ಚಿಕ್ಕಬಳ್ಳಾಪುರ : ಭಾರತದ ಚರಿತ್ರೆಯಲ್ಲಿ ಇಂದಿರಾಗಾ0ಧಿ ಅವರದ್ದು ಅಚ್ಚಳಿಯದ ವೀರ ಚರಿತೆಯಾಗಿದ್ದು ಅವರು ಮೂಡಿಸಿ ರುವ ಹೆಜ್ಜೆಗುರುತು ಸದಾ ಕಾಲಕ್ಕೂ ಸ್ಮರಣೆಗೆ ಯೋಗ್ಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ೧೦೬ನೇ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಇಂದಿರಾ ಪ್ರಿಯದರ್ಶಿನಿ ಗಾಂಧಿ ಜನಮಾನಸದಲ್ಲಿ ಇಂದಿರಮ್ಮ ಎಂದೇ ಖ್ಯಾತಿಯನ್ನು ಗಳಿಸಿದ್ದು, ಭಾರತ ದೇಶವನ್ನು ೧೫ ವರ್ಷಗಳ ಕಾಲ ಪ್ರಧಾನಿ ಯಾಗಿ ಮುನ್ನಡೆಸಿದ್ದು, ಉಕ್ಕಿನ ಮಹಿಳೆ ಎನ್ನುವ ಬಿರುದನ್ನು ಪಡೆದಿದ್ದು ಸಾಮಾನ್ಯದ ಮಾತಲ್ಲ. ಪ್ರಥಮ ಪ್ರಧಾನಿ ನೆಹರು ಗರಡಿಯಲ್ಲಿ ಪಳಗಿದ ಇವರು ಉನ್ನತ ಶಿಕ್ಷಣದ ಜತೆಗೆ ರಾಜಕೀಯ ಶಿಕ್ಷಣವನ್ನು ಪಡೆದು ದೇಶದ ಇತಿಹಾಸದಲ್ಲಿ ಪ್ರಥಮ ಮಹಿಳಾ ಪ್ರಧಾನಿ ಎನ್ನುವ ಅಭಿದಾನಕ್ಕೆ ಪಾತ್ರರಾಗಿದ್ದಾರೆ ಎಂದರು.
ತಮ್ಮ ಅಧಿಕಾರಾವಧಿಯಲ್ಲಿ ಸರ್ವರಿಗೆ ಸಮಬಾಲು ಸಮಪಾಲು ನೀಡಿದರು. ಬ್ಯಾಂಕು ಗಳ ರಾಷ್ಟ್ರೀಕರಣ, ಉಳುವವನೇ ಭೂಮಿ ಒಡೆಯ ಎನ್ನುವ ಚಾರಿತ್ರಿಕ ಘೋಷಣೆ, ಗರೀಭಿ ಹಠಾವೋ ಎನ್ನುವ ದಿಟ್ಟ ಯೋಜನೆ, ಹಸಿರು ಕ್ರಾಂತಿ, ಮಹಿಳಾ ಪ್ರಾತಿನಿಧ್ಯ, ವಿಶ್ವಮಟ್ಟದಲ್ಲಿ ಭಾರತದ ಘನತೆಯನ್ನು ಕಾಪಾಡಿದ ಹೆಮ್ಮೆಯ ಪ್ರಧಾನಿಯಾಗಿದ್ದರು. ಇವರ ಜೀವನ,ಆಡಳಿತ ವೈಖರಿ ಕಾಂಗ್ರೆಸ್ ಕಾರ್ಯಕರ್ತರಷ್ಟೇ ಅಲ್ಲದೆ ದೇಶವಾಸಿಗಳಿಗೆ ಮಾದರಿಯಾಗಿದೆ ಎಂದರು.
ಮಾಜಿ ಶಾಸಕ ಶಿವಾನಂದ ಮಾತನಾಡಿ ಉಕ್ಕಿನ ಮಹಿಳೆ ಎಂದೇ ಕರೆಸಿಕೊಂಡಿದ್ದ ಇಂದಿರಾಗಾ೦ಧಿ ಅವರು ನಿಜಾರ್ಥದಲ್ಲಿ ಶೋಷಿತರು, ದೀನದಲಿತರು, ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದ ಪಾಲಿನ ಆಶಾಕಿರಣವಾಗಿದ್ದರು. ಇಂಡೋ ಪಾಕ್, ಇಂಡೋ ಚೀನಾ ಯುದ್ದದ ಸಂದರ್ಭದಲ್ಲಿ ಪ್ರಧಾನಿಯಾಗಿ ಸೈನಿಕರಿಗೆ ನೈತಿಕ ಶಕ್ತಿಯಾಗಿ ಬಲತುಂಬಿದವರು.
ಪಾರ್ಲಿಮೆಂಟಿನಲ್ಲಿ ಅವರು ಭಾಷಣ ಮಾಡಲು ಎದ್ದುನಿಂತರೆ ಇಡೀ ಸಭೆ ಮೌನಕ್ಕೆ ಶರಣಾಗುವಷ್ಟರ ಮಟ್ಟಿಗೆ ಪ್ರಬುದ್ದತೆ, ಪ್ರೌಢಿಮೆ ಬೆಳೆಸಿಕೊಂಡಿದ್ದರು.ದೇಶವು ಭೀಕರ ಕ್ಷಾಮಕ್ಕೆ ತುತ್ತಾಗಿ ಆಹಾರದ ಸಮಸ್ಯೆ ಎದುರಿಸುವ ಸಂದರ್ಭದಲ್ಲಿ ಯುಕೆ ಮತ್ತು ರಷ್ಯಾದಿಂದ ಆಹಾರ ಆಮದು ಮಾಡಿಕೊಂಡು ದೇಶವನ್ನು ಅಪಾಯದಿಂದ ಪಾರುಮಾಡಿದ ದೂರದೃಷ್ಟಿಯ ನಾಯಕಿ ಇಂದಿರಾ.ದೇಶಕ್ಕೆ ಸುಭದ್ರ ಆಡಳಿತ ನೀಡುವ ಜತೆಗೆ ದೇಶವನ್ನು ಆರ್ಥಿಕವಾಗಿ ಬಲಿಷ್ಟಗೊಳಿಸಲು ಪಂಚವಾರ್ಷಿಕ ಯೋಜನೆ ಗಳಿಗೆ ಬಲ ತುಂಬಿದರು. ಇಂತಹ ಹೆಮ್ಮೆಯ ಪ್ರಧಾನಿಗಳ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಅವರ ಬಗ್ಗೆ ಮಾತನಾಡುವುದು ಸಂತೋಷದ ವಿಚಾರವಾಗಿದೆ ಎಂದರು.
ಮಮತಾ ಮೂರ್ತಿ ಮಾತನಾಡಿ ಮೊದಲ ಮಹಿಳಾ ಪ್ರಧಾನಿಯಾಗಿ ಸುಧೀರ್ಘಕಾಲ ಭಾರತ ದೇಶದ ಕೀರ್ತಿಪತಾಕೆಯನ್ನು ವಿಶ್ವದಗಲಕ್ಕೆ ಹಾರಿಸಿದ ಕೀರ್ತಿ ಶ್ರೀಮತಿ ಇಂದಿರಾಗಾ೦ಧಿ ಅವರಿಗೆ ಸಲ್ಲುತ್ತದೆ.ಈ ದೇಶದ ಸ್ವಾತಂತ್ರö್ಯ, ಘನೆತೆಗಾಗಿ ಮತ್ತು ದೇಶವಾಸಿಗಳ ಸುಭಿಕ್ಷ ಜೀವನಕ್ಕಾಗಿ ತನುಮನಧನ ಅರ್ಪಿಸಿದ ವಂಶದ ಕುಡಿಯಾದ ಇಂದಿರಾಜಿ ಅವರು ನಮಗೆ ಸದಾ ಆದರ್ಶವಾಗಿ ನಿಲ್ಲಿತ್ತಾರೆ ಎಂದರು.
ನ್ಯಾಯವಾದಿ ನಾರಾಯಣಸ್ವಾಮಿ ಮಾತನಾಡಿ ಇಂದಿರಾಜಿ ಪ್ರಧಾನಿಯಾಗಿ ತೆಗೆದುಕೊಂಡ ತೀರ್ಮಾನಗಳು ಚಾರಿತ್ರಿಕವಾಗಿ ಸದಾಕಾಲ ಉಳಿಯುವಂತಹವಾಗಿವೆ. ನವೆ೦ಬರ್ ೧೯, ೧೯೧೭ರಲ್ಲಿ ಜನಿಸಿದ ಇವರು ಲಾಲ್‌ಬಹಾದ್ದೂರ್ ಮರಣಾನಂತರ ಪ್ರಧಾನಿ ಪಟ್ಟಕ್ಕೆ ಏರಿದವರು.ದೇಶದ ಇತಿಹಾಸದಲ್ಲಿ ೧೪ ಬ್ಯಾಂಕುಗಳ ರಾಷ್ಟಿçÃಕರಣ ಘೋಷಣೆ, ಆರ್ಥಿಕತೆಗೆ ಬಲತುಂಬಿತು.
ಜನಸಾಮಾನ್ಯರಿಗೆ ಬ್ಯಾಂಕಿನ ವಹಿವಾಟು ದೊರೆಯುವಂತೆ ಆಯಿತು.ಹಸಿವು ಮುಕ್ತ ಭಾರತವನ್ನು ನಿರ್ಮಿಸಿ ಅಭಿವೃದ್ದಿಶೀಲ ದೇಶಗಳಿಂದ ಹೊಗಳಿಕೆಗೆ ಪಾತ್ರವಾದ ದೂರದೃಷ್ಟಿಯ ನೇತಾರರಾಗಿದ್ದರು. ಇವರ ಜನ್ಮದಿನ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ,ಪ್ರಧಾನ ಕಾರ್ಯದರ್ಶಿ ಸುರೇಶ್,ಹನುಮಂತಪ್ಪ,ಅಡ್ಡಗಲ್ ಶ್ರೀಧರ್, ಡೈರಿ ಗೋಪಿ,ಅಮಾನುಲ್ಲಾ,ಮೇಸ್ತಿç ನಾರಾಯಣ,ವೇಣುಗೋಪಾಲ, ಶಂಕರ್,ಲಕ್ಷö್ಮಣ್ ಮತ್ತಿತರರು ಇದ್ದರು.