ಡೆಟಾಲ್ನ ಹೊಸ ಟಿವಿಸಿಯಲ್ಲಿ ‘ಪ್ರತಿ ಮನೆಯ ಫಸ್ಟ್ ಏಡ್’ ಬಗ್ಗೆ ಮಾತು
ಬೆಂಗಳೂರು: ಭಾರತದ ಅತ್ಯಂತ ವಿಶ್ವಾಸಾರ್ಹ ರೋಗಾಣು ತಡೆ ಬ್ರ್ಯಾಂಡ್ ಡೆಟಾಲ್ ತನ್ನ ಬಹು ಬಳಕೆ ಡೆಟಾಲ್ ಆಂಟಿ ಸೆಪ್ಟಿಕ್ ಕ್ರೀಮ್ನ ಬಿಡುಗಡೆಯೊಂದಿಗೆ ಹೊಸ ವರ್ಗಕ್ಕೆ ಪ್ರವೇಶಿಸಿದೆ. ಇದು ಸಣ್ಣ ಗಾಯಗಳು, ಗೀರುಗಳಲ್ಲಿ ಉಂಟಾಗುವ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.
ಡೆಟಾಲ್ ಪೋರ್ಟ್ಫೋಲಿಯೋದಲ್ಲಿ ಡೆಟಾಲ್ ಆಂಟಿಸೆಪ್ಟಿಕ್ ಕ್ರೀಮ್ ಮಾತ್ರ ಭಾರತದಾದ್ಯಂತ ಔಷಧ ಅಂಗಡಿಗಳು ಮತ್ತು ಫಾರ್ಮಸಿಗಳಲ್ಲಿ ವಿಶೇಷವಾಗಿ ಲಭ್ಯವಿರುತ್ತದೆ. ಈ ‘ಮೇಡ್ ಇನ್ ಇಂಡಿಯಾ’ ಉತ್ಪನ್ನವನ್ನು ಭಾರತೀಯ ಗ್ರಾಹಕರ ಪ್ರಥಮ ಚಿಕಿತ್ಸೆ ಅಗತ್ಯವನ್ನು ಪೂರೈಸುವುದಕ್ಕಾಗಿ ವಿಶೇಷವಾಗಿ ರೂಪಿಸಲಾಗಿದೆ.
ನೀಲ್ಸನ್ನ ಗ್ರಾಹಕ ಸಂಶೋಧನೆಯಲ್ಲಿ ಕೇವಲ 56% ಗ್ರಾಹಕರು ಮಾತ್ರ ಯಾವುದೇ ರೂಪದ ಬ್ರ್ಯಾಂಡೆಡ್ ಫಸ್ಟ್ ಏಡ್ ಉತ್ಪನ್ನ ಗಳನ್ನು ಬಳಸುತ್ತಾರೆ. ಉಳಿದ 44% ಜನರು ಪ್ರಾಥಮಿಕ ಕೌಟುಂಬಿಕ ಪರಿಹಾರಗಳನ್ನು ಬಳಸುತ್ತಾರೆ ಅಥವಾ ಯಾವುದನ್ನೂ ಹಚ್ಚಿಕೊಳ್ಳುವುದನ್ನು ಬಯಸುವುದಿಲ್ಲ. ಕೆಲವರು ಮಾತ್ರ ವೈದ್ಯರ ಸಲಹೆ ಪಡೆಯುತ್ತಾರೆ*. ಈ ಆಂಟಿಸೆಪ್ಟಿಕ್ ಕ್ರೀಮ್ ಬಿಡುಗಡೆ ಮಾಡುವುದರೊಂದಿಗೆ, ಪ್ರಸ್ತುತ ಇರುವ ಆಂಟಿಸೆಪ್ಟಿಕ್ ಲಿಕ್ವಿಡ್ ಪರಂಪರೆಯನ್ನು ಇದು ಅವಲಂಬಿಸಿ ಗಾಯಗಳ ಸೆಗ್ಮೆಂಟ್ನಲ್ಲಿ ತನ್ನದೇ ವಿಶೇಷ ವಿಭಾಗವನ್ನು ರಚಿಸುವ ಉದ್ದೇಶವನ್ನು ಡೆಟಾಲ್ ಹೊಂದಿದೆ. ಈ ಒಟಿಸಿ ಉತ್ಪನ್ನವು ಆಹ್ಲಾದಕರ ಫಾರ್ಮ್ಯು ಲೇಶನ್ ಹೊಂದಿದ್ದು, ಪರಿಣಾಮಕಾರಿಯಾಗಿದೆ ಮತ್ತು ಬಳಸಲು ಸುಲಭವಾಗಿರುವ ಪ್ರಥಮ ಹಂತದ ಚಿಕಿತ್ಸೆಯಾಗಿದೆ.
ಸೋಂಕುಗಳನ್ನು ತಡೆಯುವುದಕ್ಕಾಗಿ ವಿವಿಧ ರೀತಿಯ ಸಣ್ಣ ಕಟ್ಗಳು/ಗಾಯಗಳಿಗೆ ಬಳಸಲು ಸೂಕ್ತವಾಗಿದೆ.
ಉತ್ಪನ್ನ ಬಿಡುಗಡೆಯ ಬಗ್ಗೆ ಮಾತನಾಡಿದ ರೆಕಿಟ್ನ ದಕ್ಷಿಣ ಏಷ್ಯಾ ಆರೋಗ್ಯ ಮತ್ತು ಪೌಷ್ಠಿಕಾಂಶ ವಿಭಾಗದ ಪ್ರಾದೇಶಿಕ ಮಾರ್ಕೆಟಿಂಗ್ ನಿರ್ದೇಶಕ ದಿಲೇನ್ ಗಾಂಧಿ “ಮಾರುಕಟ್ಟೆಯ ಲೀಡರ್ಗಳಾಗಿ, ಭಾರತೀಯ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಉತ್ಪನ್ನಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಡೆಟಾಲ್ ಆಂಟಿಸೆಪ್ಟಿಕ್ ಕ್ರೀಮ್ ಒಟಿಸಿ ಉತ್ಪನ್ನವಾಗಿದ್ದು, ಸಣ್ಣ ಗಾಯಗಳಿಗೆ ಬಳಕೆದಾರರು ಬಳಸಬಹುದಾಗಿದೆ ಮತ್ತು ಈ ಮೂಲಕ ತೆರೆದ ಗಾಯಗಳಿಂದ ಸೋಂಕು ಹರಡುವುದನ್ನು ತಡೆಯಬಹುದು. ಈ ಕ್ರೀಮ್ ಬಳಸಿ ಗ್ರಾಹಕರು ತಮ್ಮ ಪ್ರಥಮ ಚಿಕಿತ್ಸೆ ಅಗತ್ಯಗಳನ್ನು ಹೆಚ್ಚು ದಕ್ಷವಾಗಿ ಮತ್ತು ಪರಿಣಾಮ ಕಾರಿಯಾಗಿ ನಿರ್ವಹಿಸಿಕೊಳ್ಳಬೇಕು ಎಂದು ಬಯಸುತ್ತೇವೆ. ಈ ಮೇಡ್ ಇನ್ ಇಂಡಿಯಾ ಉತ್ಪನ್ನವು ಸರಳವಾಗಿದೆ ಮತ್ತು ಸುರಕ್ಷಿತವಾಗಿದ್ದು, ಡೆಟಾಲ್ನ ಆಂಟಿಸೆಪ್ಟಿಕ್ ಲಿಕ್ವಿಡ್ ಪರಂಪರೆಯನ್ನು ಆಧರಿಸಿ ರೂಪಿಸಲಾಗಿದೆ.”
ಡೆಟಾಲ್ ಆಂಟಿಸೆಪ್ಟಿಕ್ ಕ್ರೀಮ್ ಟಿವಿಸಿ ‘ಪ್ರತಿ ಮನೆಯ ಫಸ್ಟ್ ಏಡ್’, ಸಣ್ಣಪುಟ್ಟ ಗಾಯಗಳನ್ನು ಪರಿಹರಿಸಿಕೊಳ್ಳದ್ದರಿಂದ ಉಂಟಾಗುವ ಸೋಂಕಿನ ಬಗ್ಗೆ ಜಾಗೃತಿಯನ್ನು ಮೂಡಿಸುತ್ತದೆ.
ಡೆಟಾಲ್ ಆಂಟಿಸೆಪ್ಟಿಕ್ ಕ್ರೀಮ್ ಆಹ್ಲಾದಕರ ಫಾರ್ಮ್ಯುಲೇಶನ್ ಅನ್ನು ಹೊಂದಿದ್ದು, ಸಣ್ಣ ಪುಟ್ಟ ಗಾಯಗಳನ್ನು ನೇರವಾಗಿ ಬಳಸಬಹುದು. ಅಡುಗೆ ಮನೆ ಗಾಯಗಳು, ಶೇವಿಂಗ್ ಸಮಯದಲ್ಲಿ ಆಗುವ ಗಾಯಗಳು, ಗೀರುಗಳು, ಶೂನಿಂದಾಗಿ ಉಂಟಾಗುವ ಗಾಯಗಳು ಮತ್ತು ಸಣ್ಣಪುಟ್ಟ ಸುಟ್ಟ ಗಾಯಗಳ ಮೇಲೆ ಇದನ್ನು ಬಳಸಬಹುದು.ಇದು 99.99% ರೋಗಾಣು ರಕ್ಷಣೆ ಮಾಡುತ್ತದೆ ಮತ್ತು ಸೋಂಕನ್ನು ತಡೆಯುತ್ತದೆ. ಡೆಟಾಲ್ ಆಂಟಿಸೆಪ್ಟಿಕ್ ಕ್ರೀಮ್ನ 30 ಮಿ.ಗ್ರಾಂ ಪ್ಯಾಕ್ ಡೆಟಾಲ್ನ ಮೊತ್ತ ಮೊದಲ ಓವರ್ ದಿ ಕೌಂಟರ್ ಉತ್ಪನ್ನವಾಗಿದ್ದು, ಇದರ ಬೆಲೆ ರೂ. 60 ಆಗಿದೆ ಮತ್ತು ಭಾರತದಲ್ಲಿನ ಆನ್ಲೈನ್ ಮತ್ತು ಆಫ್ಲೈನ್ ಫಾರ್ಮಸಿಗಳಲ್ಲಿ ಲಭ್ಯವಿದೆ.