Friday, 22nd November 2024

ತೆಹ್ರಿಯಲ್ಲಿ 4.5 ತೀವ್ರತೆಯ ಭೂಕಂಪ

ತ್ತರಾಖಂಡ: ಉತ್ತರಾಖಂಡದ ತೆಹ್ರಿಯಲ್ಲಿ ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪ ಸಂಭವಿಸಿದೆ.

ಉತ್ತರಕಾಶಿಯ ಪೂರ್ವ-ಆಗ್ನೇಯಕ್ಕೆ 17 ಕಿಲೋಮೀಟರ್ ದೂರದಲ್ಲಿ 5 ಕಿಲೋ ಮೀಟರ್ ಆಳದಲ್ಲಿ 30.67 ಡಿಗ್ರಿ ಅಕ್ಷಾಂಶ ಮತ್ತು 78.60 ಡಿಗ್ರಿ ರೇಖಾಂಶದಲ್ಲಿ ಸಂಭವಿ ಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.

ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಇನ್ನೂ ವರದಿಯಾಗಿಲ್ಲ. ವರದಿಗಳ ಪ್ರಕಾರ, ದೆಹಲಿ-ಎನ್‌ಸಿಆರ್‌ನಲ್ಲಿ ಲಘು ಕಂಪನದ ಅನುಭವವಾಗಿದೆ.

ಉತ್ತರಕಾಶಿ, ಚಮೋಲಿ, ರುದ್ರಪ್ರಯಾಗ ಮತ್ತು ಉತ್ತರಾಖಂಡದ ಹಲವು ಪ್ರದೇಶಗಳು ಕಳೆದ ಆರು ವರ್ಷಗಳಿಂದ ಭೂಕಂಪ ಗಳಿಂದ ಪದೇ ಪದೇ ನಡುಗುತ್ತಿವೆ. ಫೆಬ್ರವರಿ 6 ರಂದು 5.8 ತೀವ್ರತೆಯ ಭೂಕಂಪ ಸಂಭವಿಸಿತ್ತು.