Monday, 25th November 2024

ಗಡಿ ಭಾಗದಲ್ಲಿನ ಫ್ಯಾಕ್ಷನಿಜಂ

ರಾಯಚೂರು: ಜಿಲ್ಲೆಯ ಗಡಿ ಭಾಗದಲ್ಲಿನ ಫ್ಯಾಕ್ಷನಿಜಂ, ರತ್ತ ಚರಿತ್ರೆಯ ಸಂಸ್ಕೃತಿ ಜಿಲ್ಲೆಯಲ್ಲಿ ಪ್ರಾರಂಭವಾಗುತ್ತಿದೆ ಎನ್ನುವ ಅನುಮಾನ ಮೂಡುವಂತೆ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದಲ್ಲಿ ನಡೆದ ಘಟನೆ ಈ ಭಾಗದ ರೈತರಿಗೆ ಹಾಗೂ ರೈತ ಸಂಘಟನೆಗಳಿಗೆ ಆತಂಕ ಕಾಡುತ್ತಿದೆ.

ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಈ ಘಟನೆಯನ್ನು ಗಂಭಿರವಾಗಿ ಪರಿಗಣಿಸಿ ನ್ಯಾಯಯುತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಂಡಿದ್ದೆ ಆದರೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಯಾವುದೆ ಭಂಗ ಉಂಟಾಗುವುದಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ರಾಜ್ಯದ ರೈತರು ಅತ್ಯಂತ ಶಾಂತಿ ಪ್ರಿಯರಾಗಿದ್ದು ಆಂಧ್ರ ಮೂಲದವರು ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕೃಷಿಯನ್ನು ಮಾಡಿಕೊಂಡಿದ್ದರು. ಯಾವುದೇ ತೊಂದರೆ ನೀಡದೆ ಸಹಕಾರ ನೀಡುತ್ತ ಬಂದಿದ್ದಾರೆ. ಮಾನ್ವಿ ತಾಲೂಕಿನ ವ್ಯಾಪ್ತಿಯಲ್ಲಿನ ನಾಗಪ್ಪ ಎನ್ನುವ ರೈತನ ಕುಟುಂಬದವರು ೨೬ ಎಕರೆಯಲ್ಲಿ ಬೆಳೆದ ಹತ್ತಿ, ಕಡಲೆ, ಸೇರಿದಂತೆ ವಿವಿಧ ಬೆಳೆಗಳನ್ನು ಅಂಧ್ರಮೂ ಲದ ವ್ಯಕ್ತಿಯೊಬ್ಬರ ಕಡೆಯವರು ರಾತ್ರೋರಾತ್ರಿ ಸಂಪೂರ್ಣ ವಾಗಿ ಜೆ.ಸಿ.ಬಿ. ಟ್ರಾಕ್ಟರ್ ಬಳಸಿ ನಾಶ ಪಡಿಸಿರುವ ಅನುಮಾನವಿದ್ದು ತಾಲೂಕಿನ ಜನರು ಬೆಚ್ಚಿ ಬಿಳುವಂತೆ ಮಾಡಿದೆ.

ನಾಗಪ ಎನ್ನುವ ರೈತ ಕಳೆದ ಹಲವು ವರ್ಷಗಳಿಂದ ತಮ್ಮ ಈ ಭೂಮಿಯಲ್ಲಿ ಕೃಷಿಯನ್ನು ಮಾಡುತ್ತ ಬಂದಿದ್ದು ಪ್ರತಿ ವರ್ಷ ದಂತೆ ಈ ವರ್ಷ ಕೂಡ ಲಕ್ಷಾಂತರ ವೆಚ್ಚದಲ್ಲಿ ೨೬ ಎಕರೆಯಲ್ಲಿ ಹತ್ತಿ,ಮತ್ತು ಕಡಲೆಯನ್ನು ಕುಟುಂಬದ ಸದಸ್ಯರೊಂದಿಗೆ ಹಗಲು ರಾತ್ರಿಯನ್ನದೇ ಭೂಮಿತಾಯಿಯನ್ನು ನಂಬಿ ದುಡಿಮೆ ಮಾಡಿದ್ದು ಈ ಬಾರಿ ಮಳೆ ಕೂಡ ಉತ್ತಮವಾಗಿದ್ದಾರಿಂದ ಬೆಳೆಗಳು ಕೂಡ ಉತ್ತಮವಾಗಿ ಬೆಳೆದಿದ್ದು ರೈತ ಕುಟುಂಬಕ್ಕೆ ಸಂತಸ ತಂದಿತ್ತು.

ಹತ್ತಿ ಬೆಳೆಗೂ ಕೂಡ ಮಾರುಕಟೆಯಲ್ಲಿ ಉತ್ತಮವಾದ ಬೆಲೆ ಇರುವುದರಿಂದ ಈ ಬಾರಿ ಜಮೀನಿನಲ್ಲಿ ಬೆಳೆದಿರುವ ಬೆಳೆಯಿಂದ ೧೦ಲಕ್ಷದವರೆಗೂ ಅದಾಯ ಬರುವ ನಂಬಿಕೆ ಯಿಂದ ಬೆಳೆಗೆ ಮಾಡಿದ ಸಾಲವನ್ನು ತಿರಿಸಬಹುದು ಎನ್ನುವ ನಂಬಿಕೆಯಿ0ದ ಬಡ ಕುಟುಂಬ ನಿತ್ಯ ಜಮೀನಿನಲ್ಲಿ ಬೆಳೆಯನ್ನು ಕಣ್ಣುತುಂಬಿ ಕೊಳ್ಳುತ್ತಿದ್ದ ರೈತ ಕುಟುಂಬ ಎಂದಿನ೦ತೆ ಶನಿವಾರ ಬೆಳಿಗ್ಗೆ ಜಮೀನಿಗೆ ಬಂದ ರೈತ ಕುಂಬಕ್ಕೆ ಜಮೀನಿನಲ್ಲಿನ ಸಂಪೂರ್ಣ ಬೆಳೆಯನ್ನು ನಾಶ ಪಡಿಸಿರುವುದು ನೋಡಿ ರೈತ ಹಾಗೂ ಕುಟುಂಬಕ್ಕೆ ದಿಕ್ಕೆ ತೊಚ್ಚದಂತೆ ಆಯಿತು. ಎದೆ ಬಡಿದು ಕೊಂಡು ಆಳುವುದನ್ನು ಕಂಡು ರೈತ ಮುಖಂಡರು ಅಗಮಿಸಿ ರೈತರಿಗೆ ಸಾಂತ್ವನ ಹೇಳುವುದು ಕಂಡು ಬಂತು.

ಘಟನೆಯ ಹಿನ್ನೆಲೆ: ೩೦ ವರ್ಷಗಳ ಕೆಳಗೆ ನಾಗಪ್ಪನ ತಂದೆ ಕನಕಪ್ಪ (ಮಾರೆಪ್ಪ) ಎನ್ನುವವರು ತಮ್ಮ ಚಿಕಿತ್ಸೆಗಾಗಿ ಕಪಗಲ್ ಸೀಮಾದ ೧೦೩ ಸರ್ವೆ ನಂಬರಿನ ೨೬ ಎಕರೆ ಜಮೀನನ್ನು ಆಂಧ್ರಮೂಲದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ ಎನ್ನು ವುದು ರೈತ ನಾಗಪ್ಪನಿಗೆ ಇಲ್ಲ ಇದುವರೆಗೂ ಯಾರು ಕೂಡ ಜಮೀನಿನ ಕುರಿತು ಜಮೀನಿನ ರೈತನನ್ನು ಸಂಪರ್ಕಿಸಿ ಮಾಲಿಕತ್ವದ ಕುರಿತು ಚರ್ಚಿಸಿಲ್ಲ ಹಾಗೂ ತಮ್ಮ ಜಮೀನು ಬೇರೆಯವರಿಗೆ ಕಂದಾಯ ಇಲಾಖೆಯಲ್ಲಿ ಮಾರ್ಪಟಗಿರುವುದು ಕೂಡ ರೈತನ ಗಮನಕ್ಕೆ ಬಾರದೆ ಇರುವುದರಿಂದ ರೈತ ಎಂದಿನAತೆ ಲಕ್ಷಾಂತರ ವೆಚ್ಚ ಮಾಡಿ ಬೆಳೆ ಬೇಳೆದಿದ್ದು ಏಕಾ ಏಕಿ ರಾತ್ರಿ ವೇಳೆಯಲ್ಲಿ ರೈತ ಬೆಳೆದ ಬೆಳೆಯನ್ನು ಹಾಳು ಮಾಡಿರುವುದು ರೈತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಆಂಧ್ರಪ್ರದೇಶದ ಶ್ರೀನಿವಾಸರೆಡ್ಡಿ (ಸತ್ಯನಾರಾಯಣ) ಎಂಬುವರ ಹೆಸರಿನಲ್ಲಿ ಈ ಭೂಮಿಯ ಪಟ್ಟಾ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಇದೆ ಎನ್ನಲಾಗುತ್ತಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಅಗತ್ಯವಾದ ಕ್ರಮ ಕೈಗೊಂಡು ನೋಂದ ರೈತ ಕುಟುಂಬಕ್ಕೆ ನ್ಯಾಯದೊರಕಿಸಿಕೋಡುತ್ತಾರೆ ಎನ್ನುವ ವಿಶ್ವಾಸ ರೈತರು ಹೊಂದಿದ್ದಾರೆ.

*

ರೈತ ಮುಖಂಡ ಅನಿತಾ ಬಸವರಾಜ ಮಂತ್ರಿ ಸೇರಿದಂತೆ ಇತರ ರೈತ ಮುಖ0ಡರು ನೊಂದ ರೈತರಿಗೆ ಸಾಂತ್ವನ ಹೇಳಿ ಹೋರಾಟ ಮಾಡುವ ಮೂಲಕ ನ್ಯಾಯ ಕೊಡಿಸುವ ಬರವಸೆ ನೀಡಿದ್ದಾರೆ.