Saturday, 23rd November 2024

ಗುಂಡಿನ ದಾಳಿ ಬೆನ್ನಲ್ಲೇ ಹಿಂಸಾಚಾರ: ಆರು ಮಂದಿ ಸಾವು

ಸ್ಸಾಂ : ಅಸ್ಸಾಂ-ಮೇಘಾಲಯ ಗಡಿಯಲ್ಲಿ ಮಂಗಳವಾರ ನಡೆದ ಗುಂಡಿನ ದಾಳಿಯ ನಂತರ ನಡೆದ ಹಿಂಸಾಚಾರದಲ್ಲಿ 6 ಜನರು ಮೃತಪಟ್ಟಿದ್ದಾರೆ.

ಮರವನ್ನ ಕಳ್ಳಸಾಗಣೆ ಮಾಡುತ್ತಿದ್ದ ಟ್ರಕ್ ಪೊಲೀಸರು ತಡೆದ ನಂತರ ಘರ್ಷಣೆ ಸಂಭವಿಸಿ ಅರಣ್ಯ ಸಿಬ್ಬಂದಿ ಸೇರಿದಂತೆ ಆರು ಜನರು ಸಾವನ್ನಪ್ಪಿದರು. ಮೇಘಾಲಯ ಸರ್ಕಾರವು ಮುಂದಿನ 48 ಗಂಟೆಗಳ ಕಾಲ 7 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನ ಸ್ಥಗಿತಗೊಳಿಸಿದೆ.

ಪಶ್ಚಿಮ ಜೈನ್ತಿಯಾ ಹಿಲ್ಸ್, ಈಸ್ಟ್ ಜೈನ್ತಿಯಾ ಹಿಲ್ಸ್, ಈಸ್ಟ್ ಖಾಸಿ ಹಿಲ್ಸ್, ರಿ-ಭೋಯ್, ಈಸ್ಟರ್ನ್ ವೆಸ್ಟ್ ಖಾಸಿ ಹಿಲ್ಸ್, ವೆಸ್ಟ್ ಖಾಸಿ ಹಿಲ್ಸ್ ಮತ್ತು ನೈಋತ್ಯ ಖಾಸಿ ಹಿಲ್ಸ್‌ಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.

ಮೇಘಾಲಯ ಗಡಿಯಲ್ಲಿರುವ ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಮೊಯಿಕ್ರಾಂಗ್‌ನಲ್ಲಿ ಅಸ್ಸಾಂ ಅರಣ್ಯ ಇಲಾಖೆಯ ತಂಡ ಟ್ರಕ್ ತಡೆದಿದೆ. ಲಾರಿ ಚಾಲಕ ಪರಾರಿಯಾಗಲು ಯತ್ನಿಸಿದ ನಂತರ ಅರಣ್ಯ ಸಿಬ್ಬಂದಿ ಆತನನ್ನ ಬೆನ್ನಟ್ಟಿದ್ದಾರೆ.

ಘಟನೆಯಲ್ಲಿ ಮೇಘಾಲಯದ ಐವರು ಮತ್ತು ಅಸ್ಸಾಂನ ಒಬ್ಬ ಅರಣ್ಯ ಸಿಬ್ಬಂದಿ ಸೇರಿದಂತೆ ಒಟ್ಟು ಆರು ಮಂದಿ ಸಾವನ್ನಪ್ಪಿ ದ್ದಾರೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಹೇಳಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸ್ ತಂಡ ರಕ್ಷಣೆಗಾಗಿ ಗುಂಡು ಹಾರಿಸಿದ್ದು, ಅರಣ್ಯ ಸಿಬ್ಬಂದಿ ಸೇರಿದಂತೆ ಆರು ಮಂದಿ ಸಾವನ್ನಪ್ಪಿ ದ್ದಾರೆ. ಮೃತ ಅರಣ್ಯ ಸಿಬ್ಬಂದಿಯನ್ನು ಬಿದ್ಯಾ ಸಿಂಗ್ ಲೆಹ್ತೆ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಅರಣ್ಯ ಸಿಬ್ಬಂದಿ ಅಭಿಮನ್ಯು ಘಟನೆಯಲ್ಲಿ ಗಾಯಗೊಂಡಿದ್ದಾರೆ.