Sunday, 15th December 2024

ಬಾಗೇಪಲ್ಲಿಯಲ್ಲಿ ನಾಗರಾಜರೆಡ್ಡಿಗೆ ಜೆಡಿಎಸ್ ಟಿಕೆಟ್ ಖಚಿತ :ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ

ಅಧಿಕಾರ ನೀಡಿದರೆ ತೆಲಂಗಾಣ ಮಾದರಿಯಲ್ಲಿ ರೈತರಿಗೆ ಎಕರೆ ಬಿತ್ತನೆಗೆ ೧೦ ಸಾವಿರ ನೀಡುವೆ

ಚಿಕ್ಕಬಳ್ಳಾಪುರ : ಬಾಗೇಪಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಡಿ.ಜೆ.ನಾಗರಾಜರೆಡ್ಡಿ ಅವರಿಗೆ ಟಿಕೆಟ್ ನೀಡುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬಾಗೇಪಲ್ಲಿ ತಾಲೂಕಿನಲ್ಲಿ ಪಂಚರತ್ನ ರಥಯಾತ್ರೆ ಸಂಚಾರದ ವೇಳೆ ಅವರು ಮಾತನಾಡಿದರು. ಇಲ್ಲಿ ಸಣ್ಣ ಪುಟ್ಟ ಗೊಂದಲ ಇರಬಹುದು. ಆದರೆ ಈ ಬಾರಿ ಡಿಜೆ ನಾಗರಾಜರೆಡ್ಡಿ ಅವರಿಗೇ ಟಿಕೆಟ್ ನೀಡಲಾಗುವುದು.ಜನತೆ ಇವರನ್ನು ಆರಿಸಿ ಕಳಿಸುವ ಮೂಲಕ ಜೆಡಿಎಸ್ ಅಧಿಕಾರಕ್ಕೆ ಬರಲು ನೆರವು ನೀಡಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ತೆಲಂಗಾಣ ಮಾದರಿಯಲ್ಲಿ ರೈತಾಪಿ ವರ್ಗಕ್ಕೆ ಪ್ರತಿ ಎಕರೆ ಬಿತ್ತನೆ ಮಾಡಲು ೧೦ ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು.ಜಿಲ್ಲೆಯಲ್ಲಿ ಬೆಳೆಯುವ ಬೆಳೆಗೆ ಶುದ್ದನೀರು ಹರಿಸುವ ಯೋಜನೆ ಜಾರಿಗೊಳಿಸುವೆ. ಚಿತ್ರಾವತಿ ನದಿ ತುಂಬಿದೆ.

ಅಲ್ಲಿಂದ ಶುದ್ದ ನೀರು ಕೊಟ್ಟರೆ ಭತ್ತ ಬೆಳೆಯಬಹುದು.ಬಾಗೇಪಲ್ಲಿ ಗಡಿ ಪ್ರದೇಶದಲ್ಲಿರುವ ತಾಲೂಕಾಗಿದ್ದು ಇಲ್ಲಿ ಕಡು ಬಡವರು ಹೆಚ್ಚಾಗಿ ವಾಸ ಮಾಡುತ್ತಿರುವ ಮಾಹಿತಿ ನನಗಿದೆ. ಇಲ್ಲಿನ ಜನರಿಗೆ ವಿಶೇಷ ಸೌಲಭ್ಯ ಕೊಡುವ ವ್ಯವಸ್ಥೆ ಮಾಡ ಲಾಗುವುದು. ಈ ಬಾರಿ ಹಂಗಿನ ಸರಕಾರ ಕೊಡಬೇಡಿ. ನಾಗರಾಜ ರೆಡ್ಡಿಗೆ ಆಶೀರ್ವಾದ ಮಾಡುವ ಮೂಲಕ ಪೂರ್ಣ ಬಹುಮತದ ಸರಕಾರ ನೀಡಿ ಎಂದು ಮನವಿ ಮಾಡಿದರು.

ಬಾಗೇಪಲ್ಲಿ ನನ್ನ ಹೃದಯದಲ್ಲಿ ಅತ್ಯಂತ ಹೆಚ್ಚಿನ ಸ್ಥಾನ ಪಡೆದ ಕ್ಷೇತ್ರವಾಗಿದೆ. ನಾನು ಎಂಪಿಗೆ ಸ್ಪರ್ಧೆ ಮಾಡಿದ್ದ ವೇಳೆ ಅತ್ಯಂತ ಹೆಚ್ಚಿನ ಮತ ನೀಡಿದ ಕ್ಷೇತ್ರವಾಗಿದೆ.ಇದನ್ನು ಅಭಿವೃದ್ದಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದಕ್ಕಾಗಿ ನಮ್ಮ ಪಕ್ಷಕ್ಕೆ ಬಲ ತುಂಬುವ ಕೆಲಸವನ್ನು ಇಲ್ಲಿನ ಮತದಾರರು ಮಾಡಬೇಕು ಎಂದು ಕರೆ ನೀಡಿದರು.

ತೆಲಂಗಾಣದಲ್ಲಿ ಬಿಜೆಪಿ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್  ಆಫರೇಷನ್ ಕಮಲ ಮಾಡಲು ಹೋಗಿ ಕೇಸು ಹಾಕಿಸಿಕೊಂಡಿದ್ದಾರೆ. ತೆಲ0ಗಾಣ ಸರಕಾರ ಈ ವಿಚಾರವನ್ನು ತೀರಾ ಗಂಭೀರ ವಾಗಿ ತೆಗೆದುಕೊಡಿದ್ದಕ್ಕೆ ಅಭಿನಂದಿಸುತ್ತೇನೆ. ನಮ್ಮ ತಂದೆಯ ಜತೆಗೆ ಇದ್ದ ಶ್ರೀಶೈಲಪ್ಪ ಅವರ  ನಿಧನವು ಅತೀವ ದು:ಖ ತಂದಿದೆ. ದೇವೇಗೌಡರು ಸಿಎಂ ಆಗಿದ್ದಾಗ ನಮ್ಮ ಪಕ್ಷದಲ್ಲೇ ಶಾಸಕರಾಗಿ ಇದ್ದರು ಎಂದರು.