Saturday, 26th October 2024

ಕುಮಾರಸ್ವಾಮಿ ಜಿಲ್ಲಾ ಪ್ರವಾಸ ಜೆಡಿಎಸ್ ಪಕ್ಷಕ್ಕೆ ಆನೆಬಲ ತುಂಬಿದೆ : ಕೆ.ಪಿ.ಬಚ್ಚೇಗೌಡ

ಚಿಕ್ಕಬಳ್ಳಾಪುರ : ಪಂಚರತ್ನ ರಥಯಾತ್ರೆಯ ಜಿಲ್ಲಾ ಪ್ರವಾಸದ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೆಡಿಎಸ್ ಪಕ್ಷಕ್ಕೆ ಆನೆಬಲ ತಂದುಕೊಟ್ಟಿದ್ದಾರೆ.ಪಕ್ಷದ ಕಾರ್ಯಕರ್ತರು ಯಾವ ಆಮಿಷಗಳಿಗೂ ಒಳಗಾಗದೆ ಪಕ್ಷನಿಷ್ಟೆ ಮೆರೆಯುವ ಮಂದಿ ಎಂಬುದನ್ನು ಈ ವೇಳೆ ಸಾಬೀತು ಪಡಿಸಿದ್ದಾರೆ.ಅವರ ನಂಬಿಕೆ ಉಳಿಸಿಕೊಳ್ಳುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ತಿಳಿಸಿದರು.

ತಾಲೂಕಿನ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಂಚರತ್ನ ಯೋಜನೆಗಳ ಪ್ರಚಾರವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮದು ಭರವಸೆ ನೀಡಿ ಓಡಿಹೋಗುವ ಪಕ್ಷವಲ್ಲ, ಬದಲಿಗೆ ಜನತೆಯ ಕಷ್ಟ ಸಂಕಷ್ಟ ಗಳಿಗೆ ಮಿಡಿಯುವ, ಪರಿಹಾರ ಕಲ್ಪಿಸುವ , ಅವರ ಕಣ್ಣೀರು ಒರೆಸುವ ಪಕ್ಷವಾಗಿದೆ. ರಾಷ್ಟಿçÃಯ ಪಕ್ಷಗಳನ್ನು ನಂಬಿ ರಾಜ್ಯದ ಜನತೆ ಟೋಪಿ ಹಾಕಿಸಿ ಕೊಂಡಿದ್ದು ಸಾಕು. ದಕ್ಷಿಣ ಭಾರತದಲ್ಲಿ ಎಲ್ಲಾ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷವನ್ನು ಜನತೆ ನಂಬಿ ಅಧಿಕಾರ ನೀಡಿದ್ದಾರೆ.

ತನ್ಮೂಲಕ ಕೇಂದ್ರದಿ0ದ ತಮ್ಮತಮ್ಮ ರಾಜ್ಯಗಳಿಗೆ ಬೇಕಾದ ಅನುಕೂಲಗಳನ್ನು ಅಧಿಕಾರಯುತವಾಗಿ ಕೇಳಿ ಪಡೆದಿದ್ದಾರೆ, ಪಡೆಯುತ್ತಿದ್ದಾರೆ ಕೂಡ.ಇದನ್ನು ಮನ ಗಂಡಿರುವ ರಾಜ್ಯದ ಜನತೆ ಈ ಬಾರಿ ಜಾತ್ಯಾತೀತ ಜನತಾ ಪಕ್ಷದ ಸರಕಾರವನ್ನು ಅಧಿಕಾರಕ್ಕೆ ತರಲು ಮನಸ್ಸು ಮಾಡಿರುವುದು ಯಾತ್ರೆಯ ವೇಳೆ ವರಿಷ್ಟರ ಅರಿವಿಗೆ ಬಂದಿದೆ. ಇದಕ್ಕೆ ಪೂರಕವಾಗಿ ಕ್ಷೇತ್ರದಲ್ಲಿ ಬಲ ತುಂಬಲು ಇಂದಿನಿAದ ಚುನಾವಣೆ ಮುಗಿಯುವವರೆಗೂ ಎಲ್‌ಇಡಿ ಪರೆದೆಯುಳ್ಳ ಪ್ರಚಾರ ವಾಹನ ಸಂಚರಿಸಿ ಹಳ್ಳಿ ಹಳ್ಳಿಯ ಜನಸಾಮಾನ್ಯರಿಗೆ ಪಂಚರತ್ನ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಗೊಳಿಸುವ ಕೆಲಸ ಮಾಡಲಿದೆ ಎಂದರು.

ಜೆಡಿಎಸ್ ಕಾರ್ಯಕರ್ತರ ಪಕ್ಷ ಎಂಬುದು ವಿರೋಧ ಪಕ್ಷಗಳಿಗೆ ಮನವರಿಕೆಯಾಗಿದೆ.ಪಂಚರತ್ನ ರಥಯಾತ್ರೆ ಜಿಲ್ಲೆಯಲ್ಲಿ ಸಂಚರಿಸಿದ ಸಂದರ್ಭದಲ್ಲಿ ನಾವು ಹಾಕಿಕೊಂಡ ವೇಳಾಪಟ್ಟಿಯಂತೆ ನಿಗದಿ ಪಡಿಸಿದ ಸ್ಥಳಗಳಿಗೆ ಹೋಗದೆ ತಡವಾಗಿ ಹೋದರೂ, ಮಧ್ಯರಾತ್ರಿ ಆದರೂ ಜನತೆ ಸಾವಿರಾರು ಸಂಖ್ಯೆಯಲ್ಲಿ ನಮ್ಮೊಟ್ಟಿಗೆ ಸಹಕರಿಸಿದ್ದು ನೋಡಿದರೆ ಕಣ್ಣಾಲಿಗಳು ತುಂಬಿ ಬರುತ್ತವೆ. ಬಿಜೆಪಿ, ಕಾಂಗ್ರೆಸ್ ಇಂತಹ ಸಮಾವೇಶಗಳನ್ನು ಮಾಡಿ, ಕೋಟ್ಯಾಂತರ ಹಣ ಖರ್ಚು ಮಾಡಿದರೂ ಜನತೆ ಸ್ಪಂಧಿಸಿಲ್ಲ ಎಂಬುದು ಅವರಿಗೆ ಗೊತ್ತಿದೆ.ಜೆಡಿಎಸ್ ಪಕ್ಷದ ಬಗ್ಗೆ ಮೂಗು ಮುರಿಯುತ್ತಿದ್ದವರು ಅಭೂತಪೂರ್ವ ಜನಬೆಂಬಲ ನೋಡಿ ಆಶ್ಚರ್ಯಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ ಮಾತನಾಡಿ ರಾಜ್ಯದ ಹಿತಾಸಕ್ತಿ ಕಾಪಾಡುವ ಶಕ್ತಿ ಪ್ರಾದೇಶಿಕ ಪಕ್ಷಗಳಿಗೆ ಮಾತ್ರ ಇದೆ ಎಂಬುದು ಭಾರತದ ರಾಜಕಾರಣ ನೋಡಿದಾಗ ಅರಿವಿಗೆ ಬಂದಿದೆ.ಚಿಕ್ಕಬಳ್ಳಾಪುರ ಜಿಲ್ಲೆಯು ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದೆ. ಮುಂಬರುವ ೨೦೨೩ರ ಚುನಾವಣೆಯಲ್ಲಿ ಜನತೆಯ ಆಶೀರ್ವಾದದಿಂದ ಜೆಡಿಎಸ್ ತನ್ನ ಮಿಷನ್ ೧೨೩ ಗುರಿಯನ್ನು ಮುಟ್ಟಿ ಅಧಿಕಾರಕ್ಕೆ ಬರುವುದು ಖಚಿತವಾಗಿದೆ.ಜಿಲ್ಲೆಯ ೫ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಜನತೆ ಆಶೀರ್ವಾದ ಮಾಡಲಿ ದ್ದಾರೆ.

ಪಂಚರತ್ನ ರಥಯಾತ್ರೆಯಲ್ಲಿ ಕಂಡು ಬಂದ ಜನಬೆಂಬಲವೇ ಇದಕ್ಕೆ ಸಾಕ್ಷಿಯಾಗಿದೆ. ಇಲ್ಲಿಂದ ಮುಂದೆ ಪಕ್ಷದ ಮುಖಂಡರು ಕಾರ್ಯಕರ್ತರು ಮನೆಮನೆಗೆ ತೆರಳಿ ಪಂಚರತ್ನ ಯೋಜನೆಗಳಿಂದಾಗುವ ಅನುಕೂಲಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಿದ್ದಾರೆ.ಮೇಲಾಗಿ ರಾಜ್ಯದ ೨೨೪ ವಿಧಾನ ಸಭಾ ಕ್ಷೇತ್ರಗಳಲ್ಲಿ ಕೂಡ ಪ್ರಚಾರ ವಾಹನಗಳು ಸಂಚರಿಸಲಿವೆ. ಇದರ ಮೂಲಕ ಜನತೆಗೆ ಕುಮಾರಸ್ವಾಮಿ ಅವರ ದೂರದೃಷ್ಟಿಯ ಯೋಜನೆಗಳ ಪರಿಚಯ ಮಾಡಿಕೊಡುವುದು ಪ್ರಚಾರ ವಾಹನದ ಕೆಲಸವಾಗಿದೆ.ನಮಗೆ ನಂಬಿಕೆಯಿದೆ ಜೆಡಿಎಸ್ ಅಧಿಕಾರಕ್ಕೆ ಬಂದೇ ಬರಲಿದೆ.ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭರವಸೆಯ ಮಾತುಗಳನ್ನಾಡಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್,ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ತಾಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು,ವೀಣಾ ರಾಮು,ಅಣ್ಣಮ್ಮ,ಶ್ರೀನಿವಾಸ್,ಮತ್ತಿತರರು ಇದ್ದರು.