೇವೆ, ಮಾನವೀಯತೆಯಲ್ಲಿ ಯಾವುದೇ ಸಂತ-ಸ್ವಾಮೀಜಿಗಳನ್ನು ಮೀರಿಸುವಂಥ ಸಾಧನೆ ಮಾಡುತ್ತಿದ್ದಾರೆ. ಕಾವಿ ಎಂಬುದು ನಮ್ಮ ದೇಶದ ಪಾರಂಪರಿಕ ಅಸ್ಮಿತೆ.
ಅದು ಪವಿತ್ರವಾಗಿರಲೇ ಬೇಕು. ಆದ್ದರಿಂದ ಇಂದಿನ ಎಲ್ಲ ಜಾತಿಗಳ ಹಿರಿಯ ಪೂಜ್ಯ ಸ್ವಾಮೀಜಿಗಳು ಒಗ್ಗೂಡಿ ಒಂದು ‘ಧರ್ಮ ಸಂವಿಧಾನ’ ರಚಿಸಿ ಅಯೋಗ್ಯರು, ಅಸಮರ್ಥರು, ಅನಿಷ್ಟರು, ಅವಿವೇಕಿಗಳು ಕಾವಿಯನ್ನು ತೊಡದಂತೆ ನೋಡಿ ಕೊಂಡು ಅದಕ್ಕಾಗಿ ಬಲವಾದ ‘ಮಾನದಂಡ’ ವನ್ನು ಸ್ಥಾಪಿಸಿ ಸ್ವಾಮೀಜಿಗಳ ಕುರಿತು ಮಕ್ಕಳಿಗೆ, ಮುಂದಿನ ಪೀಳಿಗೆಯವರಲ್ಲಿ ಗೌರವ ವನ್ನು, ದೇಶದ ಘನತೆಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ತೋರಬೇಕಿದೆ.