Saturday, 23rd November 2024

ಲಷ್ಕರ್-ಇ-ತೊಯ್ಬಾ ಓರ್ವ ಉಗ್ರನ ಹತ್ಯೆ

ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಈ ವೇಳೆ ಪಾಕಿಸ್ತಾನ ಮೂಲಕ ಲಷ್ಕರ್-ಇ-ತೊಯ್ಬಾ ಸಂಘಟನೆಯ ಓರ್ವ ಹೈಬ್ರಿಡ್ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್ಬೆಹರಾದ ಚೆಕಿ ದುಡೂ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಇಂದು ಬೆಳಿಕ್ಕೆ ಭಾರೀ ಕಾರ್ಯಾಚರಣೆ ಆರಂಭಿಸಿತ್ತು. ಭದ್ರತಾ ಪಡೆಗಳು ಶಂಕಿತ ಉಗ್ರರ ಅಡಗುತಾಣ ಗಳತ್ತ ಸಾಗುತ್ತಿದ್ದಂತೆಯೇ ಉಗ್ರರು ಸೇನಾಪಡೆ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು.
ಈ ವೇಳೆ ಉಗ್ರರ ಅಡುತಾಣಗಳ ಗುರುತಿಸಲು ಪೊಲೀಸರೊಂದಿಗೆ ಸಹಕರಿಸುತ್ತಿದ್ದ ಎಲ್‌ಇಟಿ ಉಗ್ರನಿಗೆ ಗುಂಡು ತಗುಲಿದ್ದು, ಕೂಡಲೇ ಆದನನ್ನು ಆಸ್ಪತ್ರೆಗೆ ಕರೆದೊಯ್ಯ ಲಾಗಿದೆ. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ.

ಹತ್ಯೆಯಾಗಿರುವ ಉಗ್ರ ಸಜ್ಜದ್ ತಂತ್ರಾಯ್ ಎಂದು ಗುರ್ತಿಸಲಾಗಿದೆ. ನವೆಂಬರ್ 13 ರಂದು ಬಿಜ್ಬೆಹರಾದ ರಖ್ಮೋಮೆನ್ನಲ್ಲಿ ಕಾರ್ಮಿಕನ ಹತ್ಯೆಯಲ್ಲಿ ತಂತ್ರಾಯ್ ಭಾಗಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಜ್ಜದ್ ತಂತ್ರಾಯ್ ಹೈಬ್ರಿಡ್ ಉಗ್ರನಾಗಿದ್ದು, ಎಲ್‌ಇಟಿ ಉಗ್ರ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ.