ಬೆಸ್ಕಾಂ ಗ್ರಾಹಕರು ಸತತ ಮೂರು ತಿಂಗಳುಗಳ ಕಾಲ ವಿದ್ಯುತ್ ಬಿಲ್ ಅನ್ನು ಪಾವತಿಸ ದಿದ್ದಲ್ಲಿ, ವಿದ್ಯುತ್ ಸಂಪರ್ಕ ಒಪ್ಪಂದ ವನ್ನು ರದ್ದುಗೊಳಿಸಲು ಬೆಸ್ಕಾಂ ಕ್ರಮ ಕೈಗೊಳ್ಳು ತ್ತದೆ ಎಂದು ಬೆಸ್ಕಾಂ ಎಂಡಿ ಟ್ವಿಟರ್ ಖಾತೆಯ ಮೂಲಕ ಎಚ್ಚರಿಕೆ ಕೊಡಲಾಗಿದೆ.
‘ಒಪ್ಪಂದ ರದ್ದತಿಯ ನಂತರ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಹಕರು ಹೊಸ ಸಂಪರ್ಕ ಕ್ಕಾಗಿ ಅರ್ಜಿ ಸಲ್ಲಿಸಬೇಕಿರುತ್ತದೆ’ ಎಂದು ಬೆಸ್ಕಾಂ ಹೇಳಿದೆ.
ಆನ್ಲೈನ್ ಮೂಲಕ ಪಾವತಿ ಮಾಡಿ ಆನ್ಲೈನ್, ಆಫ್ಲೈನ್ ಮೂಲಕ ಬೆಸ್ಕಾಂ ಬಿಲ್ ಪಾವತಿ ಮಾಡಲು ಅವಕಾಶ ನೀಡಲಾ ಗಿದೆ.
ನವೆಂಬರ್ ಮೊದಲ ವಾರದಲ್ಲಿ ಆನ್ಲೈನ್ ಮೂಲಕ ಬಿಲ್ ಪಾವತಿಸಲು ನೋಡಿದರೆ ಹೆಚ್ಚಿನ ಬಿಲ್ ತೋರಿಸುತ್ತಿತ್ತು. ಆದರೆ ಆಫ್ಲೈನ್ ಮೂಲಕ ಪಾವತಿ ಮಾಡುವಾಗ ಕಡಿಮೆ ಇರುತ್ತಿತ್ತು. ಆದ್ದರಿಂದ ಕೆಲವು ದಿನ ಆಫ್ಲೈನ್ ಮೂಲಕ ಪಾವತಿ ಮಾಡಿ ಎಂದು ಬೆಸ್ಕಾಂ ಗ್ರಾಹಕರಿಗೆ ಮನವಿ ಮಾಡಿತ್ತು.