ಇಂಡಿ: ಪಟ್ಟಣದ ಮಿನಿ ವಿಧಾನಸೌಧ ಸಭಾ ಭವನಕ್ಕೆ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ಧಾನ್ನಮ್ಮನವರ್ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ದರು.
ಬೆಳೆಹಾನಿ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು. ಇಂಡಿ ತಾಲೂಕಿನ ಐರಸಂಗ,ತಡವಲಗಾ ಹಿರೇಬೇವನೂರ, ಲಚ್ಯಾಣ ಪಡನೂರ ಲಾಳಸಂಗಿ, ಮಣ್ಣೂರ ಮುಂತಾದ ಗ್ರಾಮಗಳಿಂದ ಆಗಮಿಸಿದ ರೈತರು ಪ್ರಸಕ್ತ ವರ್ಷ ತೋಗರಿ ಬೆಳೆ ವಿಷಮ ಪರಸ್ಥಿತಿಯಿಂದ ಸಂಪೂರ್ಣ ಹಾಳಾಗಿವೆ ಬೆಳೆ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದರು. ಈ ವೆಳೆ ಜಿಲ್ಲಾಧಿಕಾರಿ ಕೂಡಲೆ ನಿಮ್ಮ ಸಮಸ್ಯಗೆ ತಾರ್ಕಿಕ ಉತ್ತರ ನೀಡಿ ಸರಕಾರದಿಂದ ಪರಿಹಾರ ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಾರ್ವಜನಿಕರ ಅರ್ಜಿಗಳು ಗಮನಿಸಿದ ಅವರು ಸರ್ಕಾರಿ ಜಾಗ ಒತ್ತುವರಿಯಾಗಿಉವುದನ್ನು ತೆರವುಗೊಳಿಸಲ ಮನವಿ ಸಲ್ಲಿಸಿ ದರು. ತಾಲೂಕಿನ ಬಹುತೇಕ ರಸ್ತೆಗಳು ಕಾಣೆಯಾಗಿವೆ ಹುಡುಕಿ ಕೊಡಿ ಎಂದು ಸಾರ್ವಜಿಕರು ವಿನಂತಿಸಿದರು. ತಂದೆಯ ಹೆಸರಿನ ಬದಲು ಗಂಡನ ಹೆಸರು ಸೇರಿಸಿ ಗಂಡನ ಆದಾಯ ಪ್ರಮಾಣ ಪತ್ರ ನೀಡಿ ಮಕ್ಕಳು ನೋಡುತ್ತಿಲ್ಲ ನನಗೆ ನನ್ನ ಆಸ್ತಿ ವಾಪಸ್ ಕೊಡಿಸಿ ಎಂದು ವೃದ್ದ ಬೇಡಿಕೊಂಡರು. ಎಸ್.ಟಿ ಪ್ರಮಾಣ ಪತ್ರ ನೀಡಿ. ಹೋಲಗಳಿಗೆ ಹೋಗಲು ದಾರಿ ಕೊಡಿ ಎಂದರು. ಸಂಭ0ದಿಸಿದ ಅಧಿಕಾರಿಗಳಿಗ ಕರೇದು ಸಭೆಯಲ್ಲಿ ಸಾರ್ವಜನಿಕರ ಸಮಸ್ಯಗಳು ಕೂಡಲೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಹಿಂಗಾರಿ ಬಿತ್ತನೆ ಬಗ್ಗೆ ಕೃಷಿ ಅಧಿಕಾರಿಯಿಂದ ಮಾಹಿತಿ ಪಡೆದುಕೊಂಡರು.ಬಿತ್ತನೆಗೆ ಬೀಜ,ಗೋಬ್ಬರ ಕೊರತೆ ಇಲ್ಲ ಎಂದು ಉತ್ತರಿಸಿದರು.
ಕೆಈ ಬಿ ಹತ್ತಿರ ತೆರೇದ ಗಟಾರ ಇದೆ ಸಾರ್ವಜನಿಕರಿಗೆ ವಾಸನೆ ಬಂದು ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿದ್ದು ಕ್ರಮ ಜರುಗಿಸಲು ಸೂಚಿಸುವಂತೆ ವಾರ್ಡಜನರು ವಿನಂತಿಸಿದರು ತುರ್ತುಕ್ರಮಕೈಗೋಳ್ಳಿ ಎಂದು ಜಿಲ್ಲಾಧಿಕಾರಿ ಪುರಸಭೆ ಮುಖ್ಯಾಧಿ ಕಾರಿಗೆ ಹೇಳಿದರು. ತಾಲೂಕಾ ಆಸ್ಪತ್ರೆ ಸ್ವ÷ಚ್ಛತೆ ಗಮನ ನೀಡಿ ಎಂದು ವೈಧ್ಯಾಧಿಕಾರಿಗೆ ಸೂಚಿಸಿದರು.
ಕಂದಾಯ ಅಧಿಕಾರಿ ರಾಮಚಂದ್ರ ಗಡದೆ,ತಹಶೀಲ್ದಾರ ನಾಗಯ್ಯಾ ಹಿರೇಮಠ, ಪಿ.ಆರ್.ಈ.ಡಿ ಅಧಿಕಾರಿ ಆರ್.ಎಸ್ ಹಂಚಿನಾಳ .ಕೃಷಿ ಅಧಿಕಾರಿ ಮಾಹಾದೇವಪ್ಪ ಏವೂರ, ತಾಲೂಕಾ ಆರೋಗ್ಯಾಧಿಕಾರಿ ಡಾ. ಅರ್ಚನಾ ಕುಲಕರ್ಣಿ, ಡಾ. ಆರ್,ಟಿ ಕೊಳೆಕರ್ ಸೇರಿದಂತೆ ತಾಲೂಕಾ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.