ಶಿಮ್ಲಾ: ದೆಹಲಿ, ಪಂಜಾಬ್ ರಾಜ್ಯಗಳ ಬಳಿಕ ಹಿಮಾಚಲ ಪ್ರದೇಶದಲ್ಲೂ ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ 4.1 ರಷ್ಟು ತೀವ್ರತೆ ದಾಖಲಾಗಿದೆ.
ಬುಧವಾರ ರಾತ್ರಿ 9:32 ರ ಸುಮಾರಿಗೆ ರಾಜ್ಯದ ಕೆಲವು ಭಾಗಗಳಲ್ಲಿ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪನ ಸಂಭವಿ ಸಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಇಲಾಖೆ ತಿಳಿಸಿದೆ. ಹಿಮಾಚಲದ ವಾಯವ್ಯದಲ್ಲಿರುವ ಮಂಡಿ ಹಾಗೂ ಕಾಂಗ್ರಾ ಪಟ್ಟಣಗಳಿಂದ 27 ಕಿ.ಮೀ ದೂರದಲ್ಲಿ ಕಂಪನದ ಕೇಂದ್ರಬಿಂದು ಪತ್ತೆಯಾಗಿದೆ.