ಇಲ್ಲಿನ ಹಾರಕೂಡ ಶ್ರೀ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ, ಎನ್.ಪಿ.ಎಸ್ ನೌಕರರ ಜಾಗೃತಿ ಸಮಾವೇಶ ಹಾಗೂ ಓಪಿಎಸ್ ಸಂಕಲ್ಪದ ವಿಚಾರ ಸಂಕಿರಣ ಮತ್ತು ಪದಾಧಿಕಾರಿಗಳ ಪದ ಗ್ರಹಣ ಸಮಾರಂಭದಲ್ಲಿ ಮಾತನಾಡಿ, ನಾವು ರಕ್ತ ಕೊಟ್ಟೆವು ಎನ್.ಪಿ.ಎಸ್ ರದ್ದತಿಯ ಹಕ್ಕು, ಹೋರಾಟವನ್ನು ಬಿಡುವುದಿಲ್ಲ ಎಂದರು.
ಸಿದ್ದಪ್ಪ ಸಂಗಣ್ಣನವರ್ ಮಾತನಾಡಿ, ರಾಜಸ್ಥಾನ, ಪಂಜಾಬ್ ಸೇರಿದಂತೆ ದೇಶದ 4 ರಾಜ್ಯಗಳಲ್ಲಿ ಎನ್. ಪಿ. ಎಸ್ ರದ್ದು ಪಡಿಸ ಲಾಗಿದೆ. ಕರ್ನಾಟಕದಲ್ಲಿ ಯಾಕೆ ಆಗುತ್ತಿಲ್ಲ? ಪಿಂಚಣಿ ಕೇವಲ ಆರ್ಥಿಕ ಭದ್ರತೆ ಅಲ್ಲ. ಆಂತರಿಕ ಭದ್ರತೆ ಆಗಿದೆ. ರಾಜ್ಯದ ಯಾವುದೇ ಪಕ್ಷವು ಅಧಿಕಾರಕ್ಕೆ ಬಂದರು, ನೌಕರರ ಎನ್.ಪಿ.ಎಸ್ ರದ್ದು ಪಡಿಸುವ ಹೋರಾಟದ ಬೇಡಿಕೆ ಈಡೇರಿಸಿಲ್ಲ. 2006 ರಿಂದ ಸರಕಾರಿ ನೌಕರರ ಸ್ವಾಭಿಮಾನವನ್ನು ಕಿತ್ತೂಕೊಳ್ಳ ಲಾಗಿದೆ ಎಂದು ಹೇಳಿದರು.
ಇದೇ ಡಿ.19 ರಂದು ಬೆಂಗಳೂರಿನ ಫ್ರಿಡಂ ಪಾರ್ಕನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮೂಲಕ ಮಾಡು ಇಲವೇ ಮಡಿ ಎಂಬ ಸಂಕಲ್ಪ ಇಟ್ಟುಕೊಂಡು ಹೋರಾಟ ನಡೆಸಲು ತೀರ್ಮಾನಿಸಲಾಗಿದ್ದು, ಹೋರಾಟ ಸಂವಿಧನಾತ್ಮಕ ಹಕ್ಕಿನ ಹೋರಾಟವಾಗಿದೆ ಎಂದರು.
ಬಿಇಓ ನಾಗಶೆಟ್ಟಿ ಭದ್ರಶೆಟ್ಟಿ ಅವರು ಮಾತನಾಡಿದರು. ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಮನವಿಯನ್ನು ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ತಾಲೂಕ ಅಧ್ಯಕ್ಷ ಶಿವಪ್ರಸಾದ್ ಪಿ. ಜಿ, ಅಶೋಕ ಹೂವಿನಬಾವಿ, ಸುರೇಶ ಕೊರವಿ, ಜಯಪ್ಪ ಚಾಪೆಲ್, ದೇವೀಂದ್ರಪ್ಪ ಹೊಳ್ಕರ್, ಮಲ್ಲಿಕಾರ್ಜುನ ಪಾಲಾಮೂರ್, ನಾಗೇಂದ್ರಪ್ಪ ಬೇಡಕಪಳ್ಳಿ, ಗಣಪತಿ ದೇವಕತೆ ಅವರು ಇದ್ದರು.