Saturday, 26th October 2024

ನ.೨೯ಕ್ಕೆ ಎರಡು ಕೃಷಿ ಕೂಲಿಕಾರರ ೮ನೇ ರಾಜ್ಯ ಸಮ್ಮೇಳನ

ಚಿಕ್ಕಬಳ್ಳಾಪುರ: ಬಾಗೇಪಲ್ಲಿಯಲ್ಲಿ ನ.೨೯ ರಿಂದ ಮೂರು ದಿನಗಳ ಕೃಷಿ ಕೂಲಿಕಾರರ ೮ನೇ ರಾಜ್ಯ ಸಮ್ಮೇಳನವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆ0ಕಟಪ್ಪ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ದೇಶದ ಸಂಪತ್ತು ಸೃಷ್ಟಿಸುವ ಗ್ರಾಮೀಣ ಭಾಗದ ಕೃಷಿಕೂಲಿಕಾರರು ಸ್ವಂತ ಭೂಮಿ, ನಿವೇಶನ, ಮನೆ ಹೊಂದಿಲ್ಲ. ಅರ್ಜಿ ಸಲ್ಲಿಸಿದರೂ ಸರ್ಕಾರ ಭೂಮಿಯನ್ನು ಒದಗಿಸಲು ಮುಂದಾಗುತ್ತಿಲ್ಲ. ಸರ್ಕಾರಗಳ ಇತ್ತೀಚಿನ ನೀತಿಗಳಿಂದ ಸವಲತ್ತು ಸಿಗದೇ ಕೂಲಿಕಾರರು ವಲಸೆ ಹೋಗುವ ದುಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿನ ಕೂಲಿಕಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನ.೨೯, ೩೦ ಹಾಗೂ ಡಿ.೧ರಂದು ಆಯೋಜಿಸಿರುವ ಕೃಷಿ ಕೂಲಿಕಾರರ ರಾಜ್ಯ ಸಮ್ಮೇಳನವನ್ನು ಅಖಿಲ ಭಾರತ ಕೃಷಿ ಕೂಲಿಕಾರ್ಮಿಕರ ಸಂಘದ ಅಧ್ಯಕ್ಷ ಎ.ವಿಜಯರಾಘವನ್ ಉದ್ಘಾಟಿಸ ಲಿದ್ದು, ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಸಂಸದ ಶಿವದಾಸನ್ ಸೇರಿದಂತೆ ಹಲವರು ಭಾಗವಹಿಸಲಿದ್ದು, ಸಮ್ಮೇಳದಲ್ಲಿ ೧೫ ಸಾವಿರ ಕೂಲಿಕಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಎಐಎಡಬ್ಲ್ಯೂಯು ರಾಜ್ಯ ಜಂಟಿ ಕಾರ್ಯದರ್ಶಿ ಕೆ.ನಾಗರಾಜ್ ಮಾತನಾಡಿ, ಸರ್ಕಾರದ ನೀತಿಗಳಿಂದ ಕೃಷಿರಂಗವು ದಿವಾಳಿಯತ್ತ ಸಾಗುತ್ತಿದ್ದು, ಕೆಲಸವಿಲ್ಲದೆ ಕೂಲಿಕಾರರು ನಗರಗಳತ್ತ ಮುಖಮಾಡುವಂತಾಗಿದೆ. ಕೂಲಿಕಾರರ ದಿನೇದಿನೇ ಸಂಖ್ಯೆ ಹೆಚ್ಚುತ್ತಿದ್ದರೂ ಸರ್ಕಾರ ಸವಲತ್ತು ಹೆಚ್ಚಿಸುವ ಬದಲಿಗೆ ಅವರನ್ನು ಕಡೆಗಣಿಸಿ ಹಂತ ಹಂತವಾಗಿ ಸೌಲಭ್ಯ ಕಡಿತ ಮಾಡುತ್ತಿರು ವುದರಿಂದ ದಯನೀಯ ಸ್ಥಿತಿಗೆ ತಲುಪುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾಗತ ಸಮಿತಿ ಗೌರವಧ್ಯಕ್ಷ ಡಾ.ಅನಿ???ಕುಮಾರ್ ಮಾತನಾಡಿ, ೧೯೯೦ರಲ್ಲಿ ಸರ್ಕಾರ ಕೈಗೊಂಡ ನಿರ್ಣಯಗಳಿಂದಾಗಿ ದೇಶದಲ್ಲಿ ಕೃಷಿ ರಂಗವು ಅನೇಕ ಸಮಸ್ಯೆ ಎದುರಿಸುವಂತಾಗಿದೆ. ದೇಶದ ಸಂಪತ್ತು ಕಪೆರ್Ç?ರೇಟ್ ಕಪಿಮುಷ್ಟಿಯಲ್ಲಿ ಸಿಲುಕಿದ್ದು, ಶ್ರಮಜೀವಿಗಳನ್ನು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಶ್ರಮಜೀವಿಗಳನ್ನು ಸಂಘಟಿಸಿ, ಹೋರಾಟ ರೂಪಿಸುವ ನಿಟ್ಟಿನಲ್ಲಿ ನಡೆಯಲಿರುವ ಸಮ್ಮೇಳನ ನ.೨೯ರಂದು ಬೃಹತ್ ಮೆರವಣಿಗೆಯೊಂದಿಗೆ ಆರಂಭವಾಲಿದೆ ಎಂದು ಹೇಳಿದರು.

ಇದೇ ವೇಳೆ ಸಮ್ಮೇಳನದ ಪೋಸ್ಟರ್ ಮತ್ತು ಕರಪತ್ರಗಳನ್ನು ಬಿಡುಗಡೆ ಮಾಡಿದರು. ಸುದ್ದಿಗೋಷಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಡಿ.ಸಿ.ಶ್ರೀನಿವಾಸ್, ಜಿ.ಪಂ ಮಾಜಿ ಉಪಾಧ್ಯಕ್ಷೆ ಸಾವಿತ್ರಮ್ಮ, ರಘುರಾಮರೆಡ್ಡಿ, ಎಲ್.ವೆಂಕಟೇಶ್, ಬಿ.ಎನ್.ಮುನಿಕೃಷ್ಣಪ್ಪ ಇದ್ದರು.