ಉಮರ್ ಖಾಲಿದ್ ಹಾಗೂ ಮತ್ತೋರ್ವ ಜೆಎನ್ಯು ಮಾಜಿ ವಿದ್ಯಾರ್ಥಿ ಹಾಗೂ ಯುನೈಟೆಡ್ ಅಗೈನ್ಸ್ಟ್ಹೇಟ್ ಸಂಸ್ಥಾಪಕ ಖಾಲಿದ್ ಸೈಫಿ ಎರಡು ವರ್ಷದ ಹಿಂದೆ ದೆಹಲಿಯ ಚಾಂದ್ಬಾಗ್ನಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇರೆಗೆ ಬಂಧಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯ ಕರ್ಕರ್ಡೂಮಾ ನ್ಯಾಯಾಲಯ ತೀರ್ಪು ನೀಡಿದ್ದು, ದೆಹಲಿಯ ಚಾಂದ್ಬಾಗ್ನಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಖಾಲಿದ್ ಮತ್ತು ಸೈಫಿ ವಿರುದ್ಧ ಸಾಕ್ಷ್ಯಾಧಾರಗಳ ಕೊರೆತೆಯಿಂದಾಗಿ ಅವರನ್ನು ಖುಲಾಸೆಗೊಳಿಸಿದೆ. ಆದರೆ ದೆಹಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಉಮರ್ ಖಾಲಿದ್ಗೆ ಜಾಮೀನು ಸಿಕ್ಕಿದ್ದರೂ, ಬಿಡುಗಡೆ ಭಾಗ್ಯ ಇನ್ನು ದೊರೆತಿಲ್ಲ.