Friday, 22nd November 2024

ಖ್ಯಾತಿ, ಕುಖ್ಯಾತಿಗಳ ಸುಂದರಿ ಬೆಲ್ಲಡೊನ್ನ

ಹಿಂದಿರುಗಿ ನೋಡಿದಾಗ

ಅವಳ ರಕ್ತವು ನಿಶ್ಚಲವಾಗಿದೆ; ಅವಳ ಕೀಲುಗಳು ಸೆಟೆದು ನಿಂತಿವೆ ಈ ಎರಡು ತುಟಿಗಳೂ, ಜೀವವೂ ಬೇರ್ಪಟ್ಟು ಬಹಳ ಹೊತ್ತಾಗಿದೆ ಇಳೆಯ ಪರಮ ಕುಸುಮವು, ಅಕಾಲಿಕ ಹಿಮದಾಳಿಗೆ ತುತ್ತಾಗಿದೆ -Romeo and Juliet, Act IV, Scene v  ರೋಮಿಯೊ ಜೂಲಿಯಟ್ ನಾಟಕದ ಕೊನೆಯ ದೃಶ್ಯ.

ಜೂಲಿಯೆಟ್ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಒಂದು ವಿಷ ಸೇವಿಸುತ್ತಾಳೆ. ಶೇಕ್ಸ್‌ಪಿಯರ್ ವಿಷಪ್ರಭಾವದ ವರ್ಣನೆಯನ್ನು ಮೇಲ್ಕಂಡಂತೆ ವಿವರಿಸುತ್ತಾನೆ. ಈ ವರ್ಣನೆಯನ್ನು ಓದಿದ ಹಲವರು ಇದು ಬೆಲ್ಲಡೊನ್ನ ವಿಷವೇರಿಕೆಯ ಲಕ್ಷಣ ಗಳನ್ನು ಹೋಲು ತ್ತವೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಅಟ್ರೋಪ ಬೆಲ್ಲಡೊನ್ನ ಎಂಬ ಸಸ್ಯವು ಇಂಗ್ಲಿಷ್ ಭಾಷೆಯಲ್ಲಿ ಡೆಡ್ಲಿ ನೈಟ್‌ಶೇಡ್, ಡೆವಿಲ್ಸ್ ಚೆರ್ರೀಸ್, ಸಾರ್ಸರರ್ಸ್ ಬೆರ್ರೀಸ್, ಮರ್ಡರರ್ಸ್ ಬೆರ್ರೀಸ್ ಎಂದು ಕುಪ್ರಸಿದ್ಧವಾಗಿದೆ.

ಸಂಸ್ಕೃತದಲ್ಲಿ ಸೂಚಿ ಎಂಬ ಹೆಸರಿರುವ ಈ ಸಸ್ಯಕ್ಕೆ ಕನ್ನಡದಲ್ಲಿ ಸೂಕ್ತ ಹೆಸರಿಲ್ಲ. ಸೀಮೆ ಬೆಲ್ಲಡೊನ್ನ ಎನ್ನುವುದುಂಟು. ಇದು ಸೋಲನೇಸಿ ವಂಶಕ್ಕೆ ಸೇರಿದ್ದು. ಈ ವಂಶಕ್ಕೆ ಸೇರಿದ ಇತರ ಸಸ್ಯಗಳಲ್ಲಿ ನಮಗೆ ಪರಿಚಿತ ಸಸ್ಯಗಳೆಂದರೆ ಆಲೂಗಡ್ಡೆ, ಬದನೆಕಾಯಿ, ಟೊಮೇ ಟೊ, ದಪ್ಪ ಮೆಣಸಿನಕಾಯಿ, ದತ್ತೂರಿ, ತಂಬಾಕು ಮುಂತಾದವು. ಈ ಯಾವ ಸಸ್ಯಗಳಲ್ಲೂ ಇಲ್ಲದಂತಹ ಉಗ್ರ ವಿಷವು ಈ ಬೆಲ್ಲಡೊನ್ನದಲ್ಲಿದೆ.

ಸುಮಾರು ೫-೭ ಅಡಿ ಎತ್ತರ ಬೆಳೆಯುವ, ಬಹುವಾರ್ಷಿಕ ಮೂಲಿಕಾ ಸಸ್ಯ. ಅಂಡಾಕೃತಿಯ ಮಾಸಲು ಹಸಿರು ಬಣ್ಣದ ಸುಮಾರು ೧೫-೧೮ ಸೆಂ.ಮೀ. ಉದ್ದದ ಎಲೆಗಳು. ಮಾಸಲು ನೇರಳ ಬಣ್ಣದ ಘಂಟಾಕೃತಿಯ ಹೂವು ಗಳ ಬುಡವು ಸ್ವಲ್ಪ ಹಳದಿ-ಹಸಿರು ಮಿಶ್ರವಾಗಿರುತ್ತದೆ. ಹೂಗಳಿಗೆ ಸೌಮ್ಯ ಸ್ವರೂಪದ ಗಂಧವಿದೆ. ಬೀಜಗಳಿಲ್ಲದ ೧.೫ ಸೆಂಮೀ ಗಾತ್ರದ ಚಿಕ್ಕ ಚಿಕ್ಕ ಕಾಯಿಗಳನ್ನು ಬೆರ್ರಿ ಎಂದು ಕರೆಯುವುದುಂಟು. ಹಸಿರು ಬಣ್ಣದ ಕಾಯಿಗಳು ಪೂರ್ಣ ಹಣ್ಣಾದಾಗ ಕಪ್ಪು ಬಣ್ಣ ತಳೆಯುತ್ತವೆ.

ಈ ಹಣ್ಣುಗಳು ಬಹು ಆಕರ್ಷಕವಾಗಿ ಕಾಣುವುದರ ಜತೆಯಲ್ಲಿ ಸಿಹಿಯಾಗಿರುತ್ತವೆ. ಪ್ರಾಣಿಗಳು ಹಣ್ಣುಗಳನ್ನು ತಿಂದು ಬೀಜ ಗಳನ್ನು ತಮ್ಮ ಮಲದ ಮೂಲಕ ಪ್ರಸಾರಮಾಡುತ್ತವೆ. ಇದು ಗ್ರೇಟ್ ಬ್ರಿಟನ್‌ನಿಂದ ಹಿಡಿದು ಹಿಮಾಲಯ ಪರ್ವತ ಸಾಲಿನ ಕೊನೆಯವರೆಗೆ ಸ್ವಾಭಾವಿಕವಾಗಿ ಬೆಳೆಯುತ್ತದೆ. ಕಾಕಮಾಚಿ, ಕಾಕಿಹಣ್ಣು, ಕಾಶಿಹಣ್ಣು ಮುಂತಾದ ಹೆಸರನ್ನುಳ್ಳ ಬ್ಲಾಕ್ ನೈಟ್ ಶೇಡ್ ಗಿಡವು (ಸೊಲಾನಮ್ ನೈಗ್ರಮ್) ಬೆಲ್ಲಡೊನ್ನವನ್ನು ಹೋಲುತ್ತದೆ. ಸಿಹಿ-ಹುಳಿ ಮಿಶ್ರಿತ ಹಣ್ಣನ್ನು ಮಕ್ಕಳು ತಿನ್ನುವು ದುಂಟು.

ಇದು ಬೆಲ್ಲಡೊನ್ನದ ಹಾಗೆ ಮಾರಕವಲ್ಲ. ಆದರೆ ಕೆಲವು ಸಲ, ಈ ಎರಡೂ ಗಿಡಗಳನ್ನು ನಿಖರವಾಗಿ ಗುರುತಿಸುವ ಅನುಭವ ವಿಲ್ಲದೆ, ಬೆಲ್ಲಡೊನ್ನ ಹಣ್ಣುಗಳನ್ನು ತಿಂದು, ವಿಷಲಕ್ಷಣಗಳಿಗೆ ತುತ್ತಾಗಿ ನರಳಿದ ಹಾಗೂ ಮರಣಿಸಿದ ಉದಾಹರಣೆಗಳುಂಟು.
ಬೆಲ್ಲಡೊನ್ನ ಸಸ್ಯವು ಸಸ್ಯವಿಜ್ಞಾನದ ಪಿತಾಮಹ ಎಂದು ಹೆಸರಾದ ಗ್ರೀಕ್ ಸಾಮ್ರಾಜ್ಯದ ಥಿಯೋ-ಸ್ಟಸ್ (ಕ್ರಿ.ಪೂ.230) ಕಾಲದಿಂದಲೂ ಪರಿಚಿತ ಔಷಧಿಯ ಸಸ್ಯ. ಇದಕ್ಕೆ ಕಾರ್ಲ್ ಲಿನೇಯಸ್ (1707-1778) ‘ಅಟ್ರೋಪ ಬೆಲ್ಲಡೊನ್ನ’ ಎಂದು ನಾಮಕರಣ ಮಾಡಿದ. ಈತ 1753ರಲ್ಲಿ ಸಸ್ಯಗಳನ್ನು ನಿಖರವಾಗಿ ಗುರುತಿಸಲು ದ್ವಿನಾಮಕರಣ ಪದ್ಧತಿ ಜಾರಿಗೆ ತಂದು ಸ್ಪೀಸೀಸ್ ಪ್ಲಾಂಟಾರಮ್ ಎಂಬ ಗ್ರಂಥವನ್ನು ರಚಿಸಿದವ.

ಬೆಲ್ಲಡೊನ್ನಕ್ಕೆ ಅಟ್ರೋಪ ಮತ್ತು ಬೆಲ್ಲಡೊನ್ನ ಎಂಬ ಹೆಸರನ್ನೇ ಆಯ್ಕೆ ಮಾಡಲು ಕಾರಣವಿದೆ. ಅಟ್ರೋಪ ಎಂಬ ಶಬ್ದ ಗ್ರೀಕ್ ಪುರಾಣಗಳಿಗೆ ಸೇರಿದ್ದು. ಅದರನ್ವಂiಯೊಬ್ಬ ವ್ಯಕ್ತಿಯ ಹಣೆಬರಹವನ್ನು ಮೊಯ್ರಾರ್ ಎಂಬ ಮೂವರು ದೇವತೆಯರು ನಿರ್ಧರಿಸುತ್ತಾರಂತೆ. ಇವರು ಸೋದರಿಯರು. ಮೊದಲ ಸೋದರಿ ಕ್ಲೋತೋಸ್. ಕ್ಲೋತೋಸ್ ಇವರು ಒಬ್ಬ ವ್ಯಕ್ತಿಯ ಬದುಕಿನ ನೂಲನ್ನು (ಹುಟ್ಟು) ನೇಯುತ್ತಾಳೆ. ಎರಡನೆಯ ಸೋದರಿ ಲಾಚೆಸಿಸ್; ದಾರದ ಉದ್ದ (ಜೀವಿತಾವಽ) ಎಷ್ಟಿರಬೇಕು ಎನ್ನುವು ದನ್ನು ನಿರ್ಧರಿಸುತ್ತಾಳೆ.

ಮೂರನೆಯ ಸೋದರಿ ಅಟ್ರೋಪೋಸ್; ವ್ಯಕ್ತಿಯ ದಾರವನ್ನು ಕತ್ತರಿಸುವವಳು (ಸಾವು). ಈಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹಾಗಾಗಿ ಬೆಲ್ಲಡೊನ್ನದ ವಿಷಪ್ರಭಾವದಿಂದ ಬದುಕುಳಿಯುವ ಸಾಧ್ಯತೆ ಇಲ್ಲವೇ ಇಲ್ಲ ಎಂಬರ್ಥದಲ್ಲಿ ಲಿನೇ ಯಸ್, ಅಟ್ರೋಪ ಎಂಬ ಹೆಸರನ್ನು ಯ್ಕೆ ಮಾಡಿದ. ಇನ್ನು ಬೆಲ್ಲಡೊನ್ನ ಎಂಬ ಶಬ್ದ. ಇದು ಇಟಾಲಿಯನ್ ಮೂಲದ ಶಬ್ದ. ಪರಮ ಸುಂದರಿ ಎಂದರ್ಥ. ಇಟಾಲಿಯನ್ ಮಹಿಳೆಯರು ಬೆಲ್ಲಡೊನ್ನ ಹಣ್ಣುಗಳಿಂದ ಒಂದು ಟಾನಿಕ್ ತಯಾರಿಸಿ, ಅದನ್ನು ತಮ್ಮ ಮೈಗೆ ಲೇಪಿಸಿಕೊಳ್ಳುತ್ತಿದ್ದರಂತೆ.

ಆಗ ಚರ್ಮದ ಬಣ್ಣವು, ನಾಚಿಕೆಯಿಂದ ಮುಖ ಕೆಂಪಾಗುವಂತೆ, ಕೆಂಪೇರುತ್ತಿತ್ತಂತೆ. ಅವರ ದೃಷ್ಟಿಯಲ್ಲಿ ಇದು ಸೌಂದರ್ಯದ ಒಂದು ಲಕ್ಷಣ. ಪುನರುತ್ಥಾನದ (ರಿನೇಸಾನ್ಸ್) ಅವಽಯಲ್ಲಿ ವೆನಿಸ್ ನಗರದ ಮಹಿಳೆಯರು ಬೆಲ್ಲಡೊನ್ನ ಹಣ್ಣಿನ ರಸದಿಂದ ಕಣ್ಣಿಗೆ ಹಾಕುವ ದು ದ್ರಾವಣ ಸಿದ್ಧಪಡಿಸಿದರು. ಇದನ್ನು ಕಣ್ಣಿಗೆ ಹಾಕಿಕೊಂಡಾಗ, ಕಣ್ಣಿನ ಪಾಪೆ ವಿಸ್ತಾರವಾಗುತ್ತಿತ್ತು. ಈಜಿಪ್ಟಿನ
ರಾಣಿಯಾಗಿದ್ದ ಕ್ಲಿಯೋಪಾತ್ರಳು ತನ್ನ ಸೌಂದರ್ಯ ಹೆಚ್ಚಿಸಿಕೊಳ್ಳಲು ಕತ್ತೆಯ ಹಾಲಿನಲ್ಲಿ ಸ್ನಾನ ಮಾಡುವುದರ ಜತೆಗೆ ಬೆಲ್ಲಡೊನ್ನ ಹಣ್ಣಿನ ರಸವನ್ನು ಕಣ್ಣಿಗೆ ಹಾಕಿಕೊಳ್ಳುತ್ತಿದ್ದಳಂತೆ.

ಬೆಲ್ಲಡೊನ್ನದಲ್ಲಿರುವ ಅಟ್ರೋಪಿನ್ ಎಂಬ ರಾಸಾಯನಿಕವು ಕಣ್ಣಿನ ಪಾಪೆಯನ್ನು ವಿಸ್ತರಿಸುತ್ತಿತ್ತು. ವಿಸ್ತಾರವಾಗಿರುವ ಕಣ್ಣುಪಾಪೆಗಳು ಹೆಣ್ಣುಮಕ್ಕಳ ಸೌಂದರ್ಯ ಹೆಚ್ಚಿಸುತ್ತದೆ ಎನ್ನುವ ನಂಬಿಕೆ ಅಂದಿತ್ತು. ಆದರೆ ಬೆಲ್ಲಡೊನ್ನ ರಸವನ್ನು ಕಣ್ಣಿಗೆ ಹಾಕುವುದರಿಂದ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆಯೆಂಬುದು ಅಂದಿನವರಿಗೆ ತಿಳಿದಿರಲಿಲ್ಲ.

ಇತಿಹಾಸದಾದ್ಯಂತ ಪುರಾಣ, ನಾಟಿವೈದ್ಯ ಮತ್ತು ಮಾಟದಲ್ಲಿ ಬೆಲ್ಲಡೊನ್ನ ಬಳಕೆಯಾಗುತ್ತ ಬಂದಿದೆ. ಗ್ರೀಕರು ಮದಿರೆ ಮತ್ತು ಆನಂದದ ಅಽದೇವತೆಯಾದ ದಯೋನಿಸಸ್ ಆರಾಧನೆಯಲ್ಲಿ ತೊಡಗುತ್ತಿದ್ದ ಭಕ್ತಗಣದ ಪಾನೀಯದಲ್ಲಿ ಬೆಲ್ಲಡೊನ್ನವನ್ನು ಬೆರೆಸುತ್ತಿದ್ದುದರಿಂದ ಅವರು ಸುಲುಭವಾಗಿ ಭ್ರಮಾಲೋಕಕ್ಕೆ ಜಾರುತ್ತಿದ್ದರು. ಹೋಮರ್ ಬರೆದ ಮಹಾಕಾವ್ಯ ಒಡಿಸ್ಸಿಯಲ್ಲಿ ಒಡಿಸ್ಯೂಸ್‌ನ (ಯೂಲಿಸೆಸ್) ಜೊತೆಗಾರರನ್ನು ಸಿರ್ಸೆ ಎನ್ನುವ ಮಾಟಗಾತಿಯು ಹಂದಿಗಳನ್ನಾಗಿ ಬದಲಾಯಿಸುವ ಪ್ರಸಂಗ ಬರುತ್ತದೆ.

ಬಹುಶಃ ಈ ಪ್ರಕರಣವೂ ಸಹ ಬೆಲ್ಲಡೊನ್ನ ಮಿಶ್ರಿತ ಪಾನೀಯ ಸೇವನೆಯ ಪ್ರಭಾವದಲ್ಲಿ ಈ ಭ್ರಮೆಯು ತಲೆದೋರಿರಬಹುದು ಎಂದು ಊಹಿಸಲಾಗಿದೆ. ನಾನಾ ರೀತಿಯ ಭ್ರಮೆಗಳಲ್ಲಿ ‘ಹಾರುವ ಭ್ರಮೆ’ಯು ಮುಖ್ಯವಾದದ್ದು. ವ್ಯಕ್ತಿಯು ಬಿದ್ದಲ್ಲಿಯೇ ಬಿದ್ದಿದ್ದರೂ, ತಾನು ವಾಯುವೇಗದಲ್ಲಿ ಜಗತ್ತಿನ ಯಾವ ಮೂಲೆಗಾದರೂ ಹಾರಿಹೋಗಬಲ್ಲೆ ಎನ್ನುವ ವಿಶ್ವಾಸವು ಮೂಡುತ್ತದೆ.
ವಾಸ್ತವದಲ್ಲಿ ಅವನಿಗೆ ಹಾರಿಹೋಗುತ್ತಿರುವ ಅನುಭವವಾಗುತ್ತದೆ. ಮಧ್ಯಯುಗದ ಯೂರೋಪಿಯನ್ ದೇಶದ ಮಾಟಗಾತಿ ಯರು ಬೆಲ್ಲಡೊನ್ನ, ಹೆಮ್ಲಾಕ್, ವೂಲ್ಸ್‌ಬೇನ್, ಮ್ಯಾಂಡ್ರೇಕ್, ಅಪೀಮು ಮುಂತಾದ ಸಸ್ಯಗಳ ಸಾರವನ್ನು ಬಳಸಿ ವಿಶೇಷ ಲೇಪನವನ್ನು ತಯಾರಿಸುತ್ತಿದ್ದರು. ಇದನ್ನು ಇಡೀ ಮೈಗೆ ಹಚ್ಚಿಕೊಳ್ಳುತ್ತಿದ್ದರು.

ವಿಶೇಷವಾಗಿ ಭಗ ಮತ್ತು ಯೋನಿನಾಳದ ಒಳಗೆ ಲೇಪಿಸಿಕೊಳ್ಳುತ್ತಿದ್ದರು. ಭಗ ಮತ್ತು ಯೋನಿನಾಳದ ಮೂಲಕ ಈ ಲೇಪನ ದಲ್ಲಿದ್ದ ರಾಸಾಯನಿಕಗಳೆಲ್ಲ ಶರೀರವನ್ನು ತ್ವರಿತವಾಗಿ ಸೇರಿ ಅವರಿಗೆ ಹಾರುವ ಅನುಭವವನ್ನು ನೀಡುತ್ತಿತ್ತು. (ನೋಡಿ: ಮಾಟಗಾತಿಯರ ಲೋಕದಲ್ಲೊಂದು ವಿಹಾರ: ವಿಶ್ವವಾಣಿ 09.11.2022: ಪುಟ 6) ಬೆಲ್ಲಡೊನ್ನದಲ್ಲಿ ಟ್ರೋಪೇನ್ ಎಂಬ ವರ್ಗಕ್ಕೆ ಸೇರಿದ ಆಲ್ಕಲಾಯ್ಡ್ ಎಂಬ ರಾಸಾಯನಿಕಗಳಿರುತ್ತವೆ. ಇವುಗಳಲ್ಲಿ ಅಟ್ರೋಪಿನ್, ಹೊಯಾಸಮಿನ್, ಸ್ಕೊಪಾಲಮಿನ್ ಮುಖ್ಯವಾದವು. ಈ ರಾಸಾಯನಿಕಗಳು ನೇರವಾಗಿ ಮನುಷ್ಯನ ಮಿದುಳಿನ ಮೇಲೆ ದುಷ್ಪ್ರಭಾವ ಬೀರುತ್ತವೆ.

ಕಣ್ಣುಗಳ ಪಾಪೆ ವಿಸ್ತರಿಸುವುದರ ಜತೆಗೆ ಹೃದಯ ಮಿಡಿತದ ವೇಗ ತೀವ್ರಗೊಳಿಸುತ್ತವೆ. ನೆಟ್ಟಗೆ ನಿಲ್ಲಲು ಆಗುವುದಿಲ್ಲ. ತೀವ್ರ
ತಲೆನೋವು. ಬಾಯಿ ಒಣಗುತ್ತದೆ. ಮಾತು ತೊದಲುತ್ತದೆ. ವಾಂತಿಯಾಗುತ್ತದೆ. ಮೂತ್ರವು ಕಟ್ಟಿಕೊಳ್ಳುತ್ತದೆ. ಬೆಳಕನ್ನು ನೋಡ ಲಾಗದೆ, ಸನ್ನಿಯುಂಟಾಗಿ (ಡೆಲಿರಿಯಂ) ನಾನಾ ಭ್ರಮೆಗಳು ಕಂಡುಬರುತ್ತವೆ. ಸ್ಮರಣ ಶಕ್ತಿಯು ಏರುಪೇರಾಗುತ್ತದೆ. ತುಂಬಾ ಗೊಂದಲವಾಗುತ್ತದೆ. ಕೊನೆಗೆ ಸೆಳವು ಆರಂಭವಾಗಿ ವ್ಯಕ್ತಿಯು ಕೋಮಾಕ್ಕೆ ಹೋಗಿ ಸಾವಿನಲ್ಲಿ ಪರ್ಯಾವಸಾನ ವಾಗುತ್ತದೆ. ಈ ಭ್ರಮೆಯು ಕೆಲವು ಸಲ ಹಲವು ದಿನದವರೆಗೆ ಮುಂದುವರಿಯಬಹುದು.

ಸಾವು ಸುಲುಭವಾಗಿ ಬರುವುದಿಲ್ಲ. ಬೆಲ್ಲಡೊನ್ನಕ್ಕೆ ಬಲಿಯಾದವನು ಚಿತ್ರಹಿಂಸೆಗೆ ತುತ್ತಾಗುವ ಹಾಗೆ, ಅವನ ಯೋಗಕ್ಷೇಮ ವನ್ನು ವಹಿಸುವವರ ಬಾಳು ಸಹ ನರಕಸದೃಶವಾಗುತ್ತದೆ. ಇತಿಹಾಸದಲ್ಲಿ ಬೆಲ್ಲಡೊನ್ನವನ್ನು ಬಳಸಿ ಹತ್ಯೆ ಮಾಡಿದ ಹಾಗೂ ಯುದ್ಧಗಳಲ್ಲಿ ಇದನ್ನು ಜೈವಿಕಾಸವಾಗಿ ಬಳಸಿದ ಉದಾಹರಣೆಗಳೂ ದೊರೆಯುತ್ತವೆ. ರೋಮನ್ನರು ಯಾವಾಗಲು ಶತ್ರುಗಳ ಆಹಾರ, ಪಾನೀಯಗಳಲ್ಲಿ ಬೆಲ್ಲಡೊನ್ನವನ್ನು ಬೆರೆಸಿ, ಶತ್ರುಸೈನಿಕರನ್ನು ದುರ್ಬಲಗೊಳಿಸಿ, ಅವರನ್ನು ಸೋಲಿಸುತ್ತಿದ್ದರಂತೆ.

ರೋಮನ್ನರು ಬೆಲ್ಲಡೊನ್ನ ಸಾರವನ್ನು ತಮ್ಮ ಬಾಣಗಳಿಗೆ ಲೇಪಿಸಿ, ಅದನ್ನು ಶತ್ರುಗಳ ಮೇಲೆ ಪ್ರಯೋಗಿಸುತ್ತಿದ್ದರಂತೆ. ಮಾನವನ ಇತಿಹಾಸದಾದ್ಯಂತ, ಬೆಲ್ಲಡೊನ್ನವನ್ನು ಬಳಸಿ ರಾಜ ಮಹಾರಾಜರನ್ನು, ಚಕ್ರವರ್ತಿಗಳನ್ನು ಹಾಗೂ ಸಾಮ್ರಾಟ ರನ್ನು ಕೊಂದ ಉದಾಹರಣೆಗಳು ದೊರೆಯುತ್ತವೆ. ರೋಮ್ ಚಕ್ರವರ್ತಿ ಟೈಬೀರಿಯಸ್ ಕ್ಲಾಡಿಯಸ್ (ಕ್ರಿ.ಪೂ.10 ಕ್ರಿ.ಶ. 54).
ಈತನ ಕಿರಿಯ ಹೆಂಡತಿ ಅಗ್ರಿಪ್ಪಿನ ದಿ ಯಂಗರ್ (ಕ್ರಿ.ಶ.15 ಕ್ರಿ.ಶ. 59) ವಿಷಪ್ರಯೋಗದ ಬಗ್ಗೆ ಪರಿಣತಿಯನ್ನು ಪಡೆದಿದ್ದ ಲೋಕಸ್ಟ ಎನ್ನುವ ಮಹಿಳೆಯ ಸಲಹೆಯ ಮೇರೆಗೆ ಅಗ್ರಿಪ್ಪಿನ ಬೆಲ್ಲಡೊನ್ನವನ್ನು ಪ್ರಯೋಗಿಸಿ ಕ್ಲಾಡಿಯಸ್ ನನ್ನು ಕೊಲ್ಲುತ್ತಾಳೆ.

ಹಾಗೆಯೇ ರೋಮ್ ಚಕ್ರವರ್ತಿ ಸೀಸರ್ ಅಗಸ್ಟಸ್‌ನನ್ನು (ಕ್ರಿ.ಪೂ.63 ಕ್ರಿ.ಶ. 14) ಅವನ ಹೆಂಡತಿ ಲಿವಿಯ ಡ್ರುಸಿಲ್ಲ (ಕ್ರಿ.ಪೂ.59 ಕ್ರಿ.ಶ. 29) ಬೆಲ್ಲಡೊನ್ನವನ್ನು ಪ್ರಯೋಗಿಸಿ ಕೊಲ್ಲುತ್ತಾಳೆ. ಸ್ಕಾಟ್ಲಂಡಿನ ಅರಸ ಮೊದಲನೆಯ ಡಂಕನ್ (ಕ್ರಿ.ಶ.1001 ಕ್ರಿ.ಶ.1040). ಈತನ ಸೈನ್ಯಾಧಿಪತಿಗಳಲ್ಲಿ ಮ್ಯಾಕ್‌ಬೆತ್ (1005-1057) ಒಬ್ಬ. ಇಂಗ್ಲಂಡಿನ ಅರಸ ಹೆರಾಲ್ಡ್ ಹೇ-ಟ್ ( -1040) ಸ್ಕಾಟ್ಲಂಡಿನ ಮೇಲೆ ದಂಡೆತ್ತಿ ಬರುತ್ತಾನೆ.

ಆಗ ಮ್ಯಾಕ್‌ಬೆತ್, ಇಂಗ್ಲಂಡ್ ಸೇನೆಯು ಸೇವಿಸುವ ಮದ್ಯಪಾನದಲ್ಲಿ ಬೆಲ್ಲಡೊನ್ನ ಸಾರವನ್ನು ಬೆರೆಸುತ್ತಾನೆ. ಅದನ್ನು ಸೇವಿಸಿದ
ಇಂಗ್ಲಂಡಿನ ಸೈನಿಕರು ನೆಟ್ಟಗೆ ನೆಲದ ಮೇಲೆ ನಿಲ್ಲಲು ಅಶಕ್ತರಾಗುತ್ತಾರೆ. ಹಾಗಾಗಿ ಇಂಗ್ಲಂಡ್ ಸೇನೆಯು ಹಿಂದಕ್ಕೆ ಸರಿಯ ಬೇಕಾಗುತ್ತದೆ.

ಭಾರತವನ್ನೂ ಒಳಗೊಂಡಂತೆ ಜಗತ್ತಿನ ಎಲ್ಲ ದೇಶಗಳ ನಾಟಿವೈದ್ಯದಲ್ಲಿ ಸ್ಥಾನ ಪಡೆದಿದ್ದ ಬೆಲ್ಲಡೊನ್ನವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದವರಲ್ಲಿ ಜರ್ಮನ್ ರಸಾಯನಶಾಸಜ್ಞ ಫರ್ಡಿನಂಡ್ ರುಂಗೆ (1795-1867) ಹೆನ್ರೀಚ್ ಮೈನ್ (1799-1864) ಮುಖ್ಯರಾದವರು. ಇಂದು ಕೀಟನಾಶಕಗಳನ್ನು ಸೇವಿಸಿ, ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಹೊರಟವರ ಜೀವವನ್ನುಳಿಸುವ ಅಟ್ರೋಪಿನ್ ಉಳಿಸುತ್ತಿದೆ. ಬಾಯಿ-ಗಂಟಲ ಸ್ರಾವಗಳನ್ನು ಕಡಿಮೆಗೊಳಿಸಿ ಶಸ್ತ್ರಚಿಕಿತ್ಸೆಗಳನ್ನು ಸರಾಗ ಗೊಳಿಸಿದೆ.

ಸ್ಕೋಪಾಲಮಿನ್ ಚಲನಾಬೇನೆಯನ್ನು (ಮೋಶನ್ ಸಿಕ್ನೆಸ್) ತಡೆಗಟ್ಟುತ್ತದೆ. ಹೊಯಾಸಮಿನ್ ಕರುಳಿನ ಕೆರಳಿಕೆಯ ಲಕ್ಷಣಾ ವಳಿಯನ್ನು (ಇರಿಟಬಲ್ ಬಾವೆಲ್ ಸಿಂಡ್ರೋಮ್) ನಿಯಂತ್ರಿಸಲು ನೆರವಾಗುತ್ತಿದೆ. ಕೊಲೆಯನ್ನು ಮಾಡಲು ಬಳಕೆ ಯಾಗುತ್ತಿದ್ದ ಬೆಲ್ಲಡೊನ್ನ ಇಂದು ಅದೆಷ್ಟು ಜೀವಗಳನ್ನು ಉಳಿಸುತ್ತಿದೆ ಎನ್ನುವುದು ನಿಜಕ್ಕೂ ಆಶ್ಚರ್ಯಜನಕ ವಿಷಯವಾಗಿದೆ.