ಇಂಡಿ: ಸಾರ್ವಜನಿಕರು ಪಟ್ಟಣದಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಇಂಡಿ ಪುರಸಭೆಯ ಮುಖ್ಯಾಧಿಕಾರಿ ಕೆ.ಎಸ್.ಲಕ್ಷ್ಮೀಶ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ ಅವರು, ಇಂಡಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ ೧ರಿಂದ ೨೩ರ ವರೆಗೆ ಬರುವ ಸಾರ್ವಜನಿಕ ರಸ್ತೆ, ವಾಣಿಜ್ಯ ಸಂಕೀರ್ಣ, ಬಸ್ ನಿಲ್ದಾಣ, ಹಾಗೂ ಇನ್ನಿತರೆ ಸ್ಥಳದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಪೌರ ಕಾರ್ಮಿಕರು ಹಾಗೂ ಚಿಂದಿ ಆಯುವವರು ಮುಖಾಂತರ ಸಂಗ್ರಹಿಸಿ ಚವಡಿಹಾಳ ರಸ್ತೆಯಲ್ಲಿ ಇರುವ ಇಂಡಿ ಪುರಸಭೆಯ ಘನತ್ಯಾಜ್ಯ ನಿರ್ವಹಣೆ ಘಟಕದಲ್ಲಿ ಸಂಸ್ಕರಣೆ ಮಾಡಿ ಸಂಗ್ರಹಿಸಲಾಗಿರುವ ೨.೦ ಟನ್ ಸಾಮರ್ಥ್ಯದ ಪ್ಲಾಸ್ಟಿಕ್ ತ್ಯಾಜ್ಯವನ್ನು ನ.೧೬-೧೧-೨೦೨೨ರಂದು ವಿಜಯಪುರ ಮಹಾನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಘಟಕದ ಮುಖಾಂತರ ಸಿಮೆಂಟ್ ಫ್ಯಾಕ್ಟ್ರಿಗೆ ಸಾಗಿಸಲಾಗಿದೆ.
ಆದ ಕಾರಣ ಸಾರ್ವಜನಿಕರು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡಲಾರದೆ ಪರಿಸರವನ್ನು ಕಾಪಡಬೇಕೆಂದು ಅವರು ವಿನಂತಿಸಿಕೊ0ಡಿದ್ದಾರೆ.