Friday, 22nd November 2024

ರಾಷ್ಟ್ರೀಯ ಪಕ್ಷವಾಗಲಿದೆ ಆಮ್ ಆದ್ಮಿ..!

ವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳಲ್ಲಿ ಗಳಿಕೆಯಾದ ಮತಗಳ ಪ್ರಮಾಣದಿಂದ ಅಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಪರಿವರ್ತನೆಯಾಗಲಿದೆ.

ದೆಹಲಿ ಮತ್ತು ಪಂಜಾಬ್ ಸೇರಿ ಎರಡೂ ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿದಿದ್ದು, ದೆಹಲಿ ಮಹಾನಗರ ಪಾಲಿಕೆ ಯಲ್ಲಿ ಅಭೂತಪೂರ್ವ ಬೆಂಬಲ ಗಳಿಸಿದೆ. 2012ರಲ್ಲಿ ಸರಿಯಾಗಿ 10 ವರ್ಷಗಳ ಹಿಂದೆ ಆರಂಭಗೊಂಡು ಆಪ್ ಹೆಸರಿನಿಂದ ರಾಜ ಕೀಯ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವ ಅಮ್ ಆದ್ಮಿ ಹಂತ ಹಂತವಾಗಿ ಪ್ರಚಲಿತವಾಗುತ್ತಿದೆ.

 

ದೇಶಾದ್ಯಂತ 157 ಶಾಸಕರನ್ನು ಹೊಂದಿದೆ. ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆ ಯಲ್ಲೂ ಅಮ್ ಆದ್ಮಿ ಸ್ಪರ್ಧಿಸಿತ್ತು.

ಪಂಜಾಬ್ ವಿಧಾನಸಭೆಯಲ್ಲಿ ಶೇ.18.3ರಷ್ಟು, ದೆಹಲಿ ವಿಧಾನಸಭೆಯಲ್ಲಿ ಶೇ.23ರಷ್ಟು ಮತ ಗಳಿಸಿತ್ತು. ಗೋವಾ ಚುನಾವಣೆ ಯಲ್ಲಿ ಶೇ.0.5ರಷ್ಟು ಮತ ಗಳಿಸಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಶೇ. 2.1ರಷ್ಟು, 2019ರ ಚುನಾವಣೆಯಲ್ಲಿ 0.4ರಷ್ಟು ಮತ ಗಳಿಸಿದೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅಮ್ ಆದ್ಮಿ ಶೇ.12ರಷ್ಟು ಮತ ಗಳಿಸಿದೆ.

ಹಿಮಾಚಲಪ್ರದೇಶದಲ್ಲಿ ಶೇ.1ಕ್ಕಿಂತ ಹೆಚ್ಚಿನ ಮತಗಳಿಸಿದೆ. ಈ ಮೂಲಕ ಚುನಾವಣಾ ಆಯೋಗದ ಮಾನದಂಡಗಳನ್ನು ಪೂರ್ಣ ಗೊಳಿಸಿ ರಾಷ್ಟ್ರೀಯ ಪಕ್ಷವಾಗುವ ಅರ್ಹತೆ ಪಡೆದುಕೊಂಡಿದೆ.

ದೇಶದಲ್ಲಿ ಭಾರತೀಯ ಕಾಂಗ್ರೆಸ್, ಬಿಜೆಪಿ, ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಿಪಿಐ, ಸಿಪಿಎಂ, ಸಿಪಿಐ, ಬಿಎಸ್‍ಪಿ, ಎಂಸಿಪಿಗಳು ಮಾತ್ರ ರಾಷ್ಟ್ರೀಯ ಪಕ್ಷಗಳಾಗಿದ್ದವು. ಈಗ ಅಮ್ ಆದ್ಮಿ ಸೇರ್ಪಡೆಯಾಗಲಿದೆ.