ಆನಂದದ ಕಡಲಲ್ಲಿ ತೇಲಿದ ಪಕ್ಷದ ವರಿಷ್ಟರು : ಕಿಲೋ ಮೀಟರ್ ಗಟ್ಟಲೆ ಎಲ್ಲೆಲ್ಲೂ ಜನವೋ ಜನ
ಚಿಕ್ಕಬಳ್ಳಾಪುರ : ಪಂಚರತ್ನ ರಥಯಾತ್ರೆಯ ಜವಾಬ್ದಾರಿ ಹೆಗಲೇರಿಸಿ ಕೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರ ಸ್ವಾಮಿ ಅವರ ಚಿಂತೆಯನ್ನು ದೂರ ಮಾಡಿ, ಕನಸಿಗೆ ಬಲ ತುಂಬುವ0ತೆ ಸಾಹಸ್ರಾರು ಜನಸಮೂಹದ ನಡುವೆ ಮೇಲೂರು ರವಿ ಅಕ್ಷರಶಃ ಶಕ್ತಿ ಪ್ರದರ್ಶನ ಮಾಡಿ ಸೈಎನಿಸಿಕೊಂಡು ಪಕ್ಷದ ಟಿಕೆಟ್ ಖಾಯಂ ಮಾಡಿಕೊಂಡರು.
ಶಿಡ್ಲಘಟ್ಟ ತಾಲೂಕಿಗೆ ಆಗಮಿಸಿದ ಪಂಚರತ್ನ ರಥಯಾತ್ರೆಯನ್ನು ವೈಹುಣ ಸೇನಹಳ್ಳಿ ಗ್ರಾಮದ ಬಳಿ ಸುಮಂಗಲಿಯರಿ0ದ ಪೂರ್ಣಕುಂಭ ಕಳಶ ಹಾಗೂ ಮಂಗಳವಾಧ್ಯಗಳೊ0ದಿಗೆ ಅದ್ದೂರಿಯಾಗಿ ಬರಮಾಡಿಕೊಂಡ ಮೇಲೂರು ರವಿಕುಮಾರ್ ಶಕ್ತಿದೇವತೆಗೆ ಪೂಜೆ ಸಲ್ಲಿಸಿ ರೋಡ್ ಷೋ ಪ್ರಾರಂಭಿಸಿದರು.
ಚಿoತಾಮಣಿ ಶಿಡ್ಲಘಟ್ಟ ಚಿಕ್ಕಬಳ್ಳಾಪುರ ರಸ್ತೆ ಸಂಪೂರ್ಣವಾಗಿ ಜನಸಂದಣಿಯಿ0ದ ತುಂಬಿ ಹೋಗಿದ್ದಲ್ಲದೆ ಹಾದಿಯುದ್ದಕ್ಕೂ ಭಾರೀ ಗಾತ್ರದ ಹೂವು,ಸೇಬಿನ ಬೃಹತ್ ಹಾರಗಳನ್ನು ಕ್ರೇನ್ ಜೆಸಿಬಿ ಬಳಸಿ ಮುಖಂಡರ ಕೊರಳಿಗೆ ಹಾಕಿದ್ದು, ಈ ವೇಳೆ ಸುರಿಸಿದ ಹೂವಿನ ಓಕುಳಿ ಸಂಭ್ರಮ ವಿಶೇಷವಾಗಿತ್ತು.
ಶಿಡ್ಲಘಟ್ಟ ನಗರದ ಪ್ರವೇಶ ಬಾಗಿಲಿಂದ ನಗರ ಬಿಡುವವರೆಗೆ ಸುಮಾರು ೧೦ ಕಡೆ ವಿವಿಧ ಸಮುದಾಯಗಳ ಜನತೆ ಮುಖಂಡರು ಬೃಹತ್ ಹೂವು ಮತ್ತು ಸೇಬಿನ ಹಾರಗಳನ್ನು ಅರ್ಪಿಸಿ ಸಂತೋಷಪಟ್ಟರೆ ಮುಖಂಡರು ರವಿಕುಮಾರ್ ಸಂಘಟನಾ ಶಕ್ತಿಗೆ ದಂಗಾಗಿ ಹೋದರು.
ಜನಸಂದಣಿ ಹೇಗಿತ್ತು ಎಂದರೆ ಜೆಸಿಬಿ, ಮಾಳಿಗೆಗಳ ಮೇಲೆಲ್ಲಾ ನಿಂತ ಜನರಿಂದ ಹೂಮಳೆ, ಪೂರ್ಣಕುಂಭ ಸ್ವಾಗತ. ಕ್ರೇನ್‌ಗಳಲ್ಲಿ ದೊಡ್ಡ ಗಾತ್ರದ ಹೂವಿನ ಮತ್ತು ಸೇಬಿನ ಮಾಲಾ ರ್ಪಣೆ, ರೇಷ್ಮೆ ಗೂಡಿನ ಹಾರ, ಜೊತೆಗೆ ರೋಡ್ ಶೋ ಜತೆಗೆ ಸಾರ್ವಜನಿಕ ಸಭೆಯಲ್ಲಿ ಮಾತಿನ ಭರಾಟೆಯಲ್ಲಿ ಕ್ಷೇತ್ರದ ಜನತೆ ಮಿಂದೆದ್ದರು.
ಶಿಡ್ಲಘಟ್ಟ ತಾಲ್ಲೂಕಿನ ವೈ.ಹುಣಸೇನಹಳ್ಳಿಯಲ್ಲಿ ಜನಸ್ತೋಮ ಉದ್ದೇಶಿಸಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್ ಅಧಿಕಾರಕ್ಕೆ ಬಂದ ೨೪ ಗಂಟೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುವುದು. ಸಾವಿರಾರು ನಿರಾಶ್ರಿತ ಕುಟುಂಬ ಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಬಡ ಮಕ್ಕಳಿಗೆ ಉಚಿತ ಗುಣಮಟ್ಟ ಶಿಕ್ಷಣ ನೀಡಲಾಗುವುದು.
ಪ್ರತಿ ಗ್ರಾಮ ಪಂಚಾ ಯಿತಿ ಕೇಂದ್ರದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರ ತೆರೆದು ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ನಿರೋದ್ಯೋಗ ಯುವಕ” ಯುವತಿಯರಿಗೆ ಕೌಶಲ ತರಬೇತಿ ನೀಡಿ ಸಾಲ ಸೌಲಭ್ಯ ಕಲ್ಪಿಸಲಾಗುವುದು” ಎಂದರು.ಮಹಿಳೆಯರಿಗೆ ಸರ್ಕಾರ ದಿಂದಲೇ ತರಬೇತಿ ಶಿಬಿರ ನೀಡಿ, ಹಳ್ಳಿಗಾಡಿನಲ್ಲೇ ಎಂಟತ್ತು ಮಂದಿಗೆ ಉದ್ಯೋಗ ಕೊಡುವ ಶಕ್ತಿ ತುಂಬುತ್ತೇನೆ ಎಂದು ನುಡಿದರು.
ಕಾಂಗ್ರೆಸ್ ಬಿ ಟೀಮ್
ಜೆಡಿಎಸ್ ಬಿಜೆಪಿಯ ಬಿ ಟೀಮ್ ಅಂತ ಹೇಳ್ತಾರೆ ಅಂದ್ರೆ ಜೆಡಿಎಸ್ ಬಿಜೆಪಿ ಭೇಟಿ ಟೀಮ್ ಅಲ್ಲ , ಕಾಂಗ್ರೆಸ್ ಬಿಜೆಪಿಯ ಬಿಟಿಎಂ ಇದನ್ನು ಮುಸ್ಲಿಂ ಬಾಂಧವರು ಅರ್ಥಮಾಡಿಕೊಳ್ಳಬೇಕು. ರೈತ, ಮುಸ್ಲಿಂ, ಹಿಂದುಗಳ ಕುಟುಂಬದ ಶೈಕ್ಷಣಿಕ ಉತ್ತಮವಾಗಬೇಕು ಆರ್ಥಿಕ ಪರಿಸ್ಥಿತಿ ಉತ್ತಮ ಆಗಬೇಕು ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆನ್ನುವುದೇ ನಮ್ಮ ಮುಖ್ಯ ಉದ್ದೇಶ . ೨೦೧೮ ರಲ್ಲಿ ಅಧಿಕಾರದಲ್ಲಿದ್ದಾಗ ಕೇವಲ ೧೮ ತಿಂಗಳಲ್ಲಿ ರೈತರ ಸಾಲ ಮನ್ನಾ ಮಾಡುವ ಕೆಲಸ ಮಾಡಿದ್ದೇನೆ, ಈ ಕ್ಷೇತ್ರದಲ್ಲಿ ರವಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ರವಿಯನ್ನು ನಿಮ್ಮ ಮನೆಯ ಅಣ್ಣ,ತಮ್ಮನಾಗಿ ನೋಡಿ ಮತ ಹಾಕುವ ಮೂಲಕ ಆರಿಸಿ ಕಳಿಸಿ ಎಂದು ಜನರಲ್ಲಿ ಮನವಿ ಮಾಡಿದರು.
ಪಕ್ಷದ ಅಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ ಶಿಡ್ಲಘಟ್ಟ ಕ್ಷೇತ್ರದ ಜನತೆ ಬಾರಿ ಕೆಹೆಚ್ ಮುನಿಯಪ್ಪ ಅವರಿಗೆ ಮೋಸ ಮಾಡಿದ ವಿ.ಮುನಿಯಪ್ಪ ಅವರಿಗೆ ಮತಹಾಕದೆ ಮೇಲೂರು ರವಿ ಅವರಿಗೆ ಮತ ಹಾಕಬೇಕು. ರವಿಯ ಗೆಲುವು ದೇಶದ ಗೆಲುವವು.
ಕೋಮುಸೌಹಾರ್ಧತೆಯ ಗೆಲುವು. ಬಿಜೆಪಿನ ಸರಕಾರ ಬರಲು ಕಾರಣವಾಗಿ ರಾಜ್ಯದಲ್ಲಿ ಶಾಂತಿ ಕದಡುವ ಕೆಲಸ ಮಾಡಿರುವ ಸಿದ್ದರಾಮಯ್ಯ ಅವರನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ.ಬಿಜೆಪಿ ದಲಿತ, ಅಲ್ಪಸಂಖ್ಯಾತ ಒಕ್ಕಲಿಗ ಸಮುದಾಯದ ಮತಗಳನ್ನು ಓಟರ್ ಲಿಸ್ಟಿಂದ ತೆಗೆದು ಹಾಕುತ್ತಿದೆ. ಈ ಬಗ್ಗೆ ಎಚ್ಚರವಿರಲಿ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂಬುದನ್ನು ಈಗಲೇ ಖಚಿತಪಡಿಸಿಕೊಳ್ಳಿ. ಮುಸ್ಲಿಂ ಮತದಾರರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತಹಾಕಬೇಡಿ.ಮರೆತು ಹಾಕಿದರೆ ನಿಮ್ಮ ಬದುಕನ್ನು ನೀವೇ ಹಾಳುಮಾಡಿಕೊಂಡ0ತೆ ಎಂದು ಕಿವಿ ಮಾತು ಹೇಳಿದರು.
ಪ್ರಜ್ವಲ್ ರೇವಣ್ಣ ಮಾತನಾಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ ಪಕ್ಷದ ಮೇಲಿಟ್ಟಿರುವ ಪ್ರೀತಿ ನಂಬಿಕೆ ವಿಶ್ವಾಸಕ್ಕೆ ಆಭಾರಿಯಾಗಿ ದ್ದೇನೆ.ಇಲ್ಲಿನ ಜನತೆ ದೇಶಕ್ಕೆ ಒಳ್ಳೆಯ ಹಣ್ಣು ಹಾಲು ರೇಷ್ಮೆ ನೀಡಿದರೆ, ಸಚಿವ ಸುಧಾಕರ್ ಕೊಳಚೆ ನೀರನ್ನು ನೀಡಿ ಇವರ ಬದುಕಿನ ಜತೆ ಚೆಲ್ಲಾಟ ಆಡುತ್ತಿದ್ದಾರೆ.ಈ ಭಾಗದ ಟೊಮೇಟೋ ವಿಶ್ವದರ್ಜೆಯ ಗುಣಹೊಂದಿತ್ತು.ಈಗ ಹಣ್ಣು ಕೆಂಪಾಗುವ ಬದಲು ಬಣ್ಣ ಕಳೆದುಕೊಳ್ಳುತ್ತಿದೆ.ಈ ನೀರನ್ನು ಬಳಸಿ ಬೆಳೆದ ತರಕಾರಿ ಕೊಳೆಯುತ್ತಿದೆ. ಜನತೆ ಪ್ಲೋರೈಡ್ ಜತೆಗೆ ಕ್ಯಾನ್ಸರ್‌ಗೆ ಗುರಿಯಾಗುತ್ತಿದ್ದಾರೆ.ಜನರ ಶಾಪ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಸುಡಲಿದೆ. ಕುಮಾರಣ್ಣನ ಕೈ ಬಲಪಡಿಸಿದರೆ ಖಂಡಿತವಾಗಿ ನದಿ ನೀರೆನ್ನು ಈ ಭಾಗಕ್ಕೆ ಹರಿಸಿಯೇ ತೀರುತ್ತಾರೆ ಎಂದರು.
ಶಿಡ್ಲಘಟ್ಟ ಕ್ಷೇತದ ಜೆಡಿಎಸ್ ಅಭ್ಯರ್ಥಿ ಮೇಲೂರು ಬಿ.ಎನ್.ರವಿಕುಮಾರ್, ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿA, ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಇಂಚರ ಗೋವಿಂದರಾಜು, ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಸಿ.ಎಂ.ಆರ್.ಶ್ರೀನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಕ್ ಮುನಿಯಪ್ಪ, ಹುಜಗೂರು ರಾಮಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ ಹಾಜರಿದ್ದರು.