ರಿಚಾ, ‘ಗಲ್ವಾನ್ ಹಾಯ್ ಎನ್ನುತ್ತಿದೆ’ ಎಂಬುದಾಗಿ ಟ್ವೀಟ್ ಮಾಡಿ ಎಲ್ಲರ ಆಕ್ರೋಶಕ್ಕೆ ತುತ್ತಾಗಿದ್ದರು.
‘ಉದ್ದೇಶಪೂರ್ವಕವಾಗಿ ಪೋಸ್ಟ್ ಮಾಡಿರಲಿಲ್ಲವಾದರೂ, ವಿವಾದ ಸೃಷ್ಟಿಸಿರುವ ಆ ಮೂರು ಪದಗಳಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಸೇನೆಯಲ್ಲಿರುವ ನನ್ನ ಸಹೋದರರು ಕುರಿತು ನನಗೆ ಸದಾ ಗೌರವವಿದೆ. ನನ್ನ ಮಾತುಗಳು ಅವರಿಗೆ ಬೇಸರ ಮೂಡಿಸಿದರೆ, ಅದರಿಂದ ನನಗೆ ದುಃಖವಾಗುತ್ತದೆ. ನನ್ನ ತಾತ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿ ದ್ದರು. ಮಾವ ಕೂಡ ಸೇನೆಯ ಭಾಗವಾಗಿದ್ದರು. ಹೀಗಾಗಿ ಸೇನೆಯೊಂದಿಗೆ ನನ್ನ ರಕ್ತ ಸಂಬಂಧಿಕರಿದ್ದಾರೆ. ಅವರನ್ನು ನೋಯಿ ಸುವ ಯಾವ ಉದ್ದೇಶವೂ ಇರಲಿಲ್ಲ’ ಎಂದು ರಿಚಾ ಕ್ಷಮೆ ಯಾಚಿಸಿ ಟ್ವೀಟ್ ಮಾಡಿದ್ದಾರೆ.
ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆಯನ್ನು ಹಂಚಿಕೊಂಡು, ‘ಗಲ್ವಾನ್ ಹಾಯ್ ಎನ್ನುತ್ತಿದೆ’ ಎಂಬುದಾಗಿ ಬರೆದುಕೊಂಡಿದ್ದರು. ಇದರಿಂದ ಆಕ್ರೋಶಗೊಂಡ ನೆಟ್ಟಿಗರು ಇಂತಹ ಹೇಳಿಕೆ ನೀಡಲು ನಾಚಿಕೆಯಾಗಬೇಕು ಎಂದು ಪ್ರತಿಕ್ರಿಯಿಸಿದ್ದರು.