Sunday, 15th December 2024

ಟಿಪ್ಪು ಸುಲ್ತಾನ್‌ರವರ 272ನೇ ಜಯಂತ್ಯೋತ್ಸವ

ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಹಜರತ್ ಟಿಪ್ಪು ಸುಲ್ತಾನ್‌ರವರ ೨೭೨ನೇ ಜಯಂತ್ಯೋತ್ಸವ ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಸರ್ವಧರ್ಮ ಪ್ರೀತಿಗೆ ಪಾತ್ರರಾದ ಟಿಪ್ಪು ಬ್ರೀಟಿಷರಿಗೆ ಸಿಂಹಸ್ವಪ್ನರಾಗಿದ್ದರು. ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಗಿಸಿ ತಾಯ್ನಾಡ ನ್ನು ಉಳಿಸಿದ್ದಾರೆ. ಇಂದು ಯುವಕರು ದೇಶ ಪ್ರೇಮ ಬೆಳೆಸಿಕೊಳ್ಳಬೇಕು. ದೇಶ ನನಗೇನು ಕೊಟ್ಟಿದೆ ಎನ್ನುವದಕ್ಕಿಂತ ನಾವು ದೇಶಕ್ಕೆ ಎನು ಕೊಡಬೇಕಾಗಿದೆ ಎಂಬುದು ಮರೆಯಬಾರದರು ಎಂದು ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ಹೇಳಿದರು.

ಅಯೂಬ ನಾಟೀಕಾರ, ಸಿದ್ದು ಡಂಗಾ, ಸದ್ದಾಂ ಅರಬ, ಇಲಾಯಿ ಮೋಮಿನ್, ಕಾಶೀನಾಥ ತೇಲಗ, ವಿಟ್ಠಲ ಹಂಜಗಿ. ಇಯಾಝ ಅಗರಖೇಡ, ಲಕ್ಷö್ಮಣ , ಬಸವರಾಜ ವಡ್ಡರ್ ಅರವಿಂದ ಮೈರದಗಿ ಇದ್ದರು.