Friday, 22nd November 2024

ಮಾಲಿನ್ಯ ಮಟ್ಟ ತೀವ್ರ: ಡೀಸೆಲ್ ವಾಹನಗಳ ಪ್ರವೇಶಕ್ಕೆ ನಿಷೇಧ

ವದೆಹಲಿ: ದೆಹಲಿಯ ಪಕ್ಕದಲ್ಲಿರುವ ನೋಯ್ಡಾದಲ್ಲಿ ಮಾಲಿನ್ಯದ ಮಟ್ಟವು ತೀವ್ರ ಹದಗೆಟ್ಟಿದೆ. ಮಾಲಿನ್ಯವನ್ನು ಕಡಿಮೆ ಮಾಡಲು ಪ್ರಮುಖ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ನೋಯ್ಡಾ ಪ್ರಾಧಿಕಾರವು ನೋಯ್ಡಾದಲ್ಲಿ ಎಲ್ಲಾ ನಿರ್ಮಾಣ ಕಾರ್ಯಗಳನ್ನು ನಿಷೇಧಿ ಸಿದೆ. ನೋಯ್ಡಾದಲ್ಲಿ ಅಗತ್ಯ ಸೇವೆಗಳಲ್ಲಿ ಓಡುವ ಡೀಸೆಲ್ ವಾಹನ ಹೊರತುಪಡಿಸಿ ಎಲ್ಲಾ ರೀತಿಯ ಡೀಸೆಲ್ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

ನೋಯ್ಡಾದ ಎಲ್ಲಾ ನಿರ್ಮಾಣ ಸ್ಥಳಗಳಲ್ಲಿ ಕೆಲಸವನ್ನು ನಿಷೇಧಿಸಲಾಗಿದೆ. ಎಲ್ಲಾ ರೀತಿಯ ಖಾಸಗಿ ಮತ್ತು ವಾಣಿಜ್ಯ ನಿರ್ಮಾಣ ಸೈಟ್‌ಗಳನ್ನು ನಿಷೇಧಿಸಲಾಗಿದೆ. ಇಲ್ಲಿ ಯಾರಿಗೂ ಕೆಲಸ ಮಾಡಲು ಅನುಮತಿ ಇರುವುದಿಲ್ಲ. ಒಂದು ವೇಳೆ ನಿಯಮ ಮೀರಿ ಯಾರಾದರೂ ಕೆಲಸ ಮಾಡುತ್ತಿರುವುದು ಕಂಡುಬಂದರೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ.

ಡೀಸೆಲ್ ಎಂಜಿನ್ ಹೊಂದಿರುವ ಅಗತ್ಯ ಸೇವೆಗಳಲ್ಲಿ ಚಲಿಸುವ ವಾಹನಗಳನ್ನು ಹೊರತುಪಡಿಸಿ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.