Saturday, 14th December 2024

ದಲಿತರಲ್ಲಿ ನಿಪುಣರಿಲ್ಲ ಎಂದು ಕಡೆಗಣಿಸಲಾಗಿದೆ: ಭಗವಂತಪ್ಪ ಆರೋಪ

ಪಾವಗಡ:  ಮುಂದಿನ 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಲ್ಲಿ ಕೆಎಂ ತಿಮ್ಮರಾಯಪ್ಪ ಅವರನ್ನು ಅಭ್ಯರ್ಥಿಯಾಗಿ ಮಾಡಿದರೆ, ನಾವು ಯಾರು ಕೆಲಸ ಮಾಡಲು ಮುಂದಾಗುವುದಿಲ್ಲ ಹಿರಿಯ ವಕೀಲ ಮತ್ತು ಹಿರಿಯ ಜೆಡಿಎಸ್ ಮುಖಂಡ ಭಗವಂತಪ್ಪ ಹೇಳಿದ್ದಾರೆ.

ಪಟ್ಟಣದ ತುಮಕೂರು ರಸ್ತೆಯಲ್ಲಿ ಇರುವ ಸ್ವ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಉದ್ದೇಶಿಸಿ ಮಾತ ನಾಡಿದ ಅವರು ಕೇವಲ ಐದು ನೂರು ಜನ ಬೆಸ್ತರ ಕುಟುಂಬಗಳು ಇವೆ ಎಂಬುದಾಗಿ ನಿರ್ಲಕ್ಷ್ಯ ವಹಿಸಿ ಪಕ್ಷದಲ್ಲಿ ಹಲವು ವರ್ಷಗಳಿಂದ ನಿಷ್ಠಾವಂತವಾಗಿ ಜೆಡಿಎಸ್ ನಲ್ಲಿ ಇರುವ ನನ್ನನ್ನು ಕಡೆಗಣಿಸಿದ್ದಾರೆ ಎಂಬುದಾಗಿ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ. ಜೆಡಿಎಸ್ ಪಕ್ಷದಿಂದಲೇ ದಲಿತ ಸಮುದಾಯ ಹಿನ್ನಡೆ, ದಲಿತರಲ್ಲಿ ಉತ್ತಮ ವಿದ್ಯಾವಂತರು ಉನ್ನತ ವಿಚಾರ ವಂತರು ಆ ಪಕ್ಷಕ್ಕೆ ಹಲವಾರು ದುಡಿದಂತಹ ಹಿರಿಯ ವ್ಯಕ್ತಿಗಳು ಇದ್ದರೂ ಸಹ ಪದೇ ಪದೇ ದಲಿತರಲ್ಲಿ ಯಾರು ನಿಪುಣರಿಲ್ಲ ಎಂಬುದಾಗಿ ಹೇಳಿ ಕಡೆಗಣಿಸುತ್ತಿರುವುದು ಏಕೆ?

ನಾನು ಹಲವು ವರ್ಷಗಳಿಂದ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರಾಗಿ ಹಾಗೂ ಈ ಹಿಂದೆ ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧಿಸಿ ದಂತಹ ವೇಳೆ ಕೆ.ಎಮ್ ತಿಮ್ಮರಾಯಪರವರಿಗೆ ಆರ್ಥಿಕವಾಗಿ ಆಗಿ ಎಲ್ಲಾ ರೀತಿಯಲ್ಲಿ ಸಹಾಯ ಮಾಡಿದರೂ ಸಹ ನಿರ್ಲಕ್ಷ್ಯ ವಹಿಸುತ್ತಿರುವುದು ಬೇಸರ ತಂದಿದೆ.

ಇಷ್ಟು ವರ್ಷಗಳಿಂದ ನಿಷ್ಠಾವಂತ ಕೆಲಸವಾಗಿ ಮಾಡಿ ಹೆಗಲಿಗೆ ಹೆಗಲು ನೀಡಿಕೊಂಡು ಬಂದಿದ್ದರೂ ಸಹ ನಿರ್ಲಕ್ಷಕ್ಕೆ ಒಳ ಪಡಿಸುವ ಕೆಲಸಗಳು ಮಾಡಿದ್ದಾರೆ. ತಾಲೂಕಿನಲ್ಲಿ ನಮ್ಮ ಸಮುದಾಯದವರು ಕೇವಲ 500 ಜನ ಇದಾರೆ ಎಂಬುದಾಗಿ ಇಂತಹ ನಿರ್ಲಕ್ಷಕ್ಕೆ ಕಾರಣವೇ ?

ಕಳೆದ 340 ವರ್ಷದಿಂದ ವಕೀಲ ವೃತ್ತಿ ಮಾಡಿಕೊಂಡು ಜೊತೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿದಂತಹ ನನ್ನನ್ನು ಈ ರೀತಿ ಕಡೆಗಣಿಸಿರುವುದು ಮನಸ್ಸಿಗೆ ತುಂಬಾ ಬೇಸರ ತಂದಿದೆ ಇಲ್ಲಿವರೆಗೂ ಜೆಡಿಎಸ್ ನ ಹಿರಿಯರಾದ ದೇವೇಗೌಡರು ಹಾಗೂ ಕುಮಾರ ಸ್ವಾಮಿ ಬಳಿ ಕರೆದು ಕೊಂಡು ಹೋಗಿ ನಮ್ಮ ಸ್ಥಳೀಯ ಕಾರ್ಯಕರ್ತರು ಎಂಬುದಾಗಿ ಎಷ್ಟು ಜನರಿಗೆ ಪರಿಚಯ ಮಾಡಿಸಿ ಕೊಟ್ಟಿದ್ದಾರೆ.

ಅಷ್ಟಕ್ಕೂ ಅವರದೇ ಸಮುದಾಯದವರಿಗೆ ಎಷ್ಟರ ಜನಕ್ಕೆ ದೇವೇಗೌಡರು ಕುಮಾರಸ್ವಾಮಿ ಬಳಿ ಹೋಗಿ ನಮ್ಮ ಸಮುದಾಯ ದವರು ನಮ್ಮ ಕಾರ್ಯಕರ್ತರು ಎಂಬುದಾಗಿ ಪರಿಚಯ ಮಾಡಿಕೊಟ್ಟಿದ್ದಾರೆ ಇವರು ಯಾರೋ ಒಬ್ಬರಿಗೂ ಸಹ ಇಲ್ಲಿಯ ವರೆಗೂ ಪರಿಚಯ ಮಾಡಿಕೊಟ್ಟಿಲ್ಲ.

ಹೋದ ಎಂಎಲ್ಸಿ ಚುನಾವಣೆಯಲ್ಲಿ ಇವರದೇ ಜೆಡಿಎಸ್ ಪಕ್ಷದಾದ ಅಭ್ಯರ್ಥಿ ವ್ಯಕ್ತಿ ಸೋತಿದ್ದೇಕೆ.ಇವರುಗಳ ಒಳ ರ್ಮರ್ಮಗಳ ರಾಜಕೀಯದಿಂದ ಸೋಲು ಅನುಭವಿಸಿದ್ದಾರೆ.

ತಾಲೂಕಿನಲ್ಲಿ ಜೆಡಿಎಸ್ ಇದೆ ಎಂಬುದಾಗಿ ಎಷ್ಟು ಬಾರಿ ಇವರು ಸಭೆಗಳು ಮಾಡಲಾಗಿದೆ ಎಷ್ಟು ಹೋಬ್ಳಿಗಳಲ್ಲಿ ಇವರು ಸಭೆಗಳು ಮಾಡಲಾಗಿದೆ ಹಾಗೂ ಎಷ್ಟು ಜನ ಕಾರ್ಯಕರ್ತರು ಇವರೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಇಲ್ಲಿಯ ವರೆಗೂ ಅವರಿಗೆ ಗೊತ್ತೇ ಇಲ್ಲ.

ಪ್ರಥಮವಾಗಿ ತಿಮ್ಮರಾಯಪ್ಪನವರು ಶಾಸಕರಾದ ನಂತರ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ನಾನು ಸ್ಪರ್ಧಿಸಿದಾಗ ಸನ್ಮಾನ್ಯ ಶ್ರೀ ದೇವೇಗೌಡರು ಬಿ ಫಾರ್ಮ್ನಲ್ಲಿ ಸಹಿ ಹಾಕಿ ನನ್ನ ಹೆಸರನ್ನು ನನ್ನ ಅನುಮತಿ ಅಥವಾ ಒಪ್ಪಿಗೆ ಇಲ್ಲದೆ ಹೊಡೆದು ಹಾಕಿ ಎಸ್‌ಟಿ ನಾಗರಾಜ್ ಅವರ ಹೆಸರನ್ನು ಬರೆದು ನನ್ನನ್ನು ಪಕ್ಷದಲ್ಲಿ ಕಡೆಗಣಿಸಿದ್ದಾರೆ.

ಪಕ್ಷದಲ್ಲಿ ಹಲವು ಬಾರಿ ವಿವಿಧ ರೀತಿಯಲ್ಲಿ ಕೆಲಸಕ್ಕಾಗಿ ಹೋದಾಗಲೂ ಸಹ ನನ್ನ ಕಡೆಗಣಿಸಿರುವ ನಿದರ್ಶನಗಳು ಕಾಣಬಹುದಾಗಿದೆ. ಹಾಗಾಗಿ, ಪಕ್ಷದಲ್ಲಿ ಬೇಸತ್ತು ನಾನು ಈ ಬಾರಿ ಜೆಡಿಎಸ್ ಪಕ್ಷದ ಅಭ್ಯರ್ಥಿ ತಿಮ್ಮರಾಯಪ್ಪವಾದರೆ ನಾನು ಪಕ್ಷದಿಂದ ಹೊರಗೆ ಉಳಿಯುತ್ತೇನೆ. ಜೆಡಿಎಸ್ ನಲ್ಲಿ ಬೇರೊಬ್ಬ ವ್ಯಕ್ತಿಯನ್ನು ಗುರುತಿಸಿದರೆ ಮಾತ್ರ ನಾನು ಪಕ್ಷದಲ್ಲಿ ಕೆಲಸ ಮಾಡುವುದಾಗಿ ಪತ್ರಿಕಾಗೋಷ್ಠಿ ಮೂಲಕ ತಿಳಿಸುತ್ತಿದ್ದೇನೆ.

ಪತ್ರಿಕಾಗೋಷ್ಠಿಯಲ್ಲಿ ಎಸ್ ಹನಮಂತರಾಯಪ್ಪ ಮಾತನಾಡಿ ಜೆಡಿಎಸ್ ನ ವರಿಷ್ಠರಾದ ದೇವರ ಗೌಡ ರ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿಯವರ ಬೇನಾಮಿಯಾದ ಕೆ.ಎಂ.ತಿಮ್ಮರಾಯಪ್ಪ ಹಾಗಾಗಿ ಪಾವಗಡ ತಾಲೂಕಿಗೆ ಪದೇ ಪದೇ ಅವರಿಗೆ ಶಾಸಕರ ಅಭ್ಯರ್ಥಿ ಎಂದು ಘೋಷಿಸುತ್ತಿದ್ದಾರೆ.ತಾಲೂಕಿನ ಅತಿಹೆಚ್ಚು ದಲಿತ ಕುಟುಂಬದಲ್ಲಿ ಯಾವ ಒಬ್ಬ ವ್ಯಕ್ತಿಯ ಜೆಡಿಎಸ್ ನಲ್ಲಿ ಶಾಸಕನಾಗಿ ಸ್ಪರ್ಧಿಸಲು ಅರ್ಹತೆ ಇಲ್ಲವೇ ಎಂಬುದಾಗಿ ತಿಳಿಸಿದ್ದಾರೆ.

ಈ ಹಿಂದೆ ತಿಮ್ಮಾರಾಯಪ್ಪ ರವರು ಎಂ.ಎಲ್.ಸಿ.ಚುನಾವಣೆಯಲ್ಲಿ ಹಣದ ಅಮಿಸಿನಿಂದ ರಾಜಣ್ಣ ರವರ ಮಗ ರಾಜೇಂದ್ರ ರವರಿಗೆ ಬೆಂಬಲವನ್ನು ನೀಡಿದ್ದಾರೆ.

ಮಾಜಿ ಪ್ರಧಾನಿ ದೇವಗೌಡರಿಗೆ ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸಾವಿನ ಬಗ್ಗೆ ಮಾತನಾಡಿದಾಗ ರಾಜ್ಯದಲ್ಲಿ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ಮಾಡಿದರು ಅದರೆ ಪಾವಗಡದಲ್ಲಿ ಏಕೆ ಕೆ.ಎಂ.ತಿಮ್ಮಾರಾಯಪ್ಪ ಚಕಾರ ಎತ್ತಲಿಲ್ಲ ಏಕೆ.ಕಾಟಚಾರಕ್ಕೆ ಮಾತ್ರ ಪ್ರತಿಭಟನೆ ಕರೆಕೊಟ್ಟು ನಂತರ ಕೈ ಬಿಟ್ಟಿದ್ದಾರೆ. ಇಂತಹ ಅನೇಕ ಸಂದರ್ಭಗಳು ಇವೇ ಎಂದರು. ಮೊದಲ ಈ ಭಾಗದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬದಲಾವಣೆ ಮಾಡಿದರೆ ಮಾತ್ರ ಜೆಡಿಎಸ್ ಉಳಿಯುತ್ತದೆ ಎಂದರು.