Friday, 22nd November 2024

ಕುಕ್ಕರ‍್ ಮನಸ್ಥಿತಿಯನ್ನು ಖಂಡಿಸದವರೂ ಅಪಾಯಕಾರಿ

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಯೋಚಿಸಿ ನೋಡಿ, ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಶಾರಿಕ್ ಗುರುತು ಸಿಗದಂತೆ ನೆಗೆದು ಬಿದ್ದಿದ್ದರೆ ಏನಾಗುತ್ತಿತ್ತು? ಆಗ ಸ್ಥಳದಲ್ಲಿ ಸಿಗುತ್ತಿದ್ದ ಕೇಸರಿ ವಸ್ತ್ರ, ಹಿಂದೂ ಹೆಸರಿನಲ್ಲಿದ್ದ ಈತನ ನಕಲಿ ಆಧಾರ್ ಕಾರ್ಡ್ ಇಟ್ಟುಕೊಂಡು ‘ಕೆಲವು ನಾಯಕರ’ ಹೇಳಿಕೆಗಳನ್ನು ಕೇಳಿ ಹಿಂದೂಗಳು ತಲೆಗೆ ಅಮೃತಾಂಜನ್ ತಿಕ್ಕಿಕೊಂಡು ಅನಾಸಿನ್ ಗುಳಿಗೆ ನುಂಗಬೇಕಿತ್ತು.

ಮಂಗಳೂರಿನಲ್ಲಿ ಒಂದು ಬಸ್ ನ್ನೇ ಸ್ಪೋಟಿಸಬಹುದಾದ ಆ ಮೂಲಕ ಐವತ್ತಕ್ಕೂ ಹೆಚ್ಚು ಹಿಂದೂಗಳ ಸಾವುನೋವುಗಳ ದುರಂತಕ್ಕೆ ತಯಾರಿಸ ಲಾಗಿದ್ದ ಕುಕ್ಕರ್ ಬಾಂಬ್ ಆಕಸ್ಮಿಕವಾಗಿ ಸ್ಪೋಟವಾಗಿದ್ದಲ್ಲದೇ ಉಗ್ರನೂ ಅಚ್ಚುಕಟ್ಟಾಗಿ ಸಿಕ್ಕಿ ಬಿದ್ದಿರುವುದು ನಿಜಕ್ಕೂ ದೈವದ ಪವಾಡವೇ ಹೌದು. ಇದನ್ನೇ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ ಕುಮಾರ್ ಅವರು ದೇವರಿಗೆ ಧನ್ಯವಾದವನ್ನು ಹೇಳಲೇಬೇಕೆಂದಿರುವುದು. ಸಿಕ್ಕಿಬಿದ್ದಿ ರುವ ಉಗ್ರ ಶಾರಿಕ್ ಅದೆಂಥಾ ದೇಶದ್ರೋಹಿ ಮನಸ್ಥಿತಿಯವನೆಂದರೆ ಮಂಗಳೂರಿನಲ್ಲಿ ಜಿಹಾದಿ ಉಗ್ರರ ಪರವಾಗಿ ಗೋಡೆ ಬರಹ ಬರೆದು ಜೈಲುಸೇರಿ ಹೊರಬರುತ್ತಾನೆ.

ಕಳೆದ ಆಗಸ್ಟ್‌ನಲ್ಲಿ ಪ್ರೇಮ್‌ಸಿಂಗ್ ಎಂಬಾತನಿಗೆ ಚಾಕುವಿನಿಂದ ಇರಿದ ಪ್ರಕರಣದಲ್ಲಿ ಮುನ್ನಲೆಗೆ ಬರುತ್ತಾನೆ. ನಂತರ ತುಂಗಾ ನದಿತೀರದಲ್ಲಿ ಬಾಂಬ್ ಟ್ರಯಲ್ ಬ್ಲಾಸ್ಟ್ ಮಾಡುತ್ತಾನೆ. ರಾಷ್ಟ್ರ ಧ್ವಜವನ್ನು ಸುಟ್ಟು ವಿಡಿಯೋ ಮಾಡಿ ವಿಕೃತ ಆನಂದಿಸುತ್ತಾನೆ. ಮೊನ್ನೆ ಕುಕ್ಕರ್‌ಬಾಂಬ್‌ನಲ್ಲಿ ಈತ ತಗಲಿಕೊಳ್ಳದಿದ್ದರೆ ದೊಡ್ಡಮಟ್ಟದಲ್ಲಿ ಹೆಣಗಳನ್ನು ಬೀಳಿಸುತ್ತಿದ್ದ ಎಂಬದು ಸ್ಪಷ್ಟವಾಗಿದೆ. ಇರಲಿ, ಪಾಪಿ ಶಾರಿಕ್ ದೊಡ್ಡಮಟ್ಟದ ಭಯೋತ್ಪಾದನೆಯ ಸಂಚಿನಲ್ಲಿ ಸಫಲನಾಗುವ ಮುಂಚೆಯೇ ಯಡವಟ್ಟಾಗಿ ದಿಢೀರ್ ಸಿಕ್ಕಿಬಿದ್ದಿದ್ದಾನೆ. ಆದರೆ ಎಚ್ಚರವಿರಲಿ ಇವನಂಥ ಮನಸ್ಥಿತಿ ಇರುವ ಆಕೃತಿಗಳು ದೇಶದ ಮೂಲೆ ಮೂಲೆಗಳಲ್ಲಿರುವುದು ಸಂಶೋಧನಾತ್ಮಕ ವಿಷಯವಲ್ಲ.

ಇಂಥವರ ಅಘೋಷಿತ ಡಿಎನ್‌ಎ ಹೊಂದಿರುವವರು ಲದ್ದಿಜೀವಿಗಳ ರೂಪದಲ್ಲಿ, ವಿಚಾರವ್ಯಾಧಿಗಳ ಸೋಗಿನಲ್ಲಿ, ರಾಜ ಕಾರಣಿಗಳ ಅವತಾರದಲ್ಲಿ, ಚಿತ್ರ ನಟರ ವೇಶಗಳಲ್ಲಿಯೂ ಇರುವುದು ಅಧ್ಯಾಯನಾತ್ಮಕ ವಿಚಾರವೇನಲ್ಲ. ದೇಶದ ಉಪರಾಷ್ಟ್ರಪತಿಯಂಥ ಸ್ಥಾನ ಅನುಭವಿಸಿದ ಆಕೃತಿಗಳೇ ಭಾರತದ ವಿರುದ್ಧ ಮಾತನಾಡುತ್ತಿರುವಾಗ ಇವರೆಲ್ಲಾ ಯಾವಲೆಕ್ಕ.

ಕುತೂಹಲಕಾರಿ ಸಂಗತಿಯೆಂದರೆ ಉಗ್ರ ಶಾರಿಕ್‌ಗೆ ಹಿಂದೂಗಳಲ್ಲೇ ಇರುವ ‘ಎಡಗೈ ನೆಕ್ಕುವ’ ಡೋಂಗಿ ಜಾತ್ಯತೀತ ವ್ಯಾಧಿಗಳ ಮೇಲೆ ಅಪಾರ ನಂಬಿಕೆ ಇದ್ದಂತಿದೆ. ಜಗತ್ತಿನಲ್ಲಿ ಭಯೋತ್ಪಾದನೆ ಎಂದರೆ ಅದು ಇಸ್ಲಾಂ ಭಯೋತ್ಪಾದನೆ ಎಂಬುದನ್ನು ಪ್ರಪಂಚವೇ ಒಪ್ಪಿಕೊಂಡಿವೆ. ಹೀಗಿರುವಾಗ ಭೂಮಿಯ ಮೇಲೆ ಅಲ್ಪಸಂಖ್ಯಾತರಾಗಿರುವ ಹಿಂದೂಗಳ
ಸರ್ವನಾಶದ ಮಾಡೆಲ್‌ಗಳಾಗಿರುವ ಅವಿವೇಕಿ ಹಿಂದೂಗಳೇ ’ಕೇಸರಿ ಭಯೋತ್ಪಾದನೆ’ ಎಂಬ ’ಅನಾಥ ಶವ’ವನ್ನು ಹೊರುತ್ತಿರುವುದು ಅವರುಗಳ ಅನಾಗರೀಕತೆಯ ಧ್ಯೋತಕ.

ಇಂಥವರನ್ನೇ ನಂಬಿಕೊಂಡಿರುವ ಶಾರಿಕ್ ತಾನು ಮಾಡುವ ಹರಾಮಿ ಕೆಲಸಕ್ಕೆ ಹಿಂದೂ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಕೊಂಡು ತನ್ನ ಸಾಮಾಜಿಕ ಜಾಲತಾಣದ ‘ಡಿಪಿ’ ಗೆ ಹಿಂದೂ ದೈವದ ಚಿತ್ರ ಹಾಕಿಕೊಂಡು ತಾನೊಬ್ಬ ಹಿಂದೂ
ಎಂದು ತೋರಿಸಿಕೊಂಡು ಸಂಚು ರೂಪಿಸಿದ್ದಲ್ಲದೇ, ಮೊನ್ನೆ ಬಾಂಬ್ ಸ್ಪೋಟವಾಗಿ ಸಿಕ್ಕಿಬಿದ್ದಾಗ ಸೊಂಟಕ್ಕೆ ಕೇಸರಿ ವಸವನ್ನು ಕಟ್ಟಿಕೊಂಡಿರುವುದು ಕಂಡುಬಂದಿದೆ. ಆ ಮೂಲಕ ಈತ ತನ್ನ ರಕ್ತಸಂಬಂಧಿಗಳಂತಿರುವ ಹಿಂದೂ ಸೋಗಲಾಡಿ ಗಳಿಗೆ ಕೇಸರಿ ಭಯೋತ್ಪಾದನೆಯಂತೆ ನಂಬಿಸಿ ಆ ಮೂಲಕ ಅವರುಗಳು ಹಿಂದೂಗಳ ಮೇಲೆಯೇ ಎರಗಿ ಬೀಳುವಂತೆ ಮಾಡುವುದು, ಜತೆಗೆ ಬಾಂಬ್ ಸ್ಫೋಟಿಸುವ ಮೂಲಕ ಒಂದಷ್ಟು ಹಿಂದೂಗಳನ್ನು ಕೊಲ್ಲುವುದು. ಒಂದೇ ಕಲ್ಲಿನಲ್ಲಿ ಎರಡು
ಹಕ್ಕಿಗಳನ್ನು ಹೊಡೆಯುವುದೆಂದರೆ ಇದೇ.

ಮೊನ್ನೆ ನೋಡಿ, ‘ವಿರೋಧ’ ಪಕ್ಷದ ನಾಯಕ ಸಿದ್ದರಾಮಯ್ಯನವರು ಮಂಗಳೂರು ಸ್ಫೋವನ್ನು ಗುಪ್ತಚರ ಮತ್ತು ಗೃಹ ಇಲಾಖೆಯ ವೈಫಲ್ಯ ಎನ್ನುತ್ತಾರೆ. ಅದೇ ಉಗ್ರರನ್ನು ಬಂಧಿಸಿದರೆ ಅದೇ ಕಾಂಗ್ರೆಸ್‌ನ ಮಹಮದ್ ನಲಪಾಡ್ ‘ಯುವಕರಿಗೆ ಕೆಲಸ ಸಿಗುತ್ತಿಲ್ಲ, ಹೀಗಾಗಿ ಅವರು ಕ್ರೈಂ ದಾರಿ ಹಿಡಿಯುತ್ತಾರೆ’ ಎನ್ನುತ್ತಾರೆ. ದುರ್ಘಟನೆ ನಡೆದರೆ ವೈಫಲ್ಯ, ಅದಕ್ಕೆ
ಕಾರಣ ವಾದವರನ್ನು ಬಂಧಿಸಿದರೆ ಅವರು ನಿರುದ್ಯೋಗಿ. ಹೀಗೆ ಎರಡನ್ನೂ ಸಮರ್ಥಿಸಿಕೊಳ್ಳುವ ಇಂಥವರನ್ನೇ ನಂಬಿರುವ ಶಾರಿಕ್ ನಂಥವರು ಸಿಕ್ಕಿಬಿದ್ದ ಮೇಲೂ ತನಗೆ ಜಾಮೀನು ನೀಡುವುದು, ವಕೀಲರನ್ನು ನೇಮಿಸಿ ವಾದಿಸುವುದು, ಮಾನವ ಹಕ್ಕು ಎಂದು ಹೋರಾಡುವುದು, ಜೈಲಿನಲ್ಲಿರಿಸಿ ಬಿರಿಯಾನಿ ಮೇಯಿಸಿಸುವುದು, ಅಲ್ಪಸಂಖ್ಯಾತರ ರಕ್ಷಣೆ ಎಂದು ನಿಂತು ಮತ್ತದೇ ವೋಟ್‌ಬ್ಯಾಂಕ್ ಭದ್ರಗೊಳಿಸುವುದು.

ಇದೆಲ್ಲಾ ’ಕಥೆ-ಚಿತ್ರಕಥೆ’ ಗಳನ್ನು ನೋಡಿ ಜನ ರೋಸಿಹೋಗಿದ್ದಾರೆ. ಈಗಾಗಲೇ ರಾಜ್ಯದೊಳಗೆ ನೂರಕ್ಕೂ ಹೆಚ್ಚು ಶಂಕಿತ ಉಗ್ರರು ಜೈಲಿನೊಳಗಿದ್ದು ಅವರಿಗೆ ಅಡುಗೆ, ಮೊಬೈಲು, ಫ್ರಿಡ್ಜ್, ಮಸೀದಿ, ಹೊರಜಗತ್ತಿನೊಂದಿಗೆ ಸಂಪರ್ಕವಿರುವುದು ಕೇಳಿಬರುತ್ತಿದೆ. ಹೀಗಾದರೆ ದೇಶದ ನ್ಯಾಯಾಂಗ ಶಾಸಕಾಂಗದ ಮೇಲಿನ ನಂಬಿಕೆ ಉಳಿಯುತ್ತಿದೆಯೆ ? ಭಯೋತ್ಪಾದಕ ರಿಗೆ ಇಂಥ ಸವಲತ್ತು ಪ್ರಪಂಚದ ಇನ್ನಾವ ದೇಶದಲ್ಲಿ ಸಿಗಲು ಸಾಧ್ಯ ಹೇಳಿ? ಭಾರತದ ಹೆಮ್ಮೆ (?!) ಎಂದರೆ ಇಲ್ಲಿ ಭಯೋತ್ಪಾದಕ ರನ್ನೂ, ಮತಾಂಧ ಜಿಹಾದಿಗಳನ್ನೂ ಕೊಲೆ ಪಾತಕರನ್ನೂ ‘ಅತ್ಯಮೂಲ್ಯ ಮತದಾರ’ ಎಂಬುದಾಗಿ ಪರಿಗಣಿಸುವ ‘ವಿಶಾಲ ಮನೋಭಾವದ’ ದರಿದ್ರ ರಾಜಕಾರಣಿಗಳಿದ್ದಾರೆ.

ಯೋಚಿಸಿ ನೋಡಿ, ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಶಾರಿಕ್ ಗುರುತು ಸಿಗದಂತೆ ನೆಗೆದು ಬಿದ್ದಿದ್ದರೆ ಏನಾಗುತ್ತಿತ್ತು? ಆಗ ಸ್ಥಳದಲ್ಲಿ ಸಿಗುತ್ತಿದ್ದ ಕೇಸರಿ ವಸ, ಹಿಂದೂ ಹೆಸರಿನಲ್ಲಿದ್ದ ಈತನ ‘ಹಾದರ್ ಕಾರ್ಡ್’ ನ್ನು ಇಟ್ಟುಕೊಂಡು ಇಲ್ಲಿನ ಲದ್ದಿಜೀವಿಗಳು, ‘ಅವರು ನನ್ನ ಬ್ರದರ್ಸ್’ ಎನ್ನುವವರು, ‘ನಾನು ಹಿಂದೂತ್ವದ ವಿರುದ್ಧ’ ಎನ್ನುವವರು, ಸಂಘಪರಿವಾರವನ್ನು ತಾಲಿಬಾನ್‌ಗೆ
ಹೋಲಿಸುವವರು, ಮತಾಂಧ ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎನ್ನುವವರು, ಹಿಂದೂ ಅಶ್ಲೀಲ ಪದ ಎನ್ನುವವರು, ದೈವಾರಾಧನೆ ಯನ್ನು ಹಿಂದೂತ್ವವಲ್ಲ ಎನ್ನುವ ಅಡ್ಡಕಸುಬಿ ಗಳೆಲ್ಲಾ ಚಡ್ಡಿಯೊಳಗೆ ಓತಿಕ್ಯಾತ ಬಿಟ್ಟುಕೊಂಡಿರುವಂತೆ ಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಾಯಲ್ಲೇ ಮಲಕಾರಿಕೊಳ್ಳುತ್ತಿದ್ದರು.

ಇಂಥ ಸಂಚನ್ನೇ ಅನುಸರಿಸಿದ ಮುಂಬೈ ತಾಜ್ ಹೋಟೆಲ್ ಸ್ಪೋಟದ ಪಾತಕಿ ಕಸಬ್ ಗಡ್ಡಬೋಳಿಸಿಕೊಂಡು ತನ್ನ ಕೈಗೆ ಕೇಸರಿ ದಾರವನ್ನು ಕಟ್ಟಿಕೊಂಡು ಹಿಂದೂ ಭಯೋತ್ಪಾದಕನಂತೆ ಬಿಂಬಿಸಿಕೊಂಡಿದ್ದ. ಅದೃಷ್ಟವಶಾತ್ ಪಾತಕಿ ಶಾರಿಕ್ ಜೀವಂತವಾಗಿ ಸಿಕ್ಕಿಬಿದ್ದು ದೊಡ್ಡ ಜಾಲವನ್ನು ಬೆನ್ನತ್ತುವಂತಾಗಿರುವುದು ಸಮಾಧಾನಕರ. ಇಲ್ಲದಿದ್ದರೆ ರಾಹುಲ್
ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ. ಕುಮಾರಸ್ವಾಮಿ, ಬಿ.ಕೆ. ಹರಿಪ್ರಸಾದ್, ಉಗ್ರಪ್ಪ, ದಿನೇಶ್ ಗುಂಡುರಾವ್, ರಾಮಲಿಂಗಂರೆಡ್ಡಿ, ನಲಪಾಡ್ ಇನ್ನಿತರರ ಹೇಳಿಕೆಗಳನ್ನು ಕೇಳಿ ಹಿಂದೂಗಳು ತಲೆಗೆ
ಅಮೃತಾಂಜನ್ ತಿಕ್ಕಿಕೊಂಡು ಅನಾಸಿನ್ ಗುಳಿಗೆ ನುಂಗಬೇಕಿತ್ತು.

ಸರಕಾರ ಎಚ್ಚೆತ್ತುಕೊಂಡರೆ ಭಯೋತ್ಪಾದಕರುನ್ನು ಹಿಡಿದು ಬಡಿಯುವುದಕ್ಕೆ ನಮ್ಮ ಪೊಲೀಸರು-ಸೈನಿಕರು ಇದ್ದೇ ಇರುತ್ತಾರೆ. ಆದರೆ ಫ್ರಿಡ್ಜ್-ಕುಕ್ಕರ್ ಮನಸ್ಥಿತಿಯವರು ಸಿಕ್ಕಿಬಿದ್ದಾಗಲೆಲ್ಲಾ ಅವರನ್ನು ಖಂಡಿಸದೇ ಕಣ್ಣು ಕಿವಿ ಬಾಯಿ
ಮುಚ್ಚಿಕೊಂಡಿರುತ್ತಾರಲ್ಲಾ ಇವರುಗಳು ಭಯೋತ್ಪಾದಕರಿಗಿಂತಲೂ ಹೆಚ್ಚು ಅಪಾಯಕಾರಿ.

ಉಗ್ರರು ಹಿಂದೂಗಳನ್ನು ಒಮ್ಮೆ ಕೊಂದರೆ ಇವರುಗಳು ಆಗಾಗ ಜೀವಂತವಾಗಿ ಕೊಲ್ಲುತ್ತಿರುತ್ತಾರೆ. ಇಂಥವರ ಬಗ್ಗೆ ಹಿಂದೂಗಳು ಎಚ್ಚೆತ್ತುಕೊಂಡು ಜಾಗೃತರಾಗಬೇಕಿದೆ. ತಮ್ಮ ಗುಲಾಮಗಿರಿಗಾಗಿ ಪದವಿಗಾಗಿ ಎಂಥ ಹೇಯವನ್ನು
ಬೇಕಾದರೂ ಸಮರ್ಥಿಸಿಕೊಂಡು ಅದರ ಪರವಾಗಿ ನಿಲ್ಲುವ ಇವರುಗಳು ದೇಶಕ್ಕೆ ದೊಡ್ಡ ಶಾಪವಾಗಿದ್ದಾರೆ. ಇಂಥವರನ್ನು ಜಾತಿ ಮುಲಾಜಿಗೆ, ಹಣ ಆಮಿಷಗಳಿಗೆ ಆಸೆಪಟ್ಟು ಮತನೀಡಿ ಗೆಲ್ಲಿಸುತ್ತಾ ಹೋದರೆ ಇವರು ಹಿಂದೂಗಳ ಒಂದೊಂದೇ
ಆಚರಣೆ ನಂಬಿಕೆ ಹಕ್ಕುಗಳನ್ನು ಹತ್ತಿಕ್ಕುತ್ತಾ ನರಸತ್ತವರಂತೆ ಮಾಡಿ ಕೂರಿಸುವಂಥ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿದೆ.

ಮೊನ್ನೆ ರಕ್ಕಸತನದ ಪರಮಾವಧಿ ಎಂಬಂತೆ ಶ್ರದ್ಧಾ ಎಂಬ ದಾರಿತಪ್ಪಿದ ಯುವತಿಯನ್ನು ಬಳಸಿಕೊಂಡು ತುಂಡರಿಸಿ
‘ಖೈಮಾ’ ಮಾಡಿದ ಆಫ್ತಾಬ್‌ನ ಪೈಶಾಚಿಕತೆಯನ್ನು ಯಾವುದೇ ತಿಪ್ಪೆ ಜೀವಿಗಳು ಖಂಡಿಸಲಿಲ್ಲ. ಸಾಮಾಜಿಕ ಜಾಲತಾಣ ಗಳಲ್ಲಿ ‘ಶ್ರದ್ಧಾ ದಲಿತ ವರ್ಗಕ್ಕೆ ಸೇರಿದ್ದಾಳೆ, ಸ್ವಾರ್ಥಕ್ಕಾಗಿ ದಲಿತರನ್ನು ಬಳಸಿಕೊಂಡ ಎತ್ತಿಕಟ್ಟುವ ಮುಖಂಡರೇ ಎಲ್ಲಿ ಅಡಗಿದ್ದೀರಿ’ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಹತ್ಯೆಯಾಗಿರುವವಳು ಹಿಂದೂ ಹೆಣ್ಣುಮಗಳು ಆದ್ದರಿಂದ ‘ಡೋಂಟ್ ಕೇರ್’! ‘ದಿನಾ ಸಾಯುವವಳಿಗೆ’ ಅಳುವವರಾರು ಅಲ್ಲವೇ !

ಇನ್ನು ದೇಶದ ಮುಸಲ್ಮಾನರಿಗೆ ಏನಾಗಿದೆ? ಪ್ರವಾದಿ ಪೈಗಂಬರ್ ವಿರುದ್ಧ ಮಾತನಾಡುವವರ ವಿರುದ್ಧ, ಇಸ್ಲಾಂ ಸಿದ್ಧಾಂತವನ್ನು ತಪ್ಪಿದವರ ವಿರುದ್ಧ ಫತ್ವಾ ಹೊರಡಿಸುವ ಅಲ್ಲಾಹುವಿನ ಅನುಯಾಯಿಗಳು, ತಮ್ಮ ಧರ್ಮದ ವಿರುದ್ಧ
ಯಾರಾದರೂ ಸಣ್ಣ ಅಪಚಾರವೆಸಗಿದರೆ ಕೂಡಲೇ ಪ್ರತಿಕ್ರಿಯಿಸುವ ಮೌಲ್ವಿಗಳು ಮೌನವಾಗಿರುವುದೇಕೆ? ಲವ್‌ಜಿಹಾದ್ ಮೂಲಕ ಅಮಾಯಕ ಹಿಂದೂ ಹೆಣ್ಣುಮಕ್ಕಳಿಗೆ ನರಕ ತೋರಿಸುತ್ತಿರುವುದರ ವಿರುದ್ಧ ಇಡೀ ದೇಶ ಮುಸಲ್ಮಾನ ಯುವಕರನ್ನು ಕೆಟ್ಟದಾಗಿ, ಶಾರಿಕ್ ನಂಥವರಿಂದಾಗಿ ಇಡೀ ಮುಸಲ್ಮಾನರನ್ನು ಅಸಹ್ಯವಾಗಿ ನೋಡುವಂಥ ವಾತಾವರಣ ನಿರ್ಮಾಣ ವಾಗುತ್ತಿದೆ.

ಹೀಗೆ ದೇಶದಲ್ಲಿ ತಮ್ಮ ಧರ್ಮದ ನೈತಿಕತೆಗೆ ಮೌಲ್ಯಗಳಿಗೆ ಹಾನಿಯಾಗುತ್ತಿದೆ, ತಮ್ಮ ಧರ್ಮದ ಮೇಲಿನ ನಂಬಿಕೆಗೆ ದೊಡ್ಡ ಘಾಸಿಯಾಗುತ್ತಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೇಕೆ? ಸಂಭಾವಿತ ಹಿರಿಯ ಮುಸ್ಲಿಂ ಧರ್ಮಗುರುಗಳು ತಮ್ಮ
ಧರ್ಮಕ್ಕೆ ಕಂಳಕ ತರುತ್ತಿರುವ ಶಾರಿಕ್-ಆಫ್ತಾಬ್ ನಂಥ ಯುವಕರ ಕೃತ್ಯಗಳನ್ನು ಒಂದು ಪತ್ರಿಕಾಗೋಷ್ಠಿ ನಡೆಸಿ ಖಂಡಿಸ ಬಹುದಲ್ಲವೇ? ಮಕ್ಕಳು ಪದೇಪದೇ ಹೊರಗೆ ಜಗಳ ಮಾಡಿಕೊಂಡು ಬಂದಾಗ ಗದರಿಸಿ ಎರಡೇಟು ಹಾಕಿ ಇನ್ನೊಂದ್ಸಲ ಅವರ ತಂಟೆಗೆ ಹೋಗಬೇಡ ನಮಗೆ ಕೆಟ್ಟೆಸರು ಬರುತ್ತದೆ ಎಂದು ಹೆತ್ತವರು ದಂಡಿಸುತ್ತಾರಲ್ಲವೇ.

ಹಾಗೆಯೇ ಮುಸ್ಲಿಂ ಯುವಕರಿಗೆ ಹಿಂದೂ ಹೆಣ್ಣುಮಕ್ಕಳ ತಂಟೆಗೆ ಹೋಗಬೇಡಿ, ನೀವು ಮಾಡುವ ಹರಾಮಿ ಕೆಲಸದಿಂದ ನಮ್ಮ ಧರ್ಮಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ದೊಡ್ಡಮಟ್ಟದಲ್ಲಿ ಆದೇಶಿದರೆ ಯಾವ ಅನಕ್ಷರಸ್ಥ ಮುಸ್ಲಿಂ ಯುವಕ ಪಾಲಿಸುವುದಿಲ್ಲ ಹೇಳಿ. ತಮ್ಮ ಮಕ್ಕಳಿಗೆ ತಾವು ತಿಳಿಹೇಳಿ ಸರಿದಾರಿಗೆ ತರಬೇಕೇ ಹೊರತು, ಕೇವಲ ಅವಕಾಶ ರಾಜಕಾರಣಕ್ಕಾಗಿ ಬಳಸಿಕೊಳ್ಳುವ ಡೋಂಗಿ ರಾಜಕಾರಣಿಗಳಿಗೆ ವಹಿಸಿದರೆ ಏನಾಗುತ್ತದೆಂದು ದೇಶಕ್ಕೆ ಸ್ವತಂತ್ರ ಬಂದಾಗಿನಿಂದಲೂ
ನೋಡುತ್ತಿದ್ದೇವಲ್ಲವೇ?.

ಇನ್ನಾದರೂ ಮುಸಲ್ಮಾನರು ಎಚ್ಚೆತ್ತುಕೊಂಡು ಹಿಂದೂಗಳನ್ನು ರಾಜಕೀಯದ, ರಾಜಕಾರಣದ ಅನಿಷ್ಟ ‘ಕನ್ನಡಕ’ ಧರಿಸಿ ನೋಡುವುದನ್ನು ಬಿಟ್ಟು ‘ಸರ್ವೇ ಜನ ಸುಖಿನೋ ಭವಂತು’, ‘ವಸುದೈವ ಕುಟುಂಬಕಂ’ ಎನ್ನುವ ವಿಶ್ವಮಂತ್ರ ಪಠಿಸುವ
ಹಿಂದೂಗಳ ಇತಿಹಾಸ ಔದಾರ್ಯ ಸೌಹಾರ್ದತೆಯ ಕನ್ನಡಕದಲ್ಲಿ ನೋಡಿದರೆ ಈ ನಕಲಿ ಜಾತ್ಯತೀತ ವಾದಿಗಳಿಗೆ ಉಳಿಗಾಲವಿರುವುದಿಲ್ಲ. ಅದನ್ನು ದೇಶದ ಮುಸಲ್ಮಾನರು ಗಂಭೀರವಾಗಿ ಚಿಂತಿಸಿ ಇಂಥವರ ಬೆನ್ನಿನ ಕೆಳಗೆ ಒದ್ದು ದೂರವಿಡುವ ಕೆಲಸಮಾಡಬೇಕು.

ಅಂದಹಾಗೆ ಮೊನ್ನೆ ಕುಕ್ಕರ್ ಬಾಂಬ್ ಸ್ಪೋಟಿಸಿದ ಸ್ಥಳ ಯಾವುದು ಗೊತ್ತೇ? ಮಂಗಳೂರಿನ ಶ್ರೀ ಬ್ರಹ್ಮ ಬೈದರ್ಕಳ ಗರಡಿ
ಕ್ಷೇತ್ರದ ಅವಳಿ ದೈವಗಳಾದ ಕೋಟಿ-ಚೆನ್ನಯ ದೇವಾಲಯದ ಸಮೀಪ. ಉಗ್ರರ ‘ಟಾರ್ಗೆಟ್ ಟೆಂಪಲ್’ ಸಂಚನ್ನು ಈ ದೈವಗಳೇ ನಿಯಂತ್ರಿಸಿದ್ದಾರೆ ಎಂಬ ನಂಬಿಕೆ ಹುಟ್ಟಿದೆ. ಸಾಕಲ್ಲವೇ ‘ವಿನಾಶಾಯಚ ದುಷ್ಕೃತಾಂ ಧರ್ಮ ಸಂಸ್ಥಾಪನಾ ರ್ಥಾಯ ಸಂಭವಾಮಿ ಯುಗೇ ಯುಗೇ..’ ನಂಬಿಕೆ ಇರಲಿ! ಜತೆಗೆ ಎಚ್ಚರಿಕೆಯೂ ಇರಲಿ! ತನಿಖೆ ತಾರ್ಕಿಕ ಅಂತ್ಯ ಕಾಣಲಿ.