Friday, 20th September 2024

ಸೆ.12 ರಿಂದ ಮತ್ತೆ 80 ಹೊಸ ರೈಲು

ದೆಹಲಿ: ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ಸೆಪ್ಟೆೆಂಬರ್ 12 ರಿಂದ 80 ಹೊಸ ವಿಶೇಷ ರೈಲುಗಳ ಸಂಚಾರ
ಆರಂಭವಾಗಲಿದೆ.

ಇದು ಈಗಾಗಲೇ ಚಾಲ್ತಿಯಲ್ಲಿರುವ 230 ವಿಶೇಷ ರೈಲುಗಳಿಗೆ ಹೊರತಾಗಿರಲಿದೆ ಎಂದು ರೈಲ್ವೆೆ ಸಚಿವಾಲಯ ತಿಳಿಸಿದೆ. 80 ಹೊಸ
ರೈಲುಗಳು ಎಂದರೆ 40 ಜೋಡಿ ರೈಲುಗಳು ಎಂದು ಸಚಿವಾಲಯ ತಿಳಿಸಿದೆ. ಇದರಲ್ಲಿ ಕರ್ನಾಟಕಕ್ಕೆೆ ಸಂಬಂಧಿಸಿದ 7 ರೈಲುಗಳಿವೆ.
ಈ ವಿಶೇಷ ರೈಲುಗಳಿಗಾಗಿ ಸೆಪ್ಟೆೆಂಬರ್ 10 ರಿಂದ ರಿಸರ್ವೇಶನ್ ಆರಂಭವಾಗಲಿದೆ. ರೈಲುಗಳು ಭರ್ತಿಯಾಗಿ ಇನ್ನೂ ಬೇಡಿಕೆ ಇದ್ದರೆ ಅಂಥ ಮಾರ್ಗಗಳಲ್ಲಿ ಬೇಡಿಕೆಗಳಿಗೆ ಅನುಗುಣವಾಗಿ ಮತ್ತೊೊಂದು ಅದೇ ರೈಲನ್ನು ಓಡಿಸಲಾಗುವುದು ಎಂದೂ ಸಚಿವಾಲಯ ತಿಳಿಸಿದೆ.

ಈ ರೈಲುಗಳ ಯಾವವು ಎಮಬುದನ್ನು ನಿರ್ಧರಿಸಲು ಪರಿಗಣಿಸಲಾಗಿರುವ ಅಂಶವೆಂದರೆ ಈ ಮಾರ್ಗಗಳಲ್ಲಿ ವಲಸೆ
ಕಾರ್ಮಿಕರು ಹೆಚ್ಚಾಗಿದ್ದು, ಅವರೆಲ್ಲ ವಾಪಸು ಬರಲು ಅನುಕೂಲವಾಗಲಿದೆ. ಸದ್ಯ ಭಾರತೀಯ ರೈಲ್ವೆೆಯು ಮಾರ್ಚ್
22 ರಿಂದ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿಯವರೆಗೆ ಬಂದು ಮಾಡಿದೆ. ಆದರೆ ಶ್ರಮಿಕ್ ಸ್ಪೆೆಶಲ್ ರೈಲುಗಳನ್ನು,
ಅನಂತರ ವಿಶೇಷ ರೈಲುಗಳ ಸಂಚಾರವನ್ನು ಆಯ್ದ ರೂಟ್ ಗಳಲ್ಲಿ ಆರಂಭಿಸಿತ್ತು. ಸೆಪ್ಟೆೆಂಬರ್ 7 ರಿಂದ ಅನ್‌ಲಾಕ್-4
ಅನ್ವಯ ಇನ್ನಷ್ಟು ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳು ಆರಂಭವಾಗಲಿವೆ. ಅದರಲ್ಲಿ ಹಂತಹಂತವಾಗಿ ಮೆಟ್ರೊ
ಆರಂಭವೂ ಸೇರಿದೆ. ಹಾಗೆಯೇ ಹೆಚ್ಚು ಸಂಖ್ಯೆೆಯ ರೈಲು ಸಂಚಾರವನ್ನೂ ಆರಂಭಿಸಲು ರೈಲ್ವೆೆ ಮುಂದಾಗಿದೆ.