Friday, 18th October 2024

ಇಂದೋರ್ ಪ್ರವೇಶಿಸಿದ ಭಾರತ ಐಕ್ಯತಾ ಯಾತ್ರೆ

ಇಂದೋರ್: ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ಐದು ದಿನಗಳ ಹಿಂದೆ ಪ್ರವೇಶಿಸಿದ ಭಾರತ ಐಕ್ಯತಾ ಯಾತ್ರೆ ಮಧ್ಯಪ್ರದೇಶದ ರಾಜಧಾನಿ ಇಂದೋರ್ ಪ್ರವೇಶಿಸಿದೆ.

ವಿಕಲಚೇತನರೊಬ್ಬರ ತ್ರಿಚಕ್ರ ವಾಹನವನ್ನು ಖುದ್ದು ರಾಹುಲ್‍ಗಾಂಧಿ ಸ್ವಲ್ಪ ದೂರ ತಳ್ಳುವ ಮೂಲಕ ಎಲ್ಲರ ಗಮನ ಸೆಳೆದರು.

ಅರೆನಗರ ಪ್ರದೇಶದಿಂದ ಮುಂದುವರೆದ ಯಾತ್ರೆಗೆ ರಾಹುಬಳಿ ರೆಡ್‍ಕಾರ್ಫೆಟ್ ಸ್ವಾಗತ ಕೋರಲಾಯಿತು. ಇಂಧೋರ್‍ನ 1400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಇತ್ತೀಚೆಗೆ ರಾಹುಲ್‍ಗಾಂಧಿ ಅವರಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದ್ದು, ಇಂಧೋ ರ್‍ನಲ್ಲಿ ಯಾತ್ರೆ ನಡೆಯುವ ವೇಳೆ ಬಾಂಬ್ ಸ್ಪೋಟಿಸುವ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಬೆದರಿಕೆ ಪತ್ರದಲ್ಲಿ 1984ರ ಸಿಕ್ಕರ ಮೇಲಿನ ದಾಳಿಯನ್ನು ಉಲ್ಲೇಖಿಸಿತ್ತು.