Monday, 25th November 2024

ಬಿಸಿಯೂಟ ನೌಕರರ ಬಾಕಿ ಗೌರವಧನ ಬಿಡುಗಡೆಗೆ ಒತ್ತಾಯ

ರಾಯಚೂರು: ಅಕ್ಷರ ದಾಸೋಹ ಬಿಸಿಯೂಟ ನೌಕರರ,ಬಾಕಿ ಇರುವ ಗೌರವಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಚಿಸಿ ಯೂಟ ನೌಕರರ ಸಂಘ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿ ದರು.

ರಾಯಚೂರು ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ಬಿಸಿಯೂಟ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ಬಾಕಿ ಇರುವ ಮೂರು ತಿಂಗಳು ಹದಿನೈದು ದಿವಸಗಳ ಗೌರವಧನವನ್ನು ಬಿಡುಗಡೆ ಮಾಡಬೇಕು.ಅತೀಕಡಿಮೆ ಗೌರವಧನದ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿಸಿ ಯೂಟ ನೌಕರರಿಗೆ ನಿಗದಿತ ಸಮಯಕ್ಕೆ ಗೌರವಧನ ನೀಡದೇ ಇರುವ ಸರಕಾರದ ಕ್ರಮ ಖಂಡನೀಯ.ನಿಗಧಿತ ಸಮಯಕ್ಕೆ ವೇತನ ನೀಡದೇ ಇರುವುದರಿಂದ ಬಿಸಿಯೂಟ ನೌಕರರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಇವರ ಜೀವನ ನಿರ್ವಹಣೆ ಕಷ್ಟದಾಯಕವಾಗಿದೆ ಎಂದು ದೂರಿದರು.

ಗೌರವಧನದ ವಿಷಯವಾಗಿ ಅಧಿಕಾರಿಗಳನ್ನು ವಿಚಾರಿಸಿದರೆ ಕೆಲ ತಾಂತ್ರಿಕ ಸಮಸ್ಯೆಗಳನ್ನು ಹೇಳುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ನಿಗದಿತ ಸಮಯದಲ್ಲಿ ಅಧಿಕಾರಿಗಳು,ತಾಂತ್ರಿಕ ಸಮಸ್ಯೆಯನ್ನು ನಿವಾರಿಸಿ ಬಿಸಿಯೂಟ ನೌಕರರಿಗೆ ಗೌರವಧನ ನೀಡುವಂತಾಗ ಬೇಕು ಮತ್ತು ಕೆಲ ಶಾಲೆಗಳಲ್ಲಿ ಬಿಸಿಯೂಟ ನೌಕರರಿಗೆ ಸಾದಿಲ್ವರು ಹಣ ಬಿಡುಗಡೆಯಾಗಿರುವುದಿಲ್ಲ ಮತ್ತು ಮುಖ್ಯೋಪಾಧ್ಯಾ ಯರ, ಎಸ್.ಡಿ.ಎಂ.ಸಿ.ಅಸಹಕಾರದಿಂದ ಬಿಸಿಯೂಟ ನೌಕರರು ಸಮರ್ಪಕವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿಸಿಯೂಟ ನೌಕರರಿಗೆ ಬಾಕಿ ಇರುವ ಆಗಷ್ಟ,ಸೆಪ್ಟೆಂಬರ್, ಅಕ್ಟೋಬರ್, 2022 ರ ಮತ್ತು ಮೇ ತಿಂಗಳ 15 ದಿನಗಳ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿ.ಎಸ್.ಶರಣಬಸವ, ಅಕ್ಕಮಹಾದೇವಿ, ಕಲ್ಯಾಣಮ್ಮ, ನಾಗಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.