Saturday, 26th October 2024

ಸಂವಿಧಾನ ಮತ್ತು ವೃತ್ತಿಧರ್ಮ ವಕೀಲರ ಎರಡು ಕಣ್ಣುಗಳು: ಒಂದನೇ ಜಿಲ್ಲಾ ಸತ್ರ ನ್ಯಾಯಾಧೀಶ ಶಿವಪ್ರಸಾದ್

ಚಿಕ್ಕಬಳ್ಳಾಪುರ: ವಕೀಲಿಕೆ ಸುಲಭದ ವಿಚಾರವಲ್ಲ, ಹಣ ಮಾಡುವು ದಕ್ಕಾಗಿಯೇ ವಕೀಲರಾಗುವವರಿಂದ ಸಮಾಜಕ್ಕೆ ಉಪಯೋಗವಿಲ್ಲ. ಯಾರು ಸಂವಿಧಾನ ಮತ್ತು ವೃತ್ತಿ ಧರ್ಮಕ್ಕೆ ತಲೆಬಾಗಿ ನಡೆಯುವರೋ ಅವರು ನಿಜವಾದ ನ್ಯಾಯ ವಾದಿಗಳಾಗಬಲ್ಲರು ಎಂದು ಒಂದನೇ ಜಿಲ್ಲಾ ಸತ್ರ ನ್ಯಾಯಾಧೀಶ ಶಿವಪ್ರಸಾದ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ವಕೀಲರ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ವಕೀಲರ ದಿನಾಚರಣೆ ಮತ್ತು ಉಚಿತ ಆರೋಗ್ಯ ತಪಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಇತರೆ ವೃತಿಗಳಿಗಿಂತ ವಕೀಲ ವೃತ್ತಿಗೆ ಹೆಚ್ಚಿನ ಮಹತ್ವವಿದೆ. ಬಡವರ, ದೀನದಲಿತರ, ನೊಂದವರ, ಅಸಹಾಯಕರಿಗೆ ಸೇವೆ ಸಲ್ಲಿಸು ವುದು ನನ್ನ ಪ್ರಥಮ ಆಧ್ಯತೆಯಾಗಿದೆ ಎಂಬುದನ್ನು ಸದಾ ಕಾಲ ಮನಸ್ಸಿಗೆ ತಂದುಕೊಳ್ಳ ಬೇಕು.

ಇ0ದು ಕಾನೂನು ಲೋಕ ಸಾಕಷ್ಟು ಪಲ್ಲಟಗಳಿಗೆ ಒಳಗಾಗಿದೆ. ನವಮಾಧ್ಯಮಗಳೊಟ್ಟಿಗೆ ಕೆಲಸ ಮಾಡುವ ಜಾಣ್ಮೆಯನ್ನು ವಕೀಲರು ಪಡೆದುಕೊಳ್ಳುವುದು ಉತ್ತಮ.ಇದಾಗ ಬೇಕಾದರೆ ನಿತ್ಯವೂ ಕೋರ್ಟಿನ ಕಲಾಪಗಳಲ್ಲಿ ಭಾಗಿಯಾಗುವುದು, ಇಲ್ಲೇ ಹೆಚ್ಚಿನ ಸಮಯ ಕಳೆಯುವುದು ಮುಖ್ಯ. ವಿಶೇಷವಾಗಿ ತರುಣ ವಕೀಲರು ಈ ದಿಸೆಯಲ್ಲಿ ಮುನ್ನಡೆಯುವುದು ಅಗತ್ಯವಿದೆ. ತಾಂತ್ರಿಕ ಕೌಶಲ್ಯದೊಟ್ಟಿಗೆ ವಕೀಲ ವೃತ್ತಿ ಸಾಗಿದರೆ ಅದರ ಸೊಗಸೇ ಬೇರೆಯ ರೀತಿ ಇರಲಿದೆ ಎಂದರು.

ವಕೀಲರ ಸಂಘಕ್ಕೆ ನೂತನ ಪದಾಧಿಕಾರಿಗಳು ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿದ್ದಾರೆ. ಜಿಲ್ಲಾ ಕೇಂದ್ರದಲ್ಲಿರುವ ಬಹು ತೇಕರು ಗ್ರಾಮೀಣ ಪ್ರದೇಶದ ಹಿನ್ನೆಲೆಯಿಂದ ಬಂದವರಾದ ಕಾರಣ ತಮ್ಮ ವೃತ್ತಿಯಲ್ಲಿ ನೈಪುಣ್ಯತೆ ಗಳಿಸಲು ಅವರಿಗೆ ಬೇಕಾದ ತರಬೇತಿ ಕಾರ್ಯಾಗಾರಗಳನ್ನು ನಡೆಸುವುದು ಮುಖ್ಯ ಎಂದು ಸಲಹೆ ನೀಡಿದರು.

ಸುಶೀಲ ಜ್ಞಾನವಂತ ಸದೃಡ ವಕೀಲರ ಪಡೆಯು ಸಮಾಜದ ಆಸ್ತಿಯಾಗಲಿದೆ.ಒತ್ತಡದ ಬದುಕಿನ ನಡುವೆ ದೀರ್ಘಕಾಲ ಸಮಾಜಕ್ಕೆ ನಿಮ್ಮ ಸೇವೆ ಒದಗಬೇಕಾದರೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಆರೋಗ್ಯದ ಕಡೆ ಗಮನ ಹರಿಸುವುದು ಮುಖ್ಯ.ಇಂದು ನಗರದ ಜೈನ್ ಮಿಷನ್ ಆಸ್ಪತ್ರೆಯು ವಕೀಲರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿರು ವುದು ಸಂತೋಷದ ವಿಚಾರವಾಗಿದೆ. ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಿ.ಎಲ್ಲರಿಗೂ ವಕೀಲರ ದಿನಾಚರಣೆಯ ಶುಭಾಶಯಗಳು ಎಂದು ಮಾತು ಮುಗಿಸಿದರು.

ಹಿರಿಯ ನ್ಯಾಯಾಧೀಶ ಪಂಡಿತ್ ಮಾತನಾಡಿ ಭಾರತದೇಶದ ರಾಷ್ಟçಪತಿ ಆಗಿದ್ದ ಬಾಬು ರಾಜೇಂದ್ರ ಪ್ರಸಾದ್ ಜನ್ಮದಿನ ವನ್ನು ವಕೀಲರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.ವಕೀಲರು ಮತ್ತು ನ್ಯಾಯಾದೀಶರ ಸಂಬ0ಧ ಉತ್ತಮವಾಗಿದ್ದಾಗ ಮಾತ್ರ ಉತ್ತಮ ತೀರ್ಪುಗಳು ಬರಲು ಸಾಧ್ಯ.ಉತ್ತಮ ವಕೀಲರು ನ್ಯಾಯಾಧೀಶರ ನೆರಳಿದ್ದಂತೆ ಎನ್ನುವ ಮಾತಿದೆ.

ಈ ದಿಸೆಯಲ್ಲಿ ನೀವೆಲ್ಲಾ ನಡೆದುಕೊಳ್ಳುತ್ತೀರೆಂದು ಭಾವಿಸುತ್ತೇನೆ.ಸಂಘವು ಕೂಡ ಉತ್ತಮ ರೀತಿಯಲ್ಲಿ ವಕೀಲರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡಿಕೊಂಡು ಹೋಗುತ್ತದೆ ಎನ್ನುವ ನಂಬಿಕೆ ನಮಗಿದೆ ಎಂದರು. ಇದೇ ವೇಳೆ ಹಿರಿಯ ವಕೀಲ ಪಾಪಿರೆಡ್ಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನ್ಯಾಯಾದೀಶರಾದ ಜರಗು, ಶೃತಿ,ಜೈನ್ ಆಸ್ಪತ್ರೆ ಡಾ. ಸೋಲಂಕಿ,ಉತ್ತಮಚ0ದ್ ಜೈನ್,ನಿಕಟಪೂರ್ವ ಅಧ್ಯಕ್ಷ ತಮ್ಮೇಗೌಡ, ನೂತನ ಅಧ್ಯಕ್ಷ ಆರ್. ಶ್ರೀನಿವಾಸ್, ಬಾಲಕೃಷ್ಣ,ಚಿಕ್ಕವೀರಪ್ಪ, ಮತ್ತಿತರರು ಇದ್ದರು.