Saturday, 26th October 2024

ಪಂಚರತ್ನ ಯೋಜನೆಗಳು ಪ್ರಚಾರದ ಸಾಧನಗಳಲ್ಲ : ಬದ್ಧತೆಯ ಯೋಜನೆಗಳು

ಜಿಲ್ಲೆಗೆ ಶಾಶ್ವತ ನದಿ ನೀರು ಕೊಡುವುದು ಜೆಡಿಎಸ್ ಪಕ್ಷದ ಪೈಲಟ್ ಘೋಷಣೆ

ಚಿಕ್ಕಬಳ್ಳಾಪುರ: ಪಂಚರತ್ನ ರಥಯಾತ್ರೆ ಇಲ್ಲಿ ಘೋಷಣೆ ಮಾಡಿರುವ ಯೋಜನೆಗಳು ಪ್ರತಿ ಪಕ್ಷಗಳು ಹೇಳುವಂತೆ ಪ್ರಚಾರದ ಸಾಧನಗಳಲ್ಲ. ಬದಲಿಗೆ ಜೆಡಿಎಸ್ ಪಕ್ಷದ ಬದ್ಧತೆಯ ಶಾಶ್ವತ ಯೋಜನೆಗಳಾಗಿವೆ. ಪೂರ್ಣ ಪ್ರಮಾಣದಲ್ಲಿ ನಮ್ಮ ಪಕ್ಷಕ್ಕೆ ಜನಮತ ದೊರೆತರೆ ಖಂಡಿತವಾಗಿ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳಿಗೆ ನದಿ ನೀರನ್ನು ಹರಿಸುವುದನ್ನು ಪೈಲಟ್ ಯೋಜನೆಯಾಗಿ ತೆಗೆದುಕೊಳ್ಳಲಾಗು ವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಚಿಂತಾಮಣಿ ತಾಲೂಕು ಚಿನ್ನಸಂದ್ರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಬಗ್ಗೆ ಮಾಹಿತಿ ಹಂಚಿಕೊ0ಡರು. ಪ0ಚರತ್ನ ರಥಯಾತ್ರೆಯನ್ನು ಕಾಂಗ್ರೆಸ್ ಎಂಎಲ್‌ಸಿ ಅನಿಲ್‌ಕುಮಾರ್ ನಗೆಪಾಟಲಿನ ರಥಯಾತ್ರೆ ಎಂದು ಜರಿದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮು ಹೌದು ಕಾಂಗೆಸ್ಸಿಗರಿಗೆ ಇದು ನಗೆಪಾಟಲು. ಆದರೆ ನಮಗದು ಶ್ರಮ ಪಾಟಲು,ನಮ್ಮ ಮೇಲಿನ ಪ್ರೀತಿ ವಿಶ್ವಾಸದಿಂದ ಸೇರುತ್ತಿರುವ ಜನಜಾತ್ರೆ ನೋಡಲಾಗದೆ ಅಳುಕು ಶುರುವಾಗಿ ಬಾಯಿಗೆ ಬಂದ0ತೆ ಮಾತನಾಡು ತ್ತಿದ್ದಾರೆ. ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು  ಕಿಡಿ ಕಾರಿದರು.

ದಲಿತ ಉಪಮುಖ್ಯಮಂತ್ರಿ ಪಕ್ಕಾ
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಖಂಡಿತವಾಗಿ ದಲಿತ ಸಮುದಾಯದ ಒಬ್ಬರನ್ನು ಉಪಮುಖ್ಯಮಂತ್ರಿ ಮಾಡುವುದು ಖಚಿತ. ನಾನು ಸಿದ್ದರಾಮಯ್ಯ ಹೇಳುವಂತೆ ನಾನು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿಲ್ಲ. ಸ್ಪಷ್ಟವಾಗಿ ಹೇಳುತ್ತಿದ್ದೇನೆ ಮಹಿಳೆಯನ್ನು, ವೀರಶೈವ ಸಮುದಾಯದ ಒಬ್ಬರನ್ನು ಉಪಮುಖ್ಯಮಂತ್ರಿ ಮಾಡುವುದಷ್ಟೇ ಅಲ್ಲದೆ ಸ್ವತಂತ್ರ ಅಧಿಕಾರ ನೀಡುವೆ. ಸಿದ್ದರಾಮಯ್ಯ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡಿದರೂ ಅವರಿಗೆ ಸ್ವತಂತ್ರವಾಗಿ ವ್ಯವಹರಿಸಲು ಅಧಿಕಾರ ನೀಡಲೇ ಇಲ್ಲ. ನಾನು ಅವರಂತೆ ಯಾರೋ ಕಟ್ಟಿದ ಗೂಡಲ್ಲಿ ಹೋಗಿ ಅಧಿಕಾರವನ್ನು ಸವಿದಿಲ್ಲ. ನಮ್ಮ ಪಕ್ಷಕ್ಕಾಗಿ ಒಂದೊ0ದು ಓಟು ಪಡೆಯಲು ಆರೋಗ್ಯ ಲೆಕ್ಕಿಸದೆ ಹಗಲು ರಾತ್ರಿ ನೋಡದೆ ದುಡಿದಿದ್ದೇನೆ ಎಂದು ತಿರುಗೇಟು ನೀಡಿದರು.

ಸ್ವಾಮೀಜಿ ನಿರ್ಣಯಕ್ಕೆ ಬದ್ದ
ಒಕ್ಕಲಿಗ ಮೀಸಲಾತಿ ಸಂಬAಧ ಕೇಳಿದ ಪ್ರಶ್ನೆಗೆ ನಮ್ಮ ಸಮುದಾಯದ ಸ್ವಾಮೀಜಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ದನಿದ್ದೇನೆ.ಇತರೆ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿದಂತೆ ಜನಸಂಖ್ಯೆ ಆಧರಿಸಿ ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ಹೆಚ್ಚು ಮಾಡಬೇಕು ಎಂಬ ಆಗ್ರಹ ನ್ಯಾಯಯುತವಾಗಿದೆಯಲ್ಲ.ಈ ಬಗ್ಗೆ ಮುಂದಿನ ತೀರ್ಮಾನಗಳು ಏನೇನಾಗುತ್ತವೋ ಕಾದು ನೋಡೋಣ ಎಂದರು.

ಸಮಸ್ಯೆಗಳ ದರ್ಶನ
ಪಂಚರತ್ನ ರಥಯಾತ್ರೆಯು ನೈಜವಾಗಿ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಕಣ್ಣಾರೆ ಕಾಣಲು ದೇವರು ಒದಗಿಸಿದ ಒಂದು ಅವಕಾಶ ಎಂದು ಭಾವಿಸುತ್ತೇನೆ.ಮುಂಗಾನಹಳ್ಳಿ ಗ್ರಾಮದಲ್ಲಿ ದಲಿತ ಸಮುದಾಯದ ಹೆಣ್ಣುಮಗಳು ಸರಕಾರಿ ಪ್ರೌಢಶಾಲೆಯ ದುರವಸ್ಥೆ ಬಗ್ಗೆ ಎಳೆಎಳೆಯಾಗಿ ನನ್ನ ಬಳಿ ಸಮಸ್ಯೆ ತೋಡಿಕೊಂಡಳು.ರಾತ್ರಿ ೧೧ ಗಂಟೆಯಲ್ಲಿ ದೈರ್ಯವಾಗಿ ನಾನು ಕುಳಿತಿದ್ದ ವಾಹನವನ್ನು ನಿಲ್ಲಿಸಿ ಈ ಬಗ್ಗೆ ಗಮನ ಸೆಳೆದ ಆಕೆಯನ್ನು ಅಭಿನಂದಿಸುತ್ತೇನೆ.ಈತರ ನೂರಾರು ಸಮಸ್ಯೆಗಳನ್ನು ಕಾಣಲು ಜನತೆಗೆ ಸ್ಪಂಧಿಸಲು ಇದು ನೆರವಾಗಿದೆ ಎಂದು ಪಂಚರತ್ನ ರಥಯಾತ್ರೆಯ ಸಫಲತೆ ಬಗ್ಗೆ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಶಾಸಕ ಜೆ,ಕೆ.ಕೃಷ್ಣಾರೆಡ್ಡಿ,ಮಾಜಿ ಶಾಸಕ ವೆಂಕಟಶಿವಾರೆಡ್ಡಿ,ಮಾಜಿ ಎಂಎಲ್ಸಿ ತೂಪಲ್ಲಿ ಚೌಡರೆಡ್ಡಿ ಮತ್ತಿತರರು ಇದ್ದರು.