Sunday, 15th December 2024

ಮಠ ಮಾನ್ಯಗಳು ಸಂಸ್ಕಾರಯುತ ಬದುಕಿಗೆ ದಾರಿದೀಪವಾಗಿವೆ

ಇಂಡಿ: ಮಠ ಮಾನ್ಯಗಳು ಮನುಷ್ಯನ ಅಂದಕಾರ ಹೋಗಲಾಡಿಸಿ ಸಂಸ್ಕಾರಯುತ ಬದುಕಿಗೆ ದಾರಿದೀಪವಾಗಿವೆ ಎಂದು ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ಹೇಳಿದರು.

ತಾಲೂಕಿನ ತೆಗ್ಗೆಳ್ಳಿಯ ಶ್ರೀಸದ್ಗರು ಸಿದ್ದಲಿಂಗೇಶ್ವರ ಗವಿಮಠದ ಪುಣ್ಯ ಸ್ಮರಣೆ ಹಾಗೂ ಜಾತ್ರಾಮಹೋತ್ಸವ ರಥೋತ್ಸವ ಹಾಗೂ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯ ಕ್ರಮದ ಅಂಗವಾಗಿ ನಡೆದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು
ಮಠ, ಮಾನ್ಯಗಳು ಮನುಷ್ಯನ ವ್ಯಕ್ತಿತ್ವವನ್ನು ಆಚಾರ ,ವಿಚಾರಗಳನ್ನು ಬದಲಿಸುವ ತಾಣಗಳು, ಇಂತಹ ಮಠಗಳಲ್ಲಿ ಅಭಿನವ ಮುರುಘೇಂದ್ರರು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಧಾರ್ಮಿಕ ಸಾಮಾಜಿಕ ಸಂಸ್ಕಾರ ನೀಡುವಲ್ಲಿ ನಿರತರಾಗಿದ್ದಾರೆ.

ಅಭಿನವ ಮರುಘೇಂದ್ರ ಶಿವಚಾರ್ಯರು ಸಾಮೋಹಿಕ ವಿವಾಹಗಳ ಮೂಲಕ ಬಡವರಿಗೆ ಆಶ್ರಯದಾತರಾಗಿದ್ದಾರೆ. ಶಿಕ್ಷಣ ದಾಸೋಹ, ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ತೋಡಗಿಸಿಕೊಂಡಿದ್ದಾರೆ ಎಂದರು.

ಸಾನಿಧ್ಯವಹಿಸಿ ಅಭಿನವ ಮುರುಘೇಂದ್ರ ಶಿವಚಾರ್ಯರು ವಹಿಸಿ ಆರ್ಶೀವಚನ ನೀಡಿ ದರು. ನೈತೃತ್ವ ಡಾ. ರುದ್ರಮುನಿ ಶಿವಾಚಾರ್ಯರು ವಹಿಸಿದರು. ಅಧ್ಯಕ್ಷೆ ವಿಠ್ಠಲಗೌಡ ವಾಯ್ ಪಾಟೀಲ ವಹಿಸಿದರು.

ಅಣ್ಣಪ್ಪಸಾಹುಕರ ಖೇನೂರ, ಗುರಲಿಂಗಪ್ಪಗೌಡ ತೆಗ್ಗೆಳ್ಳಿ, ಗಂಗಾಧರ ಶಾಸ್ತಿç, ಸಿದ್ದು ಡಂಗಾ, ಅವಿನಾಶ ಬಗಲಿ,ಮಹುಬೂಬ ಬೇನೂರ, ಚಂದರಶೇಖರ ಪಸೋಡಿ ಬಾಬುಗೌಡ ಬಿರಾದಾರ, ನಿಂಗನಗೌಡ ಬಿರಾದಾರ ಭಿಮರಾಯ ಸಿರಕನಹಳ್ಳಿ ಇದ್ದರು.