Thursday, 12th December 2024

ಮೂರು ದಿನ ಯಕ್ಷಗಾನ, ಜಾನಪದ, ನಾಟಕಗಳ ಆಯೋಜನೆ

ತಿಪಟೂರು: ಕಲ್ಪಶ್ರೀ ಕಲಾವಿದರ ಸಂಘ ತಿಪಟೂರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ತುಮಕೂರು ಇವರ ವತಿಯಿಂದ ತಾಲ್ಲೂಕಿನಲ್ಲಿ ಡಿಸೆಂಬರ್ ತಿಂಗಳಲ್ಲಿ ಸಾಂಸ್ಕೃತಿಕ ಸೌರಭ ಎಂಬ ಮೂರು ದಿನಗಳ ಕಾಲ ಯಕ್ಷಗಾನ, ಜಾನಪದ, ನಾಟಕ ಗಳನ್ನು ಆಯೋಜನೆ ಮಾಡಲಾಗುವುದು ಎಂದು ಕಲ್ಪಶ್ರೀ ಕಲಾವಿದರ ಸಂಘ ತಿಪಟೂರು ತಾಲ್ಲೂಕು ಅದ್ಯಕ್ಷ ಟಿ.ಹೆಚ್ ಬಸವರಾಜು ತಿಳಿಸಿದರು.

ನಗರದ ಗುರುಕುಲದ ಬಸವೇಶ್ವರ ದೇವಾಲಯದಲ್ಲಿ ಆಯೋಜನೆ ಮಾಡಿದ್ದ ಪತ್ರಿಕಾ ಗೋಷ್ಟಿಯನ್ನುದ್ದೇಶಿಸಿ ಮಾತನಾಡಿ ಅವರು ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಾದ ಡಿಸೆಂಬರ್ ೦೫ರಂದು ಹಾಲ್ಕುರಿಕೆಯ ಆಂಜನೇಯ ದೇವಾಸ್ಥಾನದ ಹತ್ತಿರ ಭಜನೆ, ಪೌರಣಿಕ ರಂಗ ಗೀತೆಗಳ ಕಾರ್ಯಕ್ರಮ, ೧೧ ರಂದು ಬಾಗವಾಳದ ಮುನಿಯಪ್ಪ ಆಲದ ಮರದ ಸನ್ನಿದಿಯಲ್ಲಿ ಸಾಂಸ್ಕೃತಿಕ ಸೌರಭ, ೧೫ ರಂದು ಅರಳಗುಪ್ಪೆ ಗ್ರಾಮದ ರಂಗ ಮ೦ದಿರದಲ್ಲಿ ಶಾಲಾ ಮಕ್ಕಳಿಂದ ರತಿ ಕಲ್ಯಾಣ ಎಂಬ ಯಕ್ಷಗಾನ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಂಘದ ಖಚಾಂಚಿ ಕುಮಾರಸ್ವಾಮಿ ಮಾತನಾಡಿ ನಮ್ಮ ಸಂಘದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಕಲ್ಮನೆ ನಂಜಪ್ಪ ಅಂತಹ ಕಲಾವಿದರು ಸಂಘದಲ್ಲಿ ಸಕ್ರಿಯವಾಗಿ ತೊಡಗಿಕೊಂಡು ರಾಜ್ಯ, ಜಿಲ್ಲಾ, ತಾಲ್ಲೂಕು ಪ್ರಶಸ್ತಿಯನ್ನು ಪಡೆದಂತಹ ಹಲವಾರು ಕಲಾವಿದರು ಸಂಘದಲ್ಲಿದ್ದು ಹಲವಾರು ದಾನಿಗಳ ಸಹಯೋಗದಲ್ಲಿ ರಂಗಗೀತೆ, ಭಜನೆ, ಸೋಬಾನೆ, ಜಾನಪದ-ಜನಪದ ಗೀತೆ ಇಂತಹ ಕರ‍್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.

ಕಲಾವಿದರಾದ ರಾಮಯ್ಯ ಮಾತನಾಡಿ ಒಂದು ಪೌರಣಿಕ ನಾಟಕ ಹಾಗೂ ಯಕ್ಷಗಾನ ಕರ‍್ಯಕ್ರಮವನ್ನು ಆಯೋಜನೆ ಮಾಡಲು ಇಂದಿನ ದಿನದಲ್ಲಿ ಲಕ್ಷಾಂತರ ರೂಪಾಯಿಗಳು ಹಣ ವ್ಯಯಮಾಡಬೇಕಾಗುತ್ತದೆ. ಅದ್ದರಿಂದ ಸರ್ಕಾರ ಹಾಗೂ ಸಚಿವರು ನಮ್ಮ ತಾಲ್ಲೂಕಿನಲ್ಲಿ ಸುಸಜ್ಜಿತವಾದ ರಂಗಮ0ದಿರವನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಸುದ್ದಿಗೊಷ್ಟಿಯಲ್ಲಿ ಸಂಚಾಲಕ ಸಾರ್ಥವಳ್ಳಿ ಶಿವಕುಮಾರ್, ಉಪಾದ್ಯಕ್ಷ ಮಹಲಿಂಗಯ್ಯ, ಕಾರ್ಯದರ್ಶಿ ಜಯರಾಜು, ಸುಮಿತ್ರಾ ದೇವಿ, ರಾಮಯ್ಯ, ವಿವಿಧ ಸಂಘಟನೆಯ ಅರಳಗುಪ್ಪೆಯ ವಿಷಾಲಮ್ಮ, ಲಕ್ಷಿö್ಮದೇವಮ್ಮ, ದೊಡ್ಡಮ್ಮ, ಜಯಮ್ಮ, ಯಲ್ಲಮ್ಮ, ಚಂದ್ರಮ್ಮ, ರಾಜಣ್ಣ ಮತ್ತಿತ್ತರು ಹಾಜರಿದ್ದರು.

*

ಒಂದು ಪೌರಣಿಕ ನಾಟಕ ಹಾಗೂ ಯಕ್ಷಗಾನ ಕರ‍್ಯಕ್ರಮವನ್ನು ಆಯೋಜನೆ ಮಾಡಲು ಇಂದಿನ ದಿನದಲ್ಲಿ ಲಕ್ಷಾಂತರ ರೂಪಾಯಿಗಳು ಹಣ ವ್ಯಯಮಾಡಬೇಕಾಗುತ್ತದೆ. ಅದ್ದರಿಂದ ಸರ್ಕಾರ ಹಾಗೂ ಸಚಿವರು ನಮ್ಮ ತಾಲ್ಲೂಕಿನಲ್ಲಿ ಸುಸಜ್ಜಿತವಾದ ರಂಗಮ೦ದಿರವನ್ನು ನಿರ್ಮಾಣ ಮಾಡಬೇಕು.

ರಾಮಯ್ಯ ಕಲಾವಿದರು