Thursday, 19th September 2024

ಸಿಲಿಂಡರ್‌ಗಳಲ್ಲಿ ಶೀಘ್ರ ಕ್ಯೂಆರ್ ಕೋಡ್

ನವದೆಹಲಿ: ಡುಗೆ ಅನಿಲ ಸಿಲಿಂಡರ್ ದುರ್ಬಳಕೆ ತಪ್ಪಿಸಲು ಕೇಂದ್ರ ಸರ್ಕಾರ  ಸಿಲಿಂಡರ್‌ಗಳಲ್ಲಿ ಕ್ಯೂಆರ್ ಕೋಡ್ ಎಂಬ ಹೊಸ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ.

ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಗ್ರಾಹಕರು ಎಲ್‌ಪಿಜಿ ಸಿಲಿಂಡರ್‌ ಗಳನ್ನು ಟ್ರ್ಯಾಕ್ ಮಾಡಲು ಈ ವಿಧಾನ ದಿಂದ ಸಾಧ್ಯವಾಗಲಿದೆ.

ಕ್ಯೂ ಆರ್ ಕೋಡ್ ಸಿಲಿಂಡರ್‌ನಲ್ಲಿ ವೆಲ್ಡ್ ಮಾಡಲಾಗುತ್ತದೆ. ಇದರ ನೆರವಿನಿಂದ ಗ್ರಾಹಕರು ಸಿಲಿಂಡರ್ ಬಗ್ಗೆ ಪೂರ್ಣ ಮಾಹಿತಿ ಕ್ಷಣದಲ್ಲಿ ಪಡೆದುಕೊಳ್ಳಬಹುದಾಗಿದೆ.

ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ, ಕ್ಯೂಆರ್ ಕೋಡ್ ಹೊಂದಿರುವ 20 ಸಾವಿರ ಎಲ್‌ಪಿಜಿ ಸಿಲಿಂಡರ್ ಗಳನ್ನು ಯುಎನ್ ಕೋಡ್ ಆಧಾರಿತ ಟ್ರ್ಯಾಕ್ ಅಡಿಯಲ್ಲಿ ವಿತರಿಸ ಲಾಗುತ್ತದೆ. ಈ ಕ್ಯೂಆರ್ ಕೋಡನ್ನು ಡಿಜಿಟಲ್ ಸಾಧನಗಳ ಮೂಲಕ ಸುಲಭವಾಗಿ ಓದಬಹುದಾಗಿದೆ.