Sunday, 15th December 2024

ಮೃತ ತಂದೆಯನ್ನು ಬದುಕಿಸಲು ಮಗುವಿನ ಬಲಿ ಯತ್ನ: ಮಹಿಳೆ ಬಂಧನ

ವದೆಹಲಿ: ಮೃತ ತಂದೆಯನ್ನು ಬದುಕಿಸುವ ಹುಚ್ಚುತನದಿಂದ ಮಗುವನ್ನು ಅಪಹರಿಸಿ ಬಲಿ ನೀಡಲು ಮುಂದಾದ ಆರೋಪದ ಮೇಲೆ 25 ವರ್ಷದ ಮಹಿಳೆಯನ್ನು ಬಂಧಿಸ ಲಾಗಿದೆ.

ಆರೋಪಿಯಿಂದ ಮಗುವನ್ನು ಸುರಕ್ಷಿತವಾಗಿ ವಶಪಡಿಸಿಕೊಳ್ಳಲಾಗಿದ್ದು, ಬಂಧಿತೆ ಕೋಟ್ಲಾ ಮುಬಾರಕ್‌ಪುರ ನಿವಾಸಿ ಶ್ವೇತಾ ಎಂದು ಗುರುತಿಸಲಾಗಿದೆ. ಆಕೆ ಎರಡು ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಅಪಹರಣ ಮಾಡಿದ ಮಹಿಳೆ ತನ್ನನ್ನು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದು ತಾನು ಜಚ್ಚಾ-ಬಚ್ಚಾ ಆರೈಕೆಗಾಗಿ ಕೆಲಸ ಮಾಡುವ ಎನ್‌ಜಿಒ ಸದಸ್ಯೆ ಎಂದು ಪರಿಚಯಿಸಿಕೊಂಡಿದ್ದಾಳೆ ಎಂದು ಶಿಶುವಿನ ತಾಯಿ ತಿಳಿಸಿದ್ದಾರೆ.

ತಾಯಿ ಮತ್ತು ಮಗುವಿಗೆ ಉಚಿತ ಔಷಧ ಮತ್ತು ಸಲಹೆ ನೀಡುವುದಾಗಿ ಶ್ವೇತಾ ಭರವಸೆ ನೀಡಿ ನಂತರ, ನವಜಾತ ಶಿಶುವನ್ನು ಪರೀಕ್ಷಿಸುವ ನೆಪದಲ್ಲಿ ಹಿಂಬಾಲಿಸಿ ಅಪಹರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ತಂದೆ ಅಕ್ಟೋಬರ್‌ನಲ್ಲಿ ನಿಧನ ಹೊಂದಿದ್ದು, ಅಂತಿಮ ವಿಧಿಗಳ ಸಮಯದಲ್ಲಿ, ಅದೇ ಲಿಂಗದ ಶಿಶುವಿನ ನರಬಲಿಯು ತನ್ನ ತಂದೆಯನ್ನು ಪುನರುಜ್ಜೀವನಗೊಳಿಸಬಹುದು ಮತ್ತು ಅವರನ್ನು ಜೀವಂತಗೊಳಿಸಬಹುದು ಎಂದು ಶ್ವೇತಾ ಬಹಿರಂಗ ಪಡಿಸಿದ್ದಾಳೆ ಅಧಿಕಾರಿ ಹೇಳಿದ್ದಾರೆ.