Friday, 22nd November 2024

ಫೋನ್ ಮೂಲಕ ತ್ರಿವಳಿ ತಲಾಖ್: ದೂರು ದಾಖಲು

ಪಾಟ್ನಾ: ಬಿಹಾರದ ರೋಹ್ತಾಸ್ ಜಿಲ್ಲೆಯ ಮಹಿಳೆಯೊಬ್ಬರು ತಮ್ಮ ಪತಿ ಫೋನ್ ಮೂಲಕ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂತ್ರಸ್ತೆ ತರನ್ನುಮ್, ನ್ಯಾಯ ಕೋರಿ ರೋಹ್ತಾಸ್ನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಸ್ಲಿಂ ಮಹಿಳೆ ಯರ (ವಿವಾಹದ ಮೇಲಿನ ಹಕ್ಕುಗಳ ರಕ್ಷಣೆ) ಕಾಯ್ದೆಯಡಿ, ತ್ರಿವಳಿ ತಲಾಖ್ ನೀಡಿದ ಆರೋಪ ಸಾಬೀತಾದರೆ ಆರೋಪಿಯು ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ನನ್ನ ಪತಿ ರಾಂಚಿಯಲ್ಲಿ ನೆಲೆಸಿದ್ದು, ಬೇರೆ ಹುಡುಗಿಯನ್ನು ಮದುವೆಯಾಗಿದ್ದಾರೆ.

ಡೆಹ್ರಿ ಪಟ್ಟಣದ ನೀಲ್ ಕೋಠಿ ಪ್ರದೇಶಕ್ಕೆ ಬಂದಿದ್ದ ಕೆಲವು ಸಂಬಂಧಿಕರು, ನನ್ನ ಪತಿ ಶೋಯೆಬ್ನ ಕೃತ್ಯವನ್ನು ನಾನು ಏಕೆ ವಿರೋಧಿಸಲಿಲ್ಲ ಎಂದು ನನ್ನನ್ನು ಕೇಳಿದರು. ಈ ಬಗ್ಗೆ ವಿಚಾರಿಸಲು ಶೋಯೆಬ್ನನ್ನು ಸಂಪರ್ಕಿಸಿದಾಗ, ಆತ ನನ್ನನ್ನು ನಿಂದಿಸಿ ಮೂರು ಬಾರಿ ತಲಾಖ್ ಹೇಳಿದ್ದಾರೆ.

ನಾನು 2014ರ ಮೇ 30 ರಂದು ಶೋಯೆಬ್ ಅವರನ್ನು ವಿವಾಹವಾದೆ. ಅವರು ನನ್ನನ್ನು ರಾಂಚಿಗೆ ಕರೆದೊಯ್ದರು. ಆದರೆ, ನನ್ನ ಜೊತೆಗೆ ಅವರು ಅತ್ಯಂತ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು. ಈ ಬಗ್ಗೆ ಶೋಯೆಬ್ನ ತಾಯಿಗೆ ತಿಳಿಸಿದಾಗ, ಮೊದಲೇ ಅದರ ಬಗ್ಗೆ ತಿಳಿದಿದ್ದರು’ ಎಂದು ಹೇಳಿದರು.
ರೋಹ್ತಾಸ್ನ ಮಹಿಳಾ ಪೊಲೀಸ್ ಠಾಣೆಯ ಎಸ್ಎಚ್ಒ ಲಕ್ಷ್ಮಿ ಪಟೇಲ್, ‘ನಾವು ಅರ್ಜಿಯನ್ನು ಸ್ವೀಕರಿಸಿದ್ದೇವೆ ಮತ್ತು ಎಫ್ಐಆರ್ ದಾಖಲಿಸಿದ್ದೇವೆ. ಸದ್ಯ ತನಿಖೆ ನಡೆಯುತ್ತಿದ್ದು, ಆರೋಪಿಯನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ’ ಎಂದರು.