ಉತ್ತರಾಖಂಡ: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸೂಚನೆ ಮೇರೆಗೆ ರಾಜ್ಯದ ಐದು ವಲಯಗಳಲ್ಲಿ ನಡೆಸಿದ ಸುರಕ್ಷತಾ ಲೆಕ್ಕಪರಿಶೋಧನೆಯಲ್ಲಿ ಉತ್ತರಾಖಂಡದ 36 ಸೇತುವೆಗಳು ಸಂಚಾರಕ್ಕೆ ಅನರ್ಹವಾಗಿವೆ ಎಂದು ವರದಿ ಯಾಗಿದೆ.
ರಾಜ್ಯದಲ್ಲಿರುವ 3262 ಸೇತುವೆಗಳ ಪೈಕಿ 2618 ಸೇತುವೆಗಳ ಸುರಕ್ಷತಾ ಲೆಕ್ಕ ಪರಿಶೋಧನಾ ವರದಿಯನ್ನು ಪಿಡಬ್ಲ್ಯುಡಿ ಇಲಾಖೆ ಸರ್ಕಾರಕ್ಕೆ ಹಸ್ತಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ಸೇತುವೆಗಳನ್ನು ಸಕಾಲದಲ್ಲಿ ನಿರ್ಮಿಸಲು ಸೇತುವೆಯನ್ನು ಸ್ಥಾಪಿ ಸಲು ಸರ್ಕಾರದಿಂದ ಸೂಚನೆಗಳನ್ನು ನೀಡಲಾಗಿದೆ. ಅದರಂತೆ ಕ್ರಮ ಗಳನ್ನು ಕೈಗೊಳ್ಳಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಹಳೇ ಹಾಗೂ ಶಿಥಿಲಗೊಂಡಿರುವ ಸೇತುವೆಗಳನ್ನು ಹೊಸದಾಗಿ ನಿರ್ಮಿಸಲು ಸರರ್ಕಾರ ಮುಂದಾಗಿದ್ದು, ಮೂರು ವಾರ ದೊಳಗೆ ಆಡಿಟ್ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮೋರ್ಬಿ ತೂಗುಸೇತುವೆ ಕುಸಿತದ ಹಿನ್ನೆಲೆಯಲ್ಲಿ ನ.3 ರಂದು ನೀಡಲಾದ ಸಿಎಂ ನಿರ್ದೇಶನದ ಮೇರೆಗೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಸುರಕ್ಷತಾ ಲೆಕ್ಕಪರಿಶೋಧನೆ ನಡೆಸಿತು.
ಭಾರತೀಯ ನೌಕಾಪಡೆ ಮತ್ತು ರಾಷ್ಟ್ರೀಯ ವಿಪತ್ತು ರೆಸ್ಪಾನ್ಸ್ ಫೋರ್ಸ್ (NDRF) ಸ್ಥಳೀಯ ಆಡಳಿತ ಮತ್ತು ಇತರ ಸಂಸ್ಥೆಗಳು ನಡೆಸಿದವು. 143 ವರ್ಷಗಳಷ್ಟು ಹಳೆಯದಾದ ಮೋರ್ಬಿ ಸೇತುವೆ ಕುಸಿತದ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.