ಚಿಕ್ಕನಾಯಕನಹಳ್ಳಿ : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸಿ.ಜಿ.ಶಿವಕುಮಾರ್ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗಿದೆ.
ನೊಳಂಬ ಅರಸರ ಆಳ್ವಿಕೆ ಒಂದು ಅಧ್ಯಯನ ಎನ್ನುವ ಮಹಾ ಪ್ರಬಂಧ ಮಂಡನೆಗೆ ಡಾಕ್ಟರೇಟ್ ಪದವಿ ನೀಡಲಾಗಿದೆ. ಇವರು ಬೆಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರಾದ ಡಾ.ಷಡಕ್ಷರಯ್ಯನವರ ಮಾರ್ಗದರ್ಶನದಲ್ಲಿ ತನ್ನ ಸಂಶೋ ಧನ ಕಾರ್ಯ ಮುಗಿಸಿರುತ್ತಾರೆ.