ಸಾಂಬಾ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ 2 ಬಸ್ಗಳು ಡಿಕ್ಕಿಯಾಗಿ ಮಹಿಳೆ ಮತ್ತು ಆಕೆಯ ಮಗಳು ಸೇರಿದಂತೆ ಮೂವರು ಮೃತಪಟ್ಟಿ ದ್ದಾರೆ. ಅಪಘಾತದಲ್ಲಿ 17 ಮಂದಿ ಗಾಯಗೊಂಡಿದ್ದಾರೆ.
ಜಮ್ಮು-ಪಠಾಣ್ಕೋಟ್ ಹೆದ್ದಾರಿಯಲ್ಲಿ ನಾನಕೆ ಚಾಕ್ನಲ್ಲಿ ಅತಿ ವೇಗವಾಗಿ ಬಂದ ಒಂದು ಬಸ್ ಅನ್ನು ಇನ್ನೊಂದು ಬಸ್ ಓವರ್ಟೇಕ್ ಮಾಡುವಾಗ ಈ ಅಪಘಾತ ಸಂಭವಿಸಿದೆ. ಒಂದು ಬಸ್ ಸಹರಾನ್ಪುರಕ್ಕೆ ತೆರಳುತ್ತಿದ್ದರೆ ಇನ್ನೊಂದು ಬಸ್ ಕಥುವಾ ಜಿಲ್ಲೆಗೆ ಪ್ರಯಾಣಿಸುತ್ತಿತ್ತು.
ಮೃತರನ್ನು ಪಂಜಾಬ್ನ ಟಾಲಾ ಮೂಲದ ಮಂಗಿ ದೇವಿ (36), ಅವರ 14 ವರ್ಷದ ಮಗಳು ತಾನಿಯಾ ಮತ್ತು ರಾಜ್ಪುರದ 58 ವರ್ಷದ ಕಸ್ತೂರಿ ಲಾಲ್ ಎಂದು ಗುರುತಿಸಲಾಗಿದೆ. ಸಾಂಬಾ ಜಿಲ್ಲಾಡಳಿತವು ಮೃತರ ಕುಟುಂಬಕ್ಕೆ ತಲಾ 1 ಲಕ್ಷ ರೂ., ತೀವ್ರವಾಗಿ ಗಾಯಗೊಂಡವರಿಗೆ 50 ಸಾವಿರ ರೂ. ಹಾಗೂ ಸಣ್ಣಪುಟ್ಟ ಗಾಯವಾದವರಿಗೆ 10 ಸಾವಿರ ರೂ. ಪರಿಹಾರ ಘೋಷಿಸಿದೆ.