ತುಮಕೂರು: ನಗರದ ಮೆಳೆಕೋಟೆಯ ಅಭಯಪುರಿ ಪುಣ್ಯಕ್ಷೇತ್ರದಲ್ಲಿರುವ ಶ್ರೀ ಅಭಯಾಂಜನೇಯ ಸ್ವಾಮಿ ದೇವಸ್ಥಾನ ಭಾನುವಾರ(ಡಿ.೪) ಹಾಗೂ ಸೋಮವಾರ (ಡಿ.೫) “ಹನುಮ ಜಯಂತೋತ್ಸವ”ವನ್ನು ಏರ್ಪಡಿಸಲಾಗಿದೆ.
ಡಿ.೪ ಭಾನುವಾರ ಬೆಳಗ್ಗೆ ೭.೦೦ ರಿಂದ ಶ್ರೀ ಅಭಯಾಂಜನೇಯ ಸ್ವಾಮಿಗೆ ಸುಪ್ರಭಾತ ಸೇವೆಯೊಂದಿಗೆ ಆರಂಭವಾಗುವ ಧಾರ್ಮಿಕ ಕೈಂಕರ್ಯಗಳಲ್ಲಿ ಮಹಾಸಂಕಲ್ಪ, ಪಂಚಾಮೃತ ಅಭಿಷೇಕ, ಅಲಂಕಾರದೊಂದಿಗೆ ಸಂಜೆ ಮಹಾಮಂಗಳಾರತಿ ನಡೆಯಲಿದೆ. ತೀರ್ಥ ಪ್ರಸಾದ ವಿನಿಯೋಗದ ಜೊತೆಗೆ ಸಂಜೆ ಮೆಳೇಕೋಟೆ ‘ಲಲಿತಾಸಂಘ’ ದಿಂದ ಷ್ಣುಸಹಸ್ರನಾಮ ಹಾಗೂ ಹನುಮಾ ಹನುಮಾನ್ ಚಾಲಿಸ ಪಠಣ ನ್ ಚಾಲಿಸ ಪಠಣ ನಡೆಯಲಿದೆ.
ಸಂಜೆ ೭ ಕ್ಕೆ ತುಮಕೂರಿನ ರಾಗಲಹರಿ ಸಂಗೀತ ವಿದ್ಯಾಲಯ (ರಿ) ಪ್ರಾಂಶುಪಾಲರಾದ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದೂಷಿ ಸುಮನ ದಾಸರಾಜು ಅವರಿಂದ “ಭಕ್ತಿ ಭಾವ ಸಂಗಮ” ಸುಮಧುರ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಡಿ.೫ರ ಸೋಮವಾರ ಬೆಳಗ್ಗೆ ೭.೦೦ ರಿಂದ ಸುಪ್ರಭಾತ, ಮಹಾಸಂಕಲ್ಪ, ಪಂಚಾಮೃತ ಅಭಿಷೇಕ, ಮಹಾಗಣಪತಿ ಪೂಜೆ, ಕಳಶಾರಾಧನೆ, ನವಗ್ರಹ ಹೋಮ, ಪಂಚಮುಖಿ ಪಂಚಮುಖಿ ಆಂಜನೇಯಸ್ವಾಮಿ ಹೋಮ, ರಜತಾಲಂಕಾರ ರಜತಾಲಂಕಾರ
ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ ತುಮಕೂರಿನ ಶಿರಾ ಗೇಟ್ನ ಶ್ರೀ ರುಕ್ಕö್ಮಣೀ ಪ್ರಿಯ ಭಜನಾ ಮಂಡಳಿ ಯಿಂದ ಭಜನಾ ಕಾರ್ಯಕ್ರಮ ನಂತರ ೧ ಕ್ಕೆ ಪೂರ್ಣಾಹುತಿ, ಮಹಾನೈವೇದ್ಯ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಸಂಜೆ ೬ಕ್ಕೆ ಮೆಳೇಕೋಟೆಯ ಶ್ರೀ ಮಾರುತಿ ಭಜನಾಮಂಡಳಿ ಹಾಗೂ ಲಲಿತಾ ಸಂಘ ಸದಸ್ಯರಿಮದ ಭಜನಾ ಪ್ರಾಕಾರೋತ್ಸವ ನಂತರ ೯.೦೦ ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಟ್ಟಿದೆ.
ಅಭಯಪುರಿ ಪುಣ್ಯಕ್ಷೇತ್ರದ ೨ ದಿನದ ಹನುಮ ಜಯಂತೋತ್ಸವದ ಕಾರ್ಯಕ್ರಮದಲಿ ಪಾಲ್ಗೊಳ್ಳವಂತೆ ಸಾವಜನಿಕರಲ್ಲಿ ಶ್ರೀ ಅಭಯಾಂಜನೇಯ ಸ್ವಾಮಿ ದೇವಸ್ಥಾನ(ದತ್ತಿ) ಧರ್ಮದರ್ಶಿಗಳು ವಿನಂತಿಸಿದ್ದಾರೆ.