Sunday, 15th December 2024

ನಾಲ್ಕೂವರೆ ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಅಮೆಜಾನ್ ಫ್ಯೂಚರ್ ಇಂಜಿನಿಯರ್‌ಗೆ ಒಂದು ವರ್ಷದ ಸಂಭ್ರಮ

ಬೆಂಗಳೂರು: ಅಮೆಜಾನ್‌ನ ಫ್ಲ್ಯಾಗ್‌ಶಿಪ್‌ ಜಾಗತಿಕ ಕಂಪ್ಯೂಟರ್ ಸೈನ್ಸ್‌ ಎಜುಕೇಶನ್‌ ಪ್ರೋಗ್ರಾಮ್‌ ಅಮೆಜಾನ್ ಫ್ಯೂಚರ್ ಇಂಜಿನಿಯರ್ (ಎಎಫ್‌ಇ) ಭಾರತದಲ್ಲಿ ಒಂದು ವರ್ಷವನ್ನು ಪೂರೈಸಿದೆ.

ಇಂಟರ್ಯಾಕ್ಟಿವ್ ಡಿಜಿಟಲ್ ಮತ್ತು ಮೌಖಿಕ ಕಲಿಕೆ ಮಧ್ಯಪ್ರವೇಶಗಳ ಮೂಲಕ ಕಂಪ್ಯೂಟರ್ ಸೈನ್ಸ್ ಅನ್ನು ಕಲಿಯಲು 11 ರಾಜ್ಯಗಳ 3000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ 4.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಮೆಜಾನ್ ಬೆಂಬಲ ನೀಡಿದೆ. 3 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಈ ನೆರವು ನೀಡಲಾಗಿದೆ ಮತ್ತು ಇವರು ಸಾಮಾನ್ಯವಾಗಿ ಕಡಿಮೆ ಆದಾಯ ಹೊಂದಿ ರುವ ಮತ್ತು ಸಂಪನ್ಮೂಲ ಕೊರತೆ ಹೊಂದಿರುವ ಕುಟುಂಬಗಳಾಗಿದ್ದು, ಕಂಪ್ಯೂಟರ್ ಸೈನ್ಸ್ ಅಧ್ಯಯನಕ್ಕೆ ಸಂಪನ್ಮೂಲಗಳ ಕೊರತೆ ಹೊಂದಿರುವ ಮತ್ತು ತಂತ್ರಜ್ಞಾನ ಉದ್ಯಮದಲ್ಲಿ ಲಭ್ಯವಿರುವ ವೃತ್ತಿಯ ಬಗ್ಗೆ ಕಲಿಯಲು ಅವಕಾಶಗಳ ಕೊರತೆಯನ್ನು ಇವರು ಹೊಂದಿರುತ್ತಾರೆ. ಮೊದಲ ವರ್ಷದಲ್ಲಿ, ಕಡಿಮೆ ಆದಾಯದ ಕುಟುಂಬಗಳ 200 ಹೆಣ್ಣುಮಕ್ಕಳಿಗೆ ಕಾರ್ಯಕ್ರಮ ಬೆಂಬಲ ನೀಡಿದೆ. ಇವರಿಗೆ ಕಂಪ್ಯೂಟರ್ ಸೈನ್ಸ್‌ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿವೇತನಗಳನ್ನು ನೀಡಲಾಗಿತ್ತು.

ಅಮೆಜಾನ್‌ನ ಬೆಂಬಲದಿಂದ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್‌ ಕಲಿಕೆ ಪಯಣವನ್ನು ಇಂಟರ್‍ಯಾಕ್ಟಿವ್ ಮತ್ತು ಪ್ರಾಯೋಗಿಕ ಕಂಟೆಂಟ್‌ನೊಂದಿಗೆ ಆರಂಭಿಸಿದ್ದಾರೆ. ಇದನ್ನು ಎಎಫ್‌ಇ ಲಾಭೋದ್ದೇಶ ರಹಿತ ಪಾಲುದಾರರು ತಮ್ಮ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಒದಗಿಸಿದ್ದಾರೆ. ಎಫ್‌ಎಇ ಅಂದಾಜು 70 ಲ್ಯಾಬ್‌ಗಳನ್ನು ಸ್ಥಾಪಿಸಿದೆ. ಇದರಲ್ಲಿ ವಿದ್ಯಾರ್ಥಿಗಳು ಕೋಡ್ ಮಾಡಲು ಕಲಿತಿದ್ದಾರೆ ಮತ್ತು ರಾಸ್ಪ್‌ಬೆರಿ ಪಿಐ ಮತ್ತು ಸೆನ್ಸರ್‌ಗಳಂತಹ ಭೌತಿಕ ಕಂಪ್ಯೂಟಿಂಗ್ ಕಾಂಪೊನೆಂಟ್‌ಗಳನ್ನು ಬಳಸಿಕೊಂಡು ಲೈವ್ ಪ್ರಾಜೆಕ್ಟ್‌ಗಳನ್ನು ನಿರ್ಮಿಸಿದ್ದಾರೆ. ಡಿಜಿಟಲ್ ಅಸೆಟ್‌ಗಳ ಜೊತೆಗೆ ಈ ಲ್ಯಾಬ್‌ಗಳು ತಮ್ಮ ವಿದ್ಯಾರ್ಥಿಗಳಿಗೆ ಸಮಗ್ರ ಕಲಿಕೆ ಅನುಭವವನ್ನು ಒದಗಿಸಲು ಮತ್ತು ಕಂಪ್ಯೂಟರ್‌ಗಳು ಹಾಗೂ ತಂತ್ರಜ್ಞಾನವನ್ನು ಬಳಸಿ ಪ್ರಯೋಗ ನಡೆಸಲು ಶಾಲೆಗಳಿಗೆ ಅನುವು ಮಾಡಿವೆ. ಎಎಫ್‌ಇ ಸ್ಕಾಲರ್‌ಗಳಿಗಾಗಿ ಅಮೆಜಾನ್‌ ಪ್ರತಿ ವಿದ್ಯಾರ್ಥಿಗೂ 1.6 ಲಕ್ಷ ಮೊತ್ತವನ್ನು ನಾಲ್ಕು ವರ್ಷಗಳವರೆಗೆ ಒದಗಿಸಲಿದೆ. ಜೊತೆಗೆ ಅಮೆಜಾನಿಯನ್ನರಿಂದ ಮೆಂಟರ್‌ಶಿಪ್‌ ಮತ್ತು ಬೂಟ್‌ಕ್ಯಾಂಪ್ ಸ್ಟೈಲ್ ಕೋರ್ಸ್‌ಗಳನ್ನು ಒದಗಿಸಲಿದೆ.

“ಅಮೆಜಾನ್ ಫ್ಯೂಚರ್ ಇಂಜಿನಿಯರ್‌ ಅನ್ನು ಕಂಪ್ಯೂಟರ್ ಸೈನ್ಸ್‌ ಶಿಕ್ಷಣವನ್ನು ವಿಕೇಂದ್ರೀಕರಿಸುವ ಉದ್ದೇಶದಿಂದ ಭಾರತದಲ್ಲಿ ಆರಂಭಿಸಲಾಗಿದೆ. ಪ್ರತಿ ಮಗುವೂ ಕ್ರಿಯೇಟರ್ ಆಗಲಿ. ಬರಿ ತಂತ್ರಜ್ಞಾನದ ಬಳಕೆದಾರ ಆಗದಿರಲಿ ಎಂಬುದು ಇದರ ಉದ್ದೇಶವಾಗಿದೆ. ಎಎಫ್‌ಇ ಆರಂಭವಾದಂದಿನಿಂದಲೂ, ಹಲವು ರಾಜ್ಯಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಸೈನ್ಸ್ ಶಿಕ್ಷಣವನ್ನು ವ್ಯವಸ್ಥಿಕವಾಗಿ ಅಳವಡಿಸಿಕೊಳ್ಳುವುದನ್ನು ಬೆಂಬಲಿಸಲು ನಮ್ಮ ಪಾಲುದಾರ ಸಂಸ್ಥೆಗಳ ಜೊತೆಗೆ ನಾವು ಶ್ರಮಿಸುತ್ತಿದ್ದೇವೆ” ಎಂದು ಕಮ್ಯೂನಿಟಿ, ಸಿಎಸ್ಆರ್‌ ಇಂಡಿಯಾ ಮತ್ತು ಎಪಿಎಸಿ ವಿಭಾಗದ ಅಮೆಜಾನ್ ಮುಖ್ಯಸ್ಥೆ ಅನಿತಾ ಕುಮಾರ್‌ ಹೇಳಿದ್ದಾರೆ.

“ನಾವು ಕಂಪ್ಯೂಟರ್ ಸೈನ್ಸ್‌ ಕಲಿಕೆ ಅವಕಾಶಗಳನ್ನು ಒದಗಿಸುತ್ತಿದ್ದೇವೆ. ಇದರಲ್ಲಿ ಇಂಟರ್‍ಯಾಕ್ಟಿವ್ ಕಲಿಕೆ ಕಂಟೆಂಟ್ ಅನ್ನು ನೈಜ ಜಗತ್ತಿನ ಕಂಪ್ಯೂಟರ್ ಸೈನ್ಸ್‌ ಅಪ್ಲಿಕೇಶನ್‌ ಆಧಾರದಲ್ಲಿ ಸ್ಥಳೀಯ ಭಾಷೆಗಳಲ್ಲಿ ಒದಗಿಸುತ್ತಿದ್ದೇವೆ. ಶಾಳೆಗಳಿಗಾಗಿ ಪಠ್ಯಕ್ರಮ ವನ್ನು ಕ್ಯುರೇಟ್ ಮಾಡಿದ್ದೇವೆ ಮತ್ತು ಸಿಎಸ್‌ನಲ್ಲಿ ಶಿಕ್ಷಕರಿಗೆ ಕೋರ್ಸ್‌ಗಳನ್ನು ಮಾಡಿದ್ದೇವೆ ಮತ್ತು ಸಿಎಸ್‌ ಬೋಧನೆಗೆ ಹೆಚ್ಚುವರಿ ಸಂಪನ್ಮೂಲ ವ್ಯಕ್ತಿಯನ್ನು ಒದಗಿಸಿದ್ದೇವೆ ಮತ್ತು ಸಾಧ್ಯವಿದ್ದಲ್ಲಿ ಮೂಲಸೌಕರ್ಯ ಕೊರತೆಯನ್ನು ನೀಗಿಸಿದ್ದೇವೆ. ಈ ಉಪಕ್ರಮಗಳ ಮೂಲಕ, ಗುಣಮಟ್ಟದ ಕಂಪ್ಯೂಟರ್ ಸೈನ್ಸ್‌ ಶಿಕ್ಷಣವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ವೃತ್ತಿ ಆಯ್ಕೆಯನ್ನು ಪ್ರೋತ್ಸಾಹಿಸಬಹುದು ಮತ್ತು ವೈವಿಧ್ಯಮಯ ಮತ್ತು ಸಮಗ್ರ ತಂತ್ರಜ್ಞಾನ ಉದ್ಯಮವನ್ನು ರೂಪಿಸಬಹುದು ಎಂದು ನಾವು ಭಾವಿಸಿದ್ದೇವೆ” ಎಂದು ಅನಿತಾ ಹೇಳಿದ್ದಾರೆ.

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಶ್ರೀ ರಾಜೀವ್‌ ಚಂದ್ರಶೇಖರ್ ಮಾತನಾಡಿ “ಕೋವಿಡ್ ನಂತರ ಜಗತ್ತಿನಾದ್ಯಂತ ಡಿಜಿಟಲೀಕರಣ ತ್ವರಿತವಾಗಿ ನಡೆಯುತ್ತಿದ್ದು, ಭಾರತ ಮತ್ತು ಯುವ ಭಾರತೀಯರಿಗೆ ಅಪಾರ ಅವಕಾಶಗಳನ್ನು ಒದಗಿಸಿದೆ. ಮುಂದಿನ ದಶಕವು ಭಾರತಕ್ಕೆ ಟೆಕ್‌ಏಡ್ ಆಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಊಹಿಸಿದ್ದಾರೆ. ಉದ್ಯಮಕ್ಕೆ ಸೂಕ್ತವಾದ ಕೌಶಲಗಳನ್ನು ಮತ್ತು ಉದ್ಯೋಗ ಅವಕಾಶಗಳನ್ನು ವಿವಿಧ ಕೌಶಲ ಒದಗಿಸುವುದು, ಕೌಶಲ ವರ್ಧನೆ ಮಾಡುವುದು ಮತ್ತು ಕೌಶಲ ಮರುರೂಪಣೆ ಕಾರ್ಯಕ್ರಮಗಳ ಮೂಲಕ ನಾಗರಿಕ ರನ್ನು ಸಬಲಗೊಳಿಸಲು ಬದ್ಧವಾಗಿದೆ.

ಅದರಲ್ಲೂ ವಿಶೇಷವಾಗಿ ಡಿಜಿಟಲ್ ಕೌಶಲ್ಯಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಣ ಮಾಡಲಾಗಿದೆ. ಅಮೆಜಾನ್ ಇಂಡಿಯಾದ ಫ್ಯೂಚರ್ ಇಂಜಿನಿಯರ್ಸ್‌ ಪ್ರೋಗ್ರಾಮ್‌ ನಮ್ಮ ಹಿಂದುಳಿದ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಮತ್ತು ಕೌಶಲ್ಯ ಗಳನ್ನು ಒದಗಿಸುತ್ತದೆ ಎಂದು ನಾನು ಭಾವಿಸಿದ್ದೇನೆ.

ಈ ಕಾರ್ಯಕ್ರಮದಲ್ಲಿ ಮುಂದುವರಿಯುತ್ತಿರುವ ಎಲ್ಲರಿಗೂ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನವ ಭಾರತ ಮತ್ತು ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ, ಸಬ್‌ಕಾ ವಿಶ್ವಾಸ, ಸಬ್‌ಕಾ ಪ್ರಯಾಸ್‌ ಅನ್ನು ಸಬಲಗೊಳಿಸುತ್ತಿರುವುದಕ್ಕೆ ನಾನು ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.”