ಪರೇಶ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಂಗಾಳಿ ಗರ ವಿರುದ್ಧ ಭಾವನೆಗಳನ್ನು ಪ್ರಚೋದಿ ಸುವಂತಿವೆ ಎಂದು ಸಲೀಂ ಟಾರಟೊಲಾ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಾರ್ವಜನಿಕವಾಗಿ ಇಂತಹ ಹೇಳಿಕೆ ದೇಶಾದ್ಯಂತ ಬಂಗಾಳ ಸಮುದಾಯ ಮತ್ತಿತರ ಸಮುದಾಯಗಳ ನಡುವಿನ ಸೌಹಾರ್ದತೆ ಯನ್ನು ಹಾಳು ಮಾಡುತ್ತವೆ ಎಂದು ಸಲೀಂ ಹೇಳಿದ್ದಾರೆ. ಇತ್ತೀಚಿಗೆ ಗುಜರಾತ್ ಚುನಾವಣಾ ಪ್ರಚಾರದ ವೇಳೆ ಪರೇಶ್ ರಾವಲ್ ನೀಡಿದ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ.
ಗ್ಯಾಸ್ ಸಿಲಿಂಡರ್ ದುಬಾರಿಯಾಗಿದೆ ಆದರೆ, ಅದರ ಬೆಲೆ ಕಡಿಮೆಯಾಗಬಹುದು. ಜನರಿಗೆ ಉದ್ಯೋಗವೂ ಸಿಗಬಹುದು ಆದರೆ, ರೋಹಿಂಗ್ಯಾ ವಲಸೆಗಾರರು ಮತ್ತು ಬಾಂಗ್ಲಾದೇಶಿಗರು ದೆಹಲಿಯಂತೆ ನಿಮ್ಮ ಸುತ್ತ ವಾಸಿಸಲು ಆರಂಭಿಸಿದರೆ ಏನಾಗಲಿದೆ? ಗ್ಯಾಸ್ ಸಿಲಿಂಡರ್ ನಿಂದ ಏನು ಮಾಡ್ತಿರಾ? ಬಂಗಾಳಿಗರಿಗೆ ಮೀನು ಬೇಯಿಸಿ ಕೊಡುತ್ತೀರಾ ಎಂದು ವಿವಾದಾತಾತ್ಮಕ ಹೇಳಿಕೆ ನೀಡಿದ್ದರು.